Rishabh Pant: ನಾಯಕನಾಗಿ ಅತ್ಯಂತ ಕೆಟ್ಟ ದಾಖಲೆ ಬರೆದ ರಿಷಭ್ ಪಂತ್

| Updated By: ಝಾಹಿರ್ ಯೂಸುಫ್

Updated on: Jun 19, 2022 | 8:09 PM

India vs South Africa 5th T20: ಭಾರತದಲ್ಲಿ ಟಿ20 ಕ್ರಿಕೆಟ್​ನಲ್ಲಿ ಸೌತ್ ಆಫ್ರಿಕಾ ವಿರುದ್ದ ಇದುವರೆಗೆ ಟೀಮ್ ಇಂಡಿಯಾ ಸರಣಿ ಗೆದ್ದಿಲ್ಲ. 2015ರಲ್ಲಿ ಧೋನಿ ನಾಯಕರಾಗಿದ್ದಾಗ ಭಾರತ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋತಿತ್ತು.

1 / 5
 ಭಾರತ-ಸೌತ್ ಆಫ್ರಿಕಾ ನಡುವಣ ಐದು ಪಂದ್ಯಗಳ ಸರಣಿಯಲ್ಲಿ ಟೀಮ್ ಇಂಡಿಯಾ ಮೊದಲೆರಡು ಪಂದ್ಯಗಳಲ್ಲಿ ಸೋತರೂ ಆ ಬಳಿಕ ಕಂಬ್ಯಾಕ್ ಮಾಡಿತು. ಅದರಂತೆ ನಾಲ್ಕನೇ ಪಂದ್ಯದ ಮುಕ್ತಾಯದ ವೇಳೆ ಉಭಯ ತಂಡಗಳು ಸಮಬಲ ಸಾಧಿಸಿತ್ತು. ಅದರಂತೆ ಫೈನಲ್ ಪಂದ್ಯಕ್ಕೆ ಸಜ್ಜಾದ ಟೀಮ್ ಇಂಡಿಯಾಗೆ ಮತ್ತೊಮ್ಮೆ ನಿರಾಸೆ ಕಾದಿತ್ತು. ಅದೇನೆಂದರೆ ಟೀಮ್ ಇಂಡಿಯಾ ಈ ಸರಣಿಯಲ್ಲಿ ಒಂದೇ ಒಂದು ಬಾರಿ ಟಾಸ್ ಗೆದ್ದಿಲ್ಲ.

2 / 5
ಚೊಚ್ಚಲ ಬಾರಿಗೆ ನಾಯಕನಾಗಿ ತಂಡವನ್ನು ಮುನ್ನಡೆಸಿದ ರಿಷಭ್ ಪಂತ್ ಐದು ಪಂದ್ಯಗಳಲ್ಲೂ ಟಾಸ್ ಸೋತಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ಪರ ಮೊದಲ ಸರಣಿಯಲ್ಲೇ ಎಲ್ಲಾ ಪಂದ್ಯಗಳಲ್ಲಿ ಟಾಸ್ ಸೋತ ಮೊದಲ ನಾಯಕ ಎಂಬ ಕೆಟ್ಟ ದಾಖಲೆಯೊಂದನ್ನು ರಿಷಭ್ ಪಂತ್ ನಿರ್ಮಿಸಿದ್ದಾರೆ.

3 / 5
ಅತ್ತ ಸೌತ್ ಆಫ್ರಿಕಾ ಎರಡು ನಾಯಕರುಗಳನ್ನು ಕಣಕ್ಕಿಳಿಸಿದರೂ ಟಾಸ್ ಸೋತಿಲ್ಲ ಎಂಬುದು ವಿಶೇಷ. ಅಂದರೆ ನಾಲ್ಕು ಪಂದ್ಯಗಳಲ್ಲಿ ತೆಂಬಾ ಬವುಮಾ ನಾಯಕತ್ವ ವಹಿಸಿದ್ದರು. ಆ ಎಲ್ಲಾ ನಾಲ್ಕು ಪಂದ್ಯಗಳಲ್ಲಿ ಟಾಸ್ ಗೆದಿದ್ದರು. ಇನ್ನು ಐದನೇ ಪಂದ್ಯದಲ್ಲಿ ಗಾಯದ ಕಾರಣ ಬುವುಮಾ ಬದಲಿಗೆ ಕೇಶವ್ ಮಹಾರಾಜ್ ಟಾಸ್​ಗೆ ಆಗಮಿಸಿದ್ದರು. ಇದಾಗ್ಯೂ ಪಂತ್ ಅವರ ಅದೃಷ್ಟ ಬದಲಾಗಲಿಲ್ಲ.  ಐದನೇ ಪಂದ್ಯದಲ್ಲೂ ರಿಷಭ್ ಪಂತ್ ಟಾಸ್ ಸೋತರು.

4 / 5
 ಈ ಮೂಲಕ ಟೀಮ್ ಇಂಡಿಯಾ ಪರ ನಾಯಕನಾಗಿ ಮೊದಲ ಸರಣಿಯಲ್ಲೇ ಎಲ್ಲಾ ಟಾಸ್​ಗಳನ್ನು ಸೋತ ನಾಯಕ ಎಂಬ ಕೆಟ್ಟ ದಾಖಲೆಯನ್ನು ರಿಷಭ್ ಪಂತ್ ನಿರ್ಮಿಸಿದ್ದಾರೆ. ಇದಾಗ್ಯೂ ಈ ಪಂದ್ಯದ ಮೂಲಕ ವಿಶೇಷ ದಾಖಲೆ ಬರೆಯುವ ಅವಕಾಶ ಕೂಡ ಪಂತ್ ಮುಂದಿದೆ.

5 / 5
ಭಾರತದಲ್ಲಿ ಟಿ20 ಕ್ರಿಕೆಟ್​ನಲ್ಲಿ ಸೌತ್ ಆಫ್ರಿಕಾ ವಿರುದ್ದ ಇದುವರೆಗೆ ಟೀಮ್ ಇಂಡಿಯಾ ಸರಣಿ ಗೆದ್ದಿಲ್ಲ. 2015ರಲ್ಲಿ ಧೋನಿ ನಾಯಕರಾಗಿದ್ದಾಗ ಭಾರತ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋತಿತ್ತು. 2019 ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲೂ ಟೀಮ್ ಇಂಡಿಯಾ ಸೌತ್ ಆಫ್ರಿಕಾ ವಿರುದ್ದ ಸರಣಿ ಗೆದ್ದಿಲ್ಲ. ಇದೀಗ ಸರಣಿ ಗೆದ್ದರೆ ಈ ಸಾಧನೆ ಮಾಡಿದ ಮೊದಲ ನಾಯಕ ಎಂಬ ದಾಖಲೆ ರಿಷಭ್ ಪಂತ್ ಪಾಲಾಗಲಿದೆ.

Published On - 8:08 pm, Sun, 19 June 22