
ಟೆಸ್ಟ್ ಕ್ರಿಕೆಟ್ನಲ್ಲಿ ರಿಷಭ್ ಪಂತ್ ಈವರೆಗೆ 6 ಶತಕಗಳನ್ನು ಬಾರಿಸಿದ್ದಾರೆ. ಆದರೆ ಅವರು ಶತಕದಂಚಿನಲ್ಲಿ ಎಡವಿರುವುದು 7 ಬಾರಿ. ಅಂದರೆ ಟೆಸ್ಟ್ ಇನಿಂಗ್ಸ್ವೊಂದರಲ್ಲಿ 90 ಕ್ಕಿಂತ ಹೆಚ್ಚು ರನ್ ಕಲೆಹಾಕಿ ಒಟ್ಟು ಏಳು ಬಾರಿ ವಿಕೆಟ್ ಒಪ್ಪಿಸಿದ್ದಾರೆ. ಅದೇ 200 ಟೆಸ್ಟ್ ಪಂದ್ಯಗಳನ್ನಾಡಿರುವ ಸಚಿನ್ ತೆಂಡೂಲ್ಕರ್ 90ರ ಅಸುಪಾಸಿನಲ್ಲಿ ಔಟ್ ಆಗಿರುವುದು ಕೇವಲ 10 ಬಾರಿ ಮಾತ್ರ.

ಆದರೆ 62 ಟೆಸ್ಟ್ ಇನಿಂಗ್ಸ್ಗಳಲ್ಲಿ ರಿಷಭ್ ಪಂತ್ 7 ಬಾರಿ ಒಂದಂಕಿ ರನ್ಗಳಿಂದ ಶತಕ ವಂಚಿತರಾಗಿದ್ದಾರೆ. 2018 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 92 ರನ್ ಬಾರಿಸಿ ಔಟಾಗುವ ಮೂಲಕ ಪಂತ್ ನರ್ವಸ್ ನೈಂಟಿಯನ್ನು ಆರಂಭಿಸಿದ್ದರು. ಇದಾದ ಬಳಿಕ 2018ರಲ್ಲೇ ವಿಂಡೀಸ್ ವಿರುದ್ಧ ಮತ್ತೊಮ್ಮೆ 92 ರನ್ ಬಾರಿಸಿ ಔಟಾಗಿದ್ದರು.

ಇನ್ನು 2021 ರಲ್ಲಿ ಆಸ್ಟ್ರೇಲಿಯಾ ವಿರುದ್ಧ 97, ಇಂಗ್ಲೆಂಡ್ ವಿರುದ್ಧ 91 ರನ್ ಬಾರಿಸಿ ಔಟಾಗಿದ್ದರು. ಹಾಗೆಯೇ 2022 ರಲ್ಲಿ ಶ್ರೀಲಂಕಾ ವಿರುದ್ಧ 96 ಹಾಗೂ ಬಾಂಗ್ಲಾದೇಶ್ ವಿರುದ್ಧ 93 ರನ್ಗಳಿಸಿ ವಿಕೆಟ್ ಒಪ್ಪಿಸಿದ್ದರು.

ಇದೀಗ ನ್ಯೂಝಿಲೆಂಡ್ ವಿರುದ್ಧದ ಪಂದ್ಯದಲ್ಲಿ 99 ರನ್ಗಳಿಸಿ ವಿಕೆಟ್ ಒಪ್ಪಿಸುವ ಮೂಲಕ ಕೇವಲ 1 ರನ್ನಿಂದ ಶತಕ ವಂಚಿತರಾಗಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ಬಾರಿ ನೈಂಟಿ+ ರನ್ಗಳಿಸಿ ಶತಕ ವಂಚಿತನಾದ ವಿಕೆಟ್ ಕೀಪರ್ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಅಷ್ಟೇ ಅಲ್ಲದೆ ಈ ಶತಕ ಕೈ ತಪ್ಪುವುದರೊಂದಿಗೆ ಟೀಮ್ ಇಂಡಿಯಾ ಪರ ಅತ್ಯಧಿಕ ಸೆಂಚುರಿ ಸಿಡಿಸಿದ ವಿಕೆಟ್ ಕೀಪರ್ ಎಂಬ ದಾಖಲೆ ಕೂಡ ರಿಷಭ್ ಪಂತ್ ಕೈತಪ್ಪಿದೆ. ಈ ಪಟ್ಟಿಯಲ್ಲಿ ಮಹೇಂದ್ರ ಸಿಂಗ್ ಧೋನಿ ಹಾಗೂ ಪಂತ್ 6 ಶತಕಗಳೊಂದಿಗೆ ಜಂಟಿಯಾಗಿ ಅಗ್ರಸ್ಥಾನ ಅಲಂಕರಿಸಿದ್ದಾರೆ. ಹೀಗಾಗಿ ಮುಂಬರುವ ಪಂದ್ಯಗಳಲ್ಲಿ ರಿಷಭ್ ಪಂತ್ ನರ್ವಸ್ ನೈಂಟಿ ದಾಟಿ ಮೂರಂಕಿ ಮೊತ್ತಗಳಿಸಿದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ.