AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023: ಗುಜರಾತ್ ಟೈಟಾನ್ಸ್ ಬಲಿಷ್ಠ, ಆದರೆ RCB…

IPL 2023 Kannada: RCB ತಂಡ ಹೀಗಿದೆ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಮೈಕೆಲ್ ಬ್ರೇಸ್​ವೆಲ್​, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್​ವುಡ್​, ಮೊಹಮ್ಮದ್ ಸಿರಾಜ್, ಕರ್ಣ್​ ಶರ್ಮಾ, ಸಿದ್ಧಾರ್ಥ್​ ಕೌಲ್.

TV9 Web
| Updated By: ಝಾಹಿರ್ ಯೂಸುಫ್

Updated on: May 20, 2023 | 9:21 PM

IPL 2023 RCB vs GT: ಐಪಿಎಲ್​ನ 70ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಗುಜರಾತ್ ಪಾಲಿಗೆ ಔಪಚಾರಿಕವಾಗಿದ್ದರೆ, ಆರ್​ಸಿಬಿ ಪಾಲಿಗೆ ನಿರ್ಣಾಯಕ.

1 / 8
ಏಕೆಂದರೆ ಗುಜರಾತ್ ಟೈಟಾನ್ಸ್ ತಂಡವು ಈಗಾಗಲೇ ಪ್ಲೇಆಫ್​ಗೆ ಪ್ರವೇಶಿಸಿದೆ. ಆದರೆ ಆರ್​ಸಿಬಿ ಪ್ಲೇಆಫ್​ಗೆ ಪ್ರವೇಶಿಸಲು ಗುಜರಾತ್ ಟೈಟಾನ್ಸ್ ವಿರುದ್ಧ ಗೆಲ್ಲಲೇಬೇಕು. ಹೀಗಾಗಿ ಆರ್​ಸಿಬಿ ಪಾಲಿಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ.

2 / 8
ಈ ನಿರ್ಣಾಯಕ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆ ಎಂಬುದೇ ಈಗ ಕುತೂಹಲ. ಏಕೆಂದರೆ ಮೇಲ್ನೋಟಕ್ಕೆ ಉಭಯ ತಂಡಗಳು ಸಮಬಲ ಹೊಂದಿದೆ. ಅಂದರೆ ಐಪಿಎಲ್ 2022 ರಲ್ಲಿ 2 ಪಂದ್ಯಗಳಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿತ್ತು.

3 / 8
ಈ ವೇಳೆ ಒಂದು ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ 6 ವಿಕೆಟ್​ಗಳಿಂದ ಜಯ ಸಾಧಿಸಿದರೆ, ಮತ್ತೊಂದು ಪಂದ್ಯವನ್ನು ಆರ್​ಸಿಬಿ 8 ವಿಕೆಟ್​ಗಳಿಂದ ಗೆದ್ದುಕೊಂಡಿತ್ತು. ಅಂದರೆ ಇಲ್ಲಿ ಎರಡೂ ತಂಡಗಳು ಸಮಬಲ ಸಾಧಿಸಿರುವುದು ಸ್ಪಷ್ಟ.

4 / 8
ಇದಾಗ್ಯೂ ಈ ಬಾರಿಯ ಟೂರ್ನಿಯಲ್ಲಿನ ಪ್ರದರ್ಶನವನ್ನು ಗಣನೆಗೆ ತೆಗೆದುಕೊಂಡರೆ ಗುಜರಾತ್ ಟೈಟಾನ್ಸ್ ತಂಡವು ಆಡಿರುವ 13 ಪಂದ್ಯಗಳಲ್ಲಿ 9 ಜಯ ಸಾಧಿಸಿದೆ. ಇತ್ತ ಆರ್​ಸಿಬಿ ತಂಡವು 13 ಪಂದ್ಯಗಳಲ್ಲಿ ಗೆದ್ದಿರುವುದು 7 ಪಂದ್ಯಗಳಲ್ಲಿ ಮಾತ್ರ. ಅಂದರೆ ಆರ್​ಸಿಬಿಗಿಂತ ಗುಜರಾತ್ ಮುಂದಿದೆ.

5 / 8
ಆದರೆ ಕಳೆದ ಎರಡು ಪಂದ್ಯಗಳಲ್ಲಿ ಅಮೋಘ ಜಯ ಸಾಧಿಸುವ ಮೂಲಕ ಆರ್​ಸಿಬಿ ಹೊಸ ಹುಮ್ಮಸ್ಸಿನಲ್ಲಿದೆ. ಹೀಗಾಗಿ ಇಲ್ಲಿ ಗುಜರಾತ್ ಟೈಟಾನ್ಸ್ ತಂಡವು ಬಲಿಷ್ಠವಾಗಿ ಕಂಡು ಬಂದರೂ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಹಾರ್ದಿಕ್ ಪಾಂಡ್ಯ ಪಡೆಯನ್ನು ಬಗ್ಗು ಬಡಿಯುವ ಸಾಮರ್ಥ್ಯ ಆರ್​ಸಿಬಿಗಿದೆ ಎನ್ನಬಹುದು.

6 / 8
ಗುಜರಾತ್ ಟೈಟಾನ್ಸ್ ತಂಡ ಹೀಗಿದೆ: ವೃದ್ಧಿಮಾನ್ ಸಾಹ (ವಿಕೆಟ್ ಕೀಪರ್), ಶುಭ್​ಮನ್ ಗಿಲ್, ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ(ನಾಯಕ), ವಿಜಯ್ ಶಂಕರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೊಹಮ್ಮದ್ ಶಮಿ, ಜೋಶ್ವ ಲಿಟಲ್, ಯಶ್ ದಯಾಳ್, ಅಲ್ಜಾರಿ ಜೋಸೆಫ್, ಜಯಂತ್ ಯಾದವ್, ಮೋಹಿತ್ ಶರ್ಮಾ, ಶ್ರೀಕರ್ ಭರತ್, ಅಭಿನವ್ ಮನೋಹರ್, ಪ್ರದೀಪ್ ಸಾಂಗ್ವಾನ್, ಮ್ಯಾಥ್ಯೂ ವೇಡ್, ಒಡಿಯನ್ ಸ್ಮಿತ್, ಡೇವಿಡ್ ಮಿಲ್ಲರ್,  ಸಾಯಿ ಕಿಶೋರ್, ಶಿವಂ ಮಾವಿ, ದರ್ಶನ್ ನಲ್ಕಂಡೆ, ಉರ್ವಿಲ್ ಪಟೇಲ್

7 / 8
RCB ತಂಡ ಹೀಗಿದೆ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಮೈಕೆಲ್ ಬ್ರೇಸ್​ವೆಲ್​, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್​ವುಡ್​, ಮೊಹಮ್ಮದ್ ಸಿರಾಜ್, ಕರ್ಣ್​ ಶರ್ಮಾ, ಸಿದ್ಧಾರ್ಥ್​ ಕೌಲ್, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್, ಗ್ಲೆನ್ ಮ್ಯಾಕ್ಸ್​ವೆಲ್, ವನಿಂದು ಹಸರಂಗ, ಮಹಿಪಾಲ್ ಲೋಮ್ರರ್, ಶಹಬಾಝ್ ಅಹ್ಮದ್, ಹರ್ಷಲ್ ಪಟೇಲ್, ಆಕಾಶ್ ದೀಪ್, ಕೇದಾರ್ ಜಾಧವ್, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಸೋನು ಯಾದವ್, ವೇಯ್ನ್ ಪಾರ್ನೆಲ್, ವೈಶಾಕ್ ವಿಜಯಕುಮಾರ್.

8 / 8
Follow us