- Kannada News Photo gallery Cricket photos Hardik Pandya's wife Natasa Stankovic shared a hot photo on her Instagram account
Hardik Pandya: ಪತ್ನಿ ನತಾಶ, ಮಗ ಅಗಸ್ತ್ಯ ಜೊತೆ ವಿದೇಶದಲ್ಲಿ ಹಾರ್ದಿಕ್ ಪಾಂಡ್ಯ ಸುತ್ತಾಟ
ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕ್ರಿಕೆಟ್ ನಿಂದ ವಿಶ್ರಾಂತಿ ಪಡೆದುಕೊಂಡಿದ್ದು ವಿದೇಶದಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಪತ್ನಿ ನತಾಶ ಸ್ಟಾಂಕೋವಿಕ್ ಹಾಗೂ ಮಗ ಅಗಸ್ತ್ಯ ಜೊತೆ ಪಾಂಡ್ಯ ಸುತ್ತಾಟದಲ್ಲಿದ್ದಾರೆ.
Updated on:Aug 14, 2022 | 8:44 AM

ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕ್ರಿಕೆಟ್ ನಿಂದ ವಿಶ್ರಾಂತಿ ಪಡೆದುಕೊಂಡಿದ್ದು ವಿದೇಶದಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಪತ್ನಿ ನತಾಶ ಸ್ಟಾಂಕೋವಿಕ್ ಹಾಗೂ ಮಗ ಅಗಸ್ತ್ಯ ಜೊತೆ ಪಾಂಡ್ಯ ಸುತ್ತಾಟದಲ್ಲಿದ್ದಾರೆ.

ಏಜಿಯನ್ ಸಮುದ್ರದ ಸೈಕ್ಲೇಡ್ಸ್ ದ್ವೀಪಗಳಲ್ಲಿ ಒಂದಾದ ಸ್ಯಾಂಟೋರಿದಲ್ಲಿ ಕುಟುಂಬದ ಜೊತೆ ಸಮಯ ಕಳೆಯುತ್ತಿರುವ ಫೋಟೋವನ್ನು ಹಾರ್ದಿಕ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು ವೈರಲ್ ಆಗುತ್ತಿದೆ.

ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಸ್ಟಾಂಕೋವಿಕ್ 2020 ರಲ್ಲಿ ವಿವಾಹವಾಗಿದ್ದಾರೆ. ಇವರಿಬ್ಬರು ಕೈಕೈ ಹಿಡಿದು ಎಂಜಾಯ್ ಮಾಡುತ್ತಿರುವ ದಂಪತಿಯ ರೊಮ್ಯಾಂಟಿಕ್ ಫೋಟೋಗಳಿಗೆ ಸಾಕಷ್ಟು ಮೆಚ್ಚುಗೆ ಕೇಳಿಬರುತ್ತಿದೆ.

ತುಂಡುಡಿಗೆ ತೊಟ್ಟು ಈಜು ಫ್ಲೋಟ್‌ಗಳ ಮೇಲೆ ಈಜುತ್ತಾ ಆನಂದಿಸುತ್ತಿರುವ ಫೋಟೋವನ್ನು ಹಾರ್ದಿಕ್ ಪತ್ನಿ ಶೇರ್ ಮಾಡಿಕೊಂಡಿದ್ದಾರೆ.

ನತಾಶಾ ಸ್ಟಾಂಕೋವಿಕ್ 4 ಮಾರ್ಚ್ 1992 ರಂದು ಸರ್ಬಿಯಾದಲ್ಲಿ ಜನಿಸಿದರು. ಇಬ್ಬರೂ ಬಹಳ ದಿನಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. 2020 ರಲ್ಲಿ ಗಂಡುಮಗುವಿಗೆ ಜನ್ಮ ನೀಡಿದ್ದರು.

2014 ರಲ್ಲಿ ಬಿಗ್ ಬಾಸ್ ಸೀಸನ್ 8 ರಲ್ಲಿ ಕಾಣಿಸಿಕೊಂಡಿದ್ದರು. ನತಾಶಾ ಅವರು ಸತ್ಯಾಗ್ರಹ, ಡ್ಯಾಡಿ ಮತ್ತು ಫುಕ್ರೆ ರಿಟರ್ನ್ಸ್‌ನಲ್ಲಿ ನಟಿಸಿದ್ದಾರೆ.
Published On - 8:44 am, Sun, 14 August 22
