- Kannada News Photo gallery Cricket photos Chinnaswamy Stadium is ready for RCB vs GT Clash watch Kohli, Faf and Maxwell practice Photos
RCB vs GT: ಹೈವೋಲ್ಟೇಜ್ ಕದನಕ್ಕೆ ಚಿನ್ನಸ್ವಾಮಿಯಲ್ಲಿ KGF ಭರ್ಜರಿ ಪ್ರ್ಯಾಕ್ಟೀಸ್: ಫೋಟೋ ನೋಡಿ
ಗುಜರಾತ್ ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕಾಗಿ ಆರ್ಸಿಬಿ ಪ್ಲೇಯರ್ಸ್ ಚಿನ್ನಸ್ವಾಮಿಯಲ್ಲಿ ಭರ್ಜರಿ ಅಭ್ಯಾಸ ನಡೆಸುತ್ತಿದ್ದಾರೆ. ಫಾಫ್, ಕೊಹ್ಲಿ, ಮ್ಯಾಕ್ಸ್ವೆಲ್ ಸೇರಿದಂತೆ ಎಲ್ಲ ಆಟಗಾರರು ಪ್ರ್ಯಾಕ್ಟೀಸ್ನಲ್ಲಿ ನಿರತರಾಗಿದ್ದಾರೆ.
Updated on: May 21, 2023 | 9:41 AM

ಐಪಿಎಲ್ 2023 ರಲ್ಲಿಂದು ಮಹತ್ವದ ಪಂದ್ಯ ನಡೆಯಲಿದೆ. ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ಮುಖಾಮುಖಿ ಆಗಲಿದೆ. ಈ ಪಂದ್ಯದಲ್ಲಿ ಆರ್ಸಿಬಿ ಗೆಲ್ಲಲೇ ಬೇಕಾಗಿದ್ದು, ಸೋತರೆ ಮುಂಬೈ ಇಂಡಿಯನ್ಸ್ ಹಾಗೂ ಹೈದರಾಬಾದ್ ಪಂದ್ಯದ ಫಲಿತಾಂಶದ ಮೇಲೆ ಪ್ಲೇ ಆಫ್ ಭವಿಷ್ಯ ನಿರ್ಧಾರವಾಗುತ್ತದೆ.

ಈ ಹೈವೋಲ್ಟೇಜ್ ಪಂದ್ಯಕ್ಕಾಗಿ ಆರ್ಸಿಬಿ ಪ್ಲೇಯರ್ಸ್ ಚಿನ್ನಸ್ವಾಮಿಯಲ್ಲಿ ಭರ್ಜರಿ ಅಭ್ಯಾಸ ನಡೆಸುತ್ತಿದ್ದಾರೆ. ಫಾಫ್, ಕೊಹ್ಲಿ, ಮ್ಯಾಕ್ಸ್ವೆಲ್ ಸೇರಿದಂತೆ ಎಲ್ಲ ಆಟಗಾರರು ಪ್ರ್ಯಾಕ್ಟೀಸ್ನಲ್ಲಿ ನಿರತರಾಗಿದ್ದಾರೆ.

ಆರ್ಸಿಬಿ ಹಿಂದಿನ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿ ಗೆದ್ದು ಬೀಗಿತ್ತು. ವಿರಾಟ್ ಕೊಹ್ಲಿ ಶತಕ ಸಿಡಿಸಿ ಮಿಂಚಿದ್ದರು. ಫಾಫ್ ಡುಪ್ಲೆಸಿಸ್ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ಭರ್ಜರಿ ಫಾರ್ಮ್ನಲ್ಲಿದ್ದಾರೆ.

ಮಹಿಪಾಲ್ ಲುಮ್ರೂರ್, ದಿನೇಶ್ ಕಾರ್ತಿಕ್, ಅನುಜ್ ರಾವತ್ ಕಡೆಯಿಂದ ಇನ್ನಷ್ಟು ರನ್ ಬರಬೇಕು. ಕೇದರ್ ಜಾಧವ್ ಒಂದು ಬಾರಿ ಮಾತ್ರ ಕಣಕ್ಕಿಳಿದಿದ್ದರು.

ಬೌಲಿಂಗ್ನಲ್ಲಿ ಆರ್ಸಿಬಿ ಲಯ ಕಂಡುಕೊಂಡಿದೆ. ಮೊಹಮ್ಮದ್ ಸಿರಾಜ್ ಮತ್ತು ವೇಯ್ನ್ ಪಾರ್ನೆಲ್ ತಂತ್ರದೊಂದಿಗೆ ಬೌಲಿಂಗ್ ಮಾಡುತ್ತಿದ್ದಾರೆ. ಮಿಚೆಲ್ ಬ್ರೆಸ್ವೆಲ್ ಕೂಡ ಉತ್ತಮ ಬೌಲಿಂಗ್ ಮಾಡುತ್ತಿದ್ದಾರೆ.

ಚಿನ್ನಸ್ವಾಮಿ ಪಿಚ್ನಲ್ಲಿ ಚೆಂಡು ಬ್ಯಾಟ್‌ಗೆ ಚೆನ್ನಾಗಿ ಬರುವುದರಿಂದ ಬ್ಯಾಟಿಂಗ್ಗೆ ಹೇಳಿ ಮಾಡಿಸಿದಂತಿದೆ. ಬೌಲರ್ಗಳು ಇಲ್ಲಿ ಶಕ್ತಿ ಮೀರಿ ಪ್ರಯತ್ನ ತೋರಬೇಕು. ಎಷ್ಟೇ ದೊಡ್ಡ ಮೊತ್ತವನ್ನು ಬಾರಿಸಿದರೂ ಇಲ್ಲಿ ಚೇಸ್ ಮಾಡಿ ಗೆಲುವು ಸಾಧಿಸಿಬಹುದು.

ಆರ್ಸಿಬಿ ಮತ್ತು ಜಿಟಿ ನಡುವಿನ ಪಂದ್ಯವು ಸಂಜೆ 7.30 ಕ್ಕೆ ಪ್ರಾರಂಭವಾಗುತ್ತದೆ. ಟಾಸ್ 7 ಗಂಟೆಗೆ ನಡೆಯಲಿದೆ. ಆದರೆ, ಈ ಪಂದ್ಯಕ್ಕೆ ವರುಣ ಅಡಚಣೆಯನ್ನುಂಟು ಮಾಡಲಿದೆ. ಸಂಜೆ 5 ಗಂಟೆ, 7 ಗಂಟೆ ಹಾಗೂ 9 ಗಂಟೆಯ ವೇಳೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಲಾಗಿದೆ.
