
ಭಾರತದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಮತ್ತು ನಟಿ ಊರ್ವಶಿ ರೌಟೇಲಾ ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಚರ್ಚೆಯಲ್ಲಿದ್ದಾರೆ. ಇಬ್ಬರೂ ಕೂಡ ಪರಸ್ಪರ ಹೆಸರನ್ನು ಬಳಸದೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ ಉತ್ತರಕ್ಕೆ ಪ್ರತ್ಯುತ್ತರ ನೀಡುತ್ತಿದ್ದಾರೆ.

ಈಗಲೂ ಈ ಸಿರೀಸ್ ಮುಂದುವರಿದಿದೆ. ಊರ್ವಶಿ ನೀಡಿದ್ದ ಟಾಂಗ್ಗೆ ಪ್ರತಿಕ್ರಿಯೆ ನೀಡಿರುವ ಪಂತ್ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ 'ಕೋಟ್' ಹಂಚಿಕೊಂಡಿದ್ದು, ಪಂತ್, ಊರ್ವಶಿಯನ್ನೇ ಟಾರ್ಗೆಟ್ ಮಾಡಿ ಈ ಕೋಟ್ ಹಾಕಿದ್ದಾರೆ ಎಂದು ಅಭಿಮಾನಿಗಳ ವಲಯದಲ್ಲಿ ಟಾಕ್ ಆರಂಭವಾಗಿದೆ.


ಈ ಹಿಂದೆ ಸಂದರ್ಶನವೊಂದರಲ್ಲಿ ನಟಿ ಊರ್ವಶಿ, ‘ಆರ್‌ಪಿ’ ತನ್ನನ್ನು ಭೇಟಿಯಾಗಲು ಹೋಟೆಲ್‌ನಲ್ಲಿ ಗಂಟೆಗಟ್ಟಲೆ ಕಾಯುತ್ತಿದ್ದರು ಎಂದು ಹೇಳಿಕೊಂಡಿದ್ದರು. ಆ ಬಳಿಕ ಈ ಸಂದರ್ಶನ ಸಖತ್ ವೈರಲ್ ಆಗಿತ್ತು. ಇದಾದ ನಂತರ ಪಂತ್ ಕೂಡ ಈ ಹೇಳಿಕೆಗೆ ಪ್ರತಿಕ್ರಿಯಿಸಿ, ಜನರು ಜನಪ್ರಿಯತೆಗಾಗಿ ಏನೆಲ್ಲ ಸುಳ್ಳು ಹೇಳುತ್ತಾರೆ ಎಂದಿದ್ದರು
