- Kannada News Photo gallery Cricket photos WTC Final 2023 Captain Rohit Sharma joins India squad for WTC Final training
WTC Final 2023: ಲಂಡನ್ನಲ್ಲಿ ಟೀಂ ಇಂಡಿಯಾ ಸೇರಿಕೊಂಡ ರೋಹಿತ್; ಸಮರಾಭ್ಯಾಸ ಶುರು
WTC Final 2023: ಇಡೀ ಐಪಿಎಲ್ ಲೀಗ್ನಲ್ಲಿ ಕಳಪೆ ಫಾರ್ಮ್ನಿಂದ ಬಳಲಿದ ಟೀಂ ಇಂಡಿಯಾ ನಾಯಕ ಇದೀಗ ವಿಶ್ವ ಟೆಸ್ಟ್ ಚಾಂಪಿಯನ್ಶಿಫ್ ಫೈನಲ್‌ಗಾಗಿ ಇಂಗ್ಲೆಂಡ್ಗೆ ತೆರಳಿದ್ದಾರೆ.
Updated on: May 31, 2023 | 12:50 PM

16ನೇ ಆವೃತ್ತಿಯ ಐಪಿಎಲ್ನಲ್ಲಿ ತನ್ನ ತಂಡವನ್ನು 6ನೇ ಬಾರಿಗೆ ಚಾಂಪಿಯನ್ ಮಾಡುವಲ್ಲಿ ವಿಫಲರಾದ ಹಿಟ್ಮ್ಯಾನ್ ರೋಹಿತ್ ಶರ್ಮಾ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡು ಐಪಿಎಲ್ಗೆ ವಿದಾಯ ಹೇಳಿದ್ದರು.

ಇಡೀ ಲೀಗ್ನಲ್ಲಿ ಕಳಪೆ ಫಾರ್ಮ್ನಿಂದ ಬಳಲಿದ ಟೀಂ ಇಂಡಿಯಾ ನಾಯಕ ಇದೀಗ ವಿಶ್ವ ಟೆಸ್ಟ್ ಚಾಂಪಿಯನ್ಶಿಫ್ ಫೈನಲ್‌ಗಾಗಿ ಇಂಗ್ಲೆಂಡ್ಗೆ ತೆರಳಿದ್ದಾರೆ.

ಕ್ವಾಲಿಫೈಯರ್ 2 ಪಂದ್ಯದಲ್ಲಿ ಗುಜರಾತ್ ವಿರುದ್ಧ ಸೋತ ಬಳಿಕ ಬರಿಗೈಯಲ್ಲಿ ಐಪಿಎಲ್ನಿಂದ ಹೊರಬಿದ್ದಿದ್ದ ರೋಹಿತ್, ಟೀಂ ಇಂಡಿಯಾದ ಐಸಿಸಿ ಟ್ರೋಫರ ಬರವನ್ನು ನೀಗಿಸಲು ಇಂಗ್ಲೆಂಡ್ನಲ್ಲಿ ಬೆವರು ಹರಿಸುತ್ತಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗಾಗಿ ಲಂಡನ್‌ಗೆ ತಲುಪಿರುವ ಮಾಹಿತಿಯನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ರೋಹಿತ್, ಇದೀಗ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನ ಸಮಯ ಬಂದಿದೆ ಎಂದು ಬರದುಕೊಂಡಿದ್ದಾರೆ.

ಇನ್ನು ಲಂಡನ್ನಲ್ಲಿ ತಂಡ ಸೇರಿಕೊಂಡ ರೋಹಿತ್ ನೆಟ್ಸ್ನಲ್ಲಿ ಸಾಕಷ್ಟು ಬೆವರು ಹರಿಸಿದ್ದಾರೆ. ಸ್ಟ್ರೈಟ್ ಡ್ರೈವ್, ಕವರ್ ಡ್ರೈವ್, ಡಿಫೆನ್ಸ್ ಮತ್ತು ಫಾರ್ವರ್ಡ್ ಡಿಫೆನ್ಸ್ ಶಾಟ್ಗಳನ್ನು ಆಡುವ ಮೂಲಕ ಫಾರ್ಮ್ಗೆ ಮರಳಲು ಯತ್ನಿಸಿದರು.

ಇನ್ನು ಲಂಡನ್ನಲ್ಲಿ ತಂಡ ಸೇರಿಕೊಂಡ ರೋಹಿತ್ ನೆಟ್ಸ್ನಲ್ಲಿ ಸಾಕಷ್ಟು ಬೆವರು ಹರಿಸಿದ್ದಾರೆ. ಸ್ಟ್ರೈಟ್ ಡ್ರೈವ್, ಕವರ್ ಡ್ರೈವ್, ಡಿಫೆನ್ಸ್ ಮತ್ತು ಫಾರ್ವರ್ಡ್ ಡಿಫೆನ್ಸ್ ಶಾಟ್ಗಳನ್ನು ಆಡುವ ಮೂಲಕ ಫಾರ್ಮ್ಗೆ ಮರಳಲು ಯತ್ನಿಸಿದರು.

ಆಸ್ಟ್ರೇಲಿಯಾ: ಪ್ಯಾಟ್ ಕಮ್ಮಿನ್ಸ್ (ನಾಯಕ), ಸ್ಕಾಟ್ ಬೊಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮೆರಾನ್ ಗ್ರೀನ್, ಮಾರ್ಕಸ್ ಹ್ಯಾರಿಸ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಉಸ್ಮಾನ್ ಖವಾಜಾ, ಮಾರ್ನಸ್ ಲಬುಶೇನ್, ನಾಥನ್ ಲಿಯಾನ್, ಜೋಶ್ ಇಂಗ್ಲಿಸ್, ಟಾಡ್ ಮರ್ಫಿ, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಡೇವಿಡ್ ವಾರ್ನರ್. ಮೀಸಲು ಆಟಗಾರರು: ಮಿಚ್ ಮಾರ್ಷ್, ಮ್ಯಾಟ್ ರೆನ್ಶಾ

ಭಾರತ: ರೋಹಿತ್ ಶರ್ಮಾ (ನಾಯಕ), ರವಿಚಂದ್ರನ್ ಅಶ್ವಿನ್, ಕೆಎಸ್ ಭರತ್, ಶುಭ್ಮನ್ ಗಿಲ್, ರವೀಂದ್ರ ಜಡೇಜಾ, ವಿರಾಟ್ ಕೊಹ್ಲಿ, ಇಶಾನ್ ಕಿಶನ್, ಚೇತೇಶ್ವರ ಪೂಜಾರ, ಅಕ್ಷರ್ ಪಟೇಲ್, ಅಜಿಂಕ್ಯ ರಹಾನೆ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ಜಯದೇವ್ ಉನಾದ್ಕಟ್, ಉಮೇಶ್ ಯಾದವ್. ಮೀಸಲು ಆಟಗಾರರು: ಯಶಸ್ವಿ ಜೈಸ್ವಾಲ್, ಮುಖೇಶ್ ಕುಮಾರ್, ಸೂರ್ಯಕುಮಾರ್ ಯಾದವ್




