Rishabh Pant Update: ರಿಷಭ್ ಪಂತ್​ಗೆ ಇನ್ನೊಂದು ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲ ಎಂದ ವೈದ್ಯಕೀಯ ತಂಡ

|

Updated on: May 31, 2023 | 1:30 PM

Rishabh Pant Update: ರಿಷಬ್ ಪಂತ್ ಅವರ ಚೇತರಿಕೆಯ ಮೇಲೆ ನಿರಂತರವಾಗಿ ಕಣ್ಣಿಟ್ಟಿರುವ ವೈದ್ಯಕೀಯ ತಂಡವು ಪಂತ್​ಗೆ ಮತ್ತೊಂದು ಶಸ್ತ್ರಚಿಕಿತ್ಸೆ ಅಗತ್ಯವಿಲ್ಲ ಎಂದು ಭಾವಿಸಿದೆ.

1 / 6
ಕಳೆದ ವರ್ಷ ಡಿಸೆಂಬರ್ 30 ರಂದು ಕಾರು ಅಪಘಾತಕ್ಕೀಡಾಗಿ ಸಾಕಷ್ಟು ಇಂಜುರಿಗೆ ತುತ್ತಾಗಿದ್ದ ಭಾರತದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಆರೋಗ್ಯದ ಬಗ್ಗೆ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ನಿಗದಿಗೂ ಮುನ್ನವೇ ಪಂತ್ ಟೀಂ ಇಂಡಿಯಾವನ್ನು ಸೇರಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

2 / 6
ಕಾರು ಅಪಘಾತದ ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ರಿಷಭ್ ಪಂತ್​ಗೆ ಮತ್ತೊಂದು ಶಸ್ತ್ರಚಿಕಿತ್ಸೆಯ ಅವಶ್ಯಕತೆ ಇದೆ ಎಂದು ಆರಂಭದಲ್ಲಿ ವೈದ್ಯರು ಹೇಳಿದ್ದರು. ಆದರೆ ಇದೀಗ ನಿರೀಕ್ಷೆಗೂ ಮೀರಿದ ರೀತಿಯಲ್ಲಿ ಚೇತರಿಸಿಕೊಳ್ಳುತ್ತಿರುವ ಪಂತ್​ರನ್ನು ಪರೀಕ್ಷಿಸಿರುವ ವೈದ್ಯರು ಇನ್ನೊಂದು ಶಸ್ತ್ರಚಿಕಿತ್ಸೆ ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎಂಬುದು ವರದಿಯಾಗಿದೆ.

3 / 6
TOI ವರದಿಯ ಪ್ರಕಾರ, ರಿಷಬ್ ಪಂತ್ ಅವರ ಚೇತರಿಕೆಯ ಮೇಲೆ ನಿರಂತರವಾಗಿ ಕಣ್ಣಿಟ್ಟಿರುವ ವೈದ್ಯಕೀಯ ತಂಡವು ಪಂತ್​ಗೆ ಮತ್ತೊಂದು ಶಸ್ತ್ರಚಿಕಿತ್ಸೆ ಅಗತ್ಯವಿಲ್ಲ ಎಂದು ಭಾವಿಸಿದೆ. ಅಲ್ಲದೆ ಪ್ರತಿ 15 ದಿನಗಳಿಗೊಮ್ಮೆ ಪಂತ್ ಅವರ ಗಾಯವನ್ನು ಪರಿಶೀಲಿಸುತ್ತಿರುವ ತಂಡ, ಉಳಿದ ಗಾಯಗಳು ತಾನಾಗಿಯೇ ಗುಣವಾಗುತ್ತವೆ ಎಂಬ ವರದಿ ನೀಡಿವೆ.

4 / 6
ಅಲ್ಲದೆ ರಿಷಬ್ ಪಂತ್ ಚೇತರಿಕೆ ನಿರೀಕ್ಷೆಗಿಂತ ಉತ್ತಮವಾಗಿದೆ ಎಂದು ಬಿಸಿಸಿಐ ಮೂಲಗಳು TOI ಗೆ ತಿಳಿಸಿದ್ದು, ಇದು ಅವರ ನೈತಿಕ ಸ್ಥೈರ್ಯವನ್ನೂ ಹೆಚ್ಚಿಸಲಿದೆ. ಅವರು ಇದೇ ರೀತಿ ಚೇತರಿಸಿಕೊಂಡರೆ, ನಿಗದಿತ ಸಮಯಕ್ಕಿಂತ ಮೊದಲು ಅವರು ತಂಡಕ್ಕೆ ಮರಳಬಹುದು ಎಂದು ವರದಿಯಾಗಿದೆ.

5 / 6
ಸದ್ಯ ದೆಹಲಿಯ ತಮ್ಮ ಮನೆಯಲ್ಲಿ ಸ್ವಲ್ಪ ಸಮಯ ಕಳೆದ ನಂತರ, ಪಂತ್ ಈಗ ಮತ್ತೆ ಎನ್‌ಸಿಎಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಇಷ್ಟು ದಿನ ಊರುಗೋಲಿನ ಸಹಾಯದಿಂದ ನಡೆಯುತ್ತಿದ್ದ ಪಂತ್ ಇದೀಗ ಊರುಗೋಲುಗಳಿಲ್ಲದೆ ದೂರದವರೆಗೆ ನಡೆಯಲು ಸಮರ್ಥರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

6 / 6
ಕಾರು ಅಪಘಾತದ ನಂತರ ಪಂತ್ ಕ್ರಿಕೆಟ್‌ನಿಂದ ದೂರವಾಗಿದ್ದು, ಈ ವರ್ಷ ಪೂರ್ತಿ ಅವರು ಕ್ರಿಕೆಟ್‌ನಿಂದ ದೂರ ಉಳಿಯಲ್ಲಿದ್ದಾರೆ. ಐಪಿಎಲ್​ನಿಂದ ದೂರವಿದ್ದ ಪಂತ್, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಜೊತೆಗೆ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಿಂದಲೂ ಹೊರಗುಳಿಯಲಿದ್ದಾರೆ.