ಬರೋಬ್ಬರಿ 31 ಸಿಕ್ಸ್​: ರಜತ್ ಪಾಟಿದಾರ್ ಪವರ್​ಗೆ ಸಿಕ್ಸರ್​ಗಳ ಸುರಿಮಳೆ..!

|

Updated on: Dec 17, 2024 | 6:53 AM

IPL 2025 RCB: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ರಲ್ಲಿ ರಜತ್ ಪಾಟಿದಾರ್ ಆರ್​ಸಿಬಿ ಪರ ಕಣಕ್ಕಿಳಿಯಲಿದ್ದಾರೆ. ಕಳೆದ ಎರಡು ಸೀಸನ್​​ಗಳಲ್ಲಿ ಆರ್​ಸಿಬಿ ಪರ ಬ್ಯಾಟ್ ಬೀಸಿದ್ದ ರಜತ್ 24 ಇನಿಂಗ್ಸ್​ಗಳ ಮೂಲಕ ಒಟ್ಟು 799 ರನ್ ಕಲೆಹಾಕಿದ್ದಾರೆ. ಇದೀಗ ಅದ್ಭುತ ಲಯದಲ್ಲಿರುವ ಪಾಟಿದಾರ್ ಕಡೆಯಿಂದ ಈ ಬಾರಿ ಕೂಡ ಸಿಡಿಲಬ್ಬರದ ನಿರೀಕ್ಷಿಸಬಹುದು.

1 / 5
ದೇಶೀಯ ಅಂಗಳದ ಟಿ20 ಟೂರ್ನಿ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿಗೆ ತೆರೆಬಿದ್ದಿದೆ. ಫೈನಲ್ ಪಂದ್ಯದಲ್ಲಿ ಮಧ್ಯ ಪ್ರದೇಶ್ ತಂಡವನ್ನು 5 ವಿಕೆಟ್​​ಗಳಿಂದ ಸೋಲಿಸಿ ಮುಂಬೈ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ. ವಿಶೇಷ ಎಂದರೆ ಈ ಬಾರಿ ಮಧ್ಯ ಪ್ರದೇಶ್ ತಂಡವನ್ನು ಮುನ್ನಡೆಸಿದ್ದು ಆರ್​ಸಿಬಿ ಆಟಗಾರ ರಜತ್ ಪಾಟಿದಾರ್.

2 / 5
ಟೂರ್ನಿಯುದ್ದಕ್ಕೂ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ರಜತ್ ಪಾಟಿದಾರ್ ಮಧ್ಯ ಪ್ರದೇಶ್ ತಂಡ ಫೈನಲ್​ಗೆ ಪ್ರವೇಶಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅಲ್ಲದೆ ಟೂರ್ನಿಯಲ್ಲಿ ಅತ್ಯಧಿಕ ರನ್ ಕಲೆಹಾಕಿದ 2ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

3 / 5
ಅದರಲ್ಲೂ ಸಿಕ್ಸ್​-ಫೋರ್​ಗಳ ವಿಷಯದಲ್ಲಿ ರಜತ್ ಪಾಟಿದಾರ್ ಅಗ್ರಸ್ಥಾನದಲ್ಲಿದ್ದಾರೆ. ಅಂದರೆ ಈ ಬಾರಿಯ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ಬ್ಯಾಟರ್ ಪಾಟಿದಾರ್. 9 ಇನಿಂಗ್ಸ್​ಗಳಲ್ಲಿ ಕಣಕ್ಕಿಳಿದಿದ್ದ ರಜತ್ 186.09ರ ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿದ್ದರು.

4 / 5
ಈ ವೇಳೆ ರಜತ್ ಪಾಟಿದಾರ್ ಬ್ಯಾಟ್​ನಿಂದ ಮೂಡಿಬಂದ ಸಿಕ್ಸ್​​ಗಳ ಸಂಖ್ಯೆ 31. ಅಲ್ಲದೆ ಈ ಬಾರಿಯ ಟೂರ್ನಿಯಲ್ಲಿ ಮೂವತ್ತಕ್ಕಿಂತ ಹೆಚ್ಚು ಸಿಕ್ಸ್ ಸಿಡಿಸಿದ ಏಕೈಕ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದರ ಜೊತೆಗೆ 32 ಫೋರ್​​ಗಳನ್ನು ಸಹ ಬಾರಿಸಿದ್ದಾರೆ. ಈ ಮೂಲಕ 9 ಇನಿಂಗ್ಸ್​ಗಳಲ್ಲಿ 5 ಅರ್ಧಶತಕದೊಂದಿಗೆ 428 ರನ್ ಕಲೆಹಾಕಿದ್ದಾರೆ.

5 / 5
ಇದೀಗ ದೇಶೀಯ ಅಂಗಳದಲ್ಲಿ ಸಿಡಿಲಬ್ಬರ ಪ್ರದರ್ಶಿಸಿರುವ ರಜತ್ ಪಾಟಿದಾರ್ ಐಪಿಎಲ್​ನಲ್ಲೂ ಅಬ್ಬರಿಸುವ ನಿರೀಕ್ಷೆಯಿದೆ. ಏಕೆಂದರೆ RCB ಪರ 24 ಇನಿಂಗ್ಸ್ ಆಡಿರುವ ಪಾಟಿದಾರ್ 799 ರನ್ ಕಲೆಹಾಕಿದ್ದಾರೆ. ಈ ವೇಳೆ 54 ಸಿಕ್ಸ್ ಹಾಗೂ 51 ಫೋರ್ ಸಿಡಿಸಿದ್ದರು. ಇದೀಗ ಭರ್ಜರಿ ಫಾರ್ಮ್​ನಲ್ಲಿರುವ ಪಾಟಿದಾರ್ ಕಡೆಯಿಂದ ಈ ಬಾರಿಯ ಐಪಿಎಲ್​ನಲ್ಲಿ ಸಿಕ್ಸರ್​​ಗಳ ಸುರಿಮಳೆ ನಿರೀಕ್ಷಿಸಬಹುದು.