Rishabh Pant Health: ಚೇತರಿಕೆಯ ನಡುವೆಯೂ ರಿಷಬ್ ಪಂತ್ ಡೆಹ್ರಾಡೂನ್ನಿಂದ ಮುಂಬೈಗೆ ಶಿಫ್ಟ್..!
TV9 Web | Updated By: ಪೃಥ್ವಿಶಂಕರ
Updated on:
Jan 04, 2023 | 12:48 PM
Rishabh Pant Health: ರಿಷಬ್ ಪಂತ್ಗೆ ಹೆಚ್ಚಾಗಿ ಕಾಡುತ್ತಿರುವ ನೋವೆಂದರೆ ಅದು ಕಾಲಿನ ಇಂಜುರಿ. ಹೀಗಾಗಿ ಉತ್ತಮ ಚಿಕಿತ್ಸೆಗಾಗಿ ಅವರನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲು ಯೋಜನೆ ರೂಪಿಸಲಾಗಿದೆ ಎಂಬ ಮಾತು ಕೇಳಲಾರಂಭಿಸಿದೆ.
1 / 5
ಡಿಸೆಂಬರ್ 30 ರಂದು ರಸ್ತೆ ಅಪಘಾತದಲ್ಲಿ ಗಾಯಗೊಂಡು ಡೆಹ್ರಾಡೂನ್ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಿಷಬ್ ಪಂತ್ ಟೀಂ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಡೆಹ್ರಾಡೂನ್ನಿಂದ ಮುಂಬೈಗೆ ಶಿಫ್ಟ್ ಮಾಡಲಾಗುತ್ತದೆ ಎಂಬ ಮಾಹಿತಿ ಸಿಕ್ಕಿದೆ.
2 / 5
ಐದು ದಿನಗಳ ಕಾಲ ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ರಿಷಬ್ ಪಂತ್ ಅವರನ್ನು ಈಗ ಮುಂಬೈಗೆ ಶಿಫ್ಟ್ ಮಾಡಲಾಗುತ್ತದೆ ಎಂಬ ಮಾಹಿತಿ ಸಿಕ್ಕಿದೆ. ಆದರೆ ಇದಕ್ಕೆ ಕಾರಣವೇನು ಎಂಬ ಖಚಿತ ಮಾಹಿತಿ ಇದುವರೆಗೆ ಸಿಕ್ಕಿಲ್ಲ.
3 / 5
ರಿಷಬ್ ಪಂತ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈಗೆ ಸ್ಥಳಾಂತರಿಸಲಾಗುವುದು ಎಂದು ದೆಹಲಿ ಕ್ರಿಕೆಟ್ ಸಂಸ್ಥೆಯ ನಿರ್ದೇಶಕ ಶ್ಯಾಮ್ ಶರ್ಮಾ ಬುಧವಾರ ತಿಳಿಸಿದ್ದಾರೆ. ಅಲ್ಲದೆ ಪಂತ್ಗೆ ಮಂಬೈನ ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ ಎಂಬುದನ್ನು ಕೂಡ ಸ್ಪಷ್ಟಪಡಿಸಿಲ್ಲ.
4 / 5
ರಿಷಬ್ ಪಂತ್ಗೆ ಹೆಚ್ಚಾಗಿ ಕಾಡುತ್ತಿರುವ ನೋವೆಂದರೆ ಅದು ಕಾಲಿನ ಇಂಜುರಿ. ಹೀಗಾಗಿ ಉತ್ತಮ ಚಿಕಿತ್ಸೆಗಾಗಿ ಅವರನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲು ಯೋಜನೆ ರೂಪಿಸಲಾಗಿದೆ ಎಂಬ ಮಾತು ಕೇಳಲಾರಂಭಿಸಿದೆ.
5 / 5
ತೀವ್ರ ಇಂಜುರಿಗೊಂಡಿರುವ ರಿಷಬ್ ಪಂತ್ ಈ ಸೀಸನ್ನ ಐಪಿಎಲ್ ಆಡುವುದು ಅಸಾಧ್ಯವೆಂದು ಹೇಳಲಾಗುತ್ತಿದೆ. ಇದರ ಹೊರತಾಗಿ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲೂ ಪಂತ್ ಕಾಣಿಸಿಕೊಳ್ಳುವುದು ಅನುಮಾನವಾಗಿದೆ.
Published On - 12:48 pm, Wed, 4 January 23