IPL 2023: ಈ ಐಪಿಎಲ್​ನಲ್ಲಿ ಕಳಪೆ ಪ್ರದರ್ಶನ ನೀಡಿದ ದುಬಾರಿ ವಿದೇಶಿ ಆಟಗಾರರಿವರು

IPL 2023: ಪ್ರತಿ ಬಾರಿಯಂತೆ ಈ ಬಾರಿಯೂ ಫ್ರಾಂಚೈಸಿಗಳು ವಿದೇಶಿ ಆಟಗಾರರ ಮೇಲೆ ಹಣದ ಸುರಿಮಳೆಗೈದಿದ್ದವು. ಕೆಲವು ಆಟಗಾರರು ಉತ್ತಮ ಪ್ರದರ್ಶನ ನೀಡಿದರೆ ಇನ್ನು ಕೆಲವು ಆಟಗಾರರು ಭಾರಿ ಮೊತ್ತದ ಸಂಭಾವನೆ ಪಡೆದರಾದರೂ, ಉತ್ತಮ ಪ್ರದರ್ಶನ ನೀಡುವಲ್ಲಿ ಎಡವಿದರು.

ಪೃಥ್ವಿಶಂಕರ
|

Updated on: May 31, 2023 | 2:43 PM

16ನೇ ಆವೃತ್ತಿಯ ಐಪಿಎಲ್​ಗೆ ರೋಚಕ ತೆರೆ ಬಿದ್ದಿದೆ. ಪ್ರತಿ ಬಾರಿಯಂತೆ ಈ ಸೀಸನ್​ ಕೂಡ ವಿಶ್ವ ಕ್ರಿಕೆಟ್‌ಗೆ ಅನೇಕ ಶ್ರೇಷ್ಠ ಆಟಗಾರರನ್ನು ನೀಡಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಫ್ರಾಂಚೈಸಿಗಳು ವಿದೇಶಿ ಆಟಗಾರರ ಮೇಲೆ ಹಣದ ಸುರಿಮಳೆಗೈದಿದ್ದವು. ಕೆಲವು ಆಟಗಾರರು ತಾವು ತೆಗೆದುಕೊಂಡ ಸಂಭಾವನೆಗೆ ತಕ್ಕಂತ ಪ್ರದರ್ಶನ ನೀಡಿದರು. ಆದರೆ ಇನ್ನು ಕೆಲವು ಆಟಗಾರರು ಭಾರಿ ಮೊತ್ತದ ಸಂಭಾವನೆ ಪಡೆದರಾದರೂ, ಉತ್ತಮ ಪ್ರದರ್ಶನ ನೀಡುವಲ್ಲಿ ಎಡವಿದರು. ಅಂತಹ ಟಾಪ್ 5 ವಿದೇಶಿ ಆಟಗಾರರ ವಿವರ ಇಲ್ಲಿದೆ.

1 / 6
ಸ್ಯಾಮ್ ಕರನ್ ಅವರನ್ನು ಪಂಜಾಬ್ ಕಿಂಗ್ಸ್ 18.5 ಕೋಟಿಗೆ ಖರೀದಿಸಿತ್ತು. ಐಪಿಎಲ್ ಇತಿಹಾಸದಲ್ಲಿ ಇಷ್ಟೊಂದು ಸಂಭಾವನೆ ಪಡೆದ ಮೊದಲ ಆಟಗಾರ ಎನಿಸಿಕೊಂಡ ಕರನ್ ಪ್ರದರ್ಶನ ಮಾತ್ರ ವಿಶೇಷವಾಗಿರಲಿಲ್ಲ.  ಈ ಸೀಸನ್​ನಲ್ಲಿ 14 ಪಂದ್ಯಗಳನ್ನಾಡಿದ್ದ ಕರನ್ ಬ್ಯಾಟಿಂಗ್​ನಲ್ಲಿ 276 ರನ್ ಸಿಡಿಸಿದರೆ, ಬೌಲಿಂಗ್​ನಲ್ಲಿ ಕೇವಲ 10 ವಿಕೆಟ್ ಪಡೆದರು. ಅಂತಿಮವಾಗಿ ಪಂಜಾಬ್ ತಂಡಕ್ಕೆ ಪ್ಲೇ ಆಫ್ ತಲುಪಲು ಸಾಧ್ಯವಾಗಲಿಲ್ಲ.

2 / 6
ಭಾರಿ ಮೊತ್ತ ಪಡೆದು ವಿಫಲರಾದ ಆಟಗಾರರಲ್ಲಿ ಬೆನ್ ಸ್ಟೋಕ್ಸ್ ಕೂಡ ಸೇರಿದ್ದಾರೆ.  ಬೆನ್ ಸ್ಟೋಕ್ಸ್ 16.25 ಕೋಟಿಗೆ ಚೆನ್ನೈ ಸೇರಿಕೊಂಡಿದ್ದರು. ಆದರೆ ಚೆನ್ನೈ ಪರ ಕೇವಲ ಎರಡು ಪಂದ್ಯಗಳನ್ನು ಆಡಿದ ಸ್ಟೋಕ್ಸ್ ಬ್ಯಾಟಿಂಗ್​ನಲ್ಲಿ ಕೇವಲ 15 ರನ್ ಬಾರಿಸಿದರೆ, ಬೌಲಿಂಗ್​ನಲ್ಲಿ ಖಾಲಿ ಕೈಯಲ್ಲಿ ವಾಪಸ್ಸಾದರು.

3 / 6
ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಅವರನ್ನು ಮುಂಬೈ ಇಂಡಿಯನ್ಸ್ ತಂಡವು ಐಪಿಎಲ್‌ನ ಮೆಗಾ ಹರಾಜಿನಲ್ಲಿ ಎಂಟು ಕೋಟಿ ಮೊತ್ತವನ್ನು ಪಾವತಿಸಿ ಖರೀದಿಸಿತು.  ಆದರೆ ಗಾಯದ ಕಾರಣ ಕಳೆದ ಸೀಸನ್​ನಲ್ಲಿ ಆಡಲು ಆರ್ಚರ್​ಗೆ ಸಾಧ್ಯವಾಗಿರಲಿಲ್ಲ.  ಆದರೆ ಈ ಸೀಸನ್​ನಲ್ಲಿ ತಂಡದ ಪರ ಕಣಕ್ಕಿಳಿದಿದ್ದ ಆರ್ಚರ್ ಪ್ರದರ್ಶನ ಹೇಳಿಕೊಳ್ಳುವಂತಿರಲಿಲ್ಲ. ಮುಂಬೈ ಪರ ಐದು ಪಂದ್ಯಗಳನ್ನು ಆಡಿದ ಆರ್ಚರ್, ಕೇವಲ ಎರಡು ವಿಕೆಟ್ಗಳನ್ನು ಮಾತ್ರ ಉರುಳಿಸಿದರು. ಹಾಗೆಯೇ ಇಂಜುರಿಯಿಂದಾಗಿ ಇಡೀ ಸೀಸನ್​ ಕೂಡ ಆಡಲಿಲ್ಲ.

4 / 6
ಪಾಕಿಸ್ತಾನ ಸೂಪರ್ ಲೀಗ್​ನಲ್ಲಿ ಅಮೋಘ ಆಟ ಪ್ರದರ್ಶಿಸಿ ಐಪಿಎಲ್​ ಹರಾಜಿಗೆ ಎಂಟ್ರಿಕೊಟ್ಟಿದ್ದ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಹ್ಯಾರಿ ಬ್ರೂಕ್ ಅವರನ್ನು 13.25 ಕೋಟಿಗೆ ಸನ್ ರೈಸರ್ಸ್ ಹೈದರಾಬಾದ್ ಖರೀದಿಸಿತ್ತು.  ಆದರೆ ಈ ಆಟಗಾರ ಕೂಡ ವಿಫಲರಾದರು. ಒಂದು ಶತಕವನ್ನು ಹೊರತುಪಡಿಸಿ, ಬ್ರೂಕ್‌ಗೆ ಬೇರೆ ಯಾವುದೇ ಉತ್ತಮ ಇನ್ನಿಂಗ್ಸ್‌ಗಳನ್ನು ಆಡಲು ಸಾಧ್ಯವಾಗಲಿಲ್ಲ.  ಈ ಸೀಸನ್​ನಲ್ಲಿ 11 ಪಂದ್ಯಗಳನ್ನು ಆಡಿದ ಬ್ರೂಕ್, ಕೇವಲ 21.11ಸರಾಸರಿ ಮತ್ತು 123.38 ಸ್ಟ್ರೈಕ್ ರೇಟ್​ನಲ್ಲಿ ಕೇವಲ 190 ರನ್ ಬಾರಿಸಿದರು.

5 / 6
10.50 ಕೋಟಿಗೆ ಆರ್​ಸಿಬಿ ಸೇರಿಕೊಂಡಿದ್ದ ವನಿಂದು ಹಸರಂಗ ಈ ಸೀಸನ್​ನಲ್ಲಿ ಹೇಳಿಕೊಳ್ಳುವ ಪ್ರದರ್ಶನ ನೀಡಲಿಲ್ಲ. ಆರ್​ಸಿಬಿ ಪರ ಎಂಟು ಪಂದ್ಯಗಳನ್ನಾಡಿದ  ಹಸರಂಗ ಕೇವಲ ಒಂಬತ್ತು ವಿಕೆಟ್‌ಗಳನ್ನು ಮಾತ್ರ ಪಡೆದರು. ಆದರೆ ಬರೋಬ್ಬರಿ 8.13ರ ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟು ತೀರ ದುಬಾರಿಯಾದರು.

6 / 6
Follow us