- Kannada News Photo gallery Cricket photos Rohit Sharma and Virat Kohli in Team India's new test Jersey by Adidas and Dream 11 as the main sponsor
Team India Jersey: ಪಂದ್ಯ ಆರಂಭಕ್ಕೆ ಒಂದು ದಿನ ಇರುವಾಗ ಹೊಸ ಜೆರ್ಸಿಯಲ್ಲಿ ಮಿಂಚಿದ ಟೀಮ್ ಇಂಡಿಯಾ ಪ್ಲೇಯರ್ಸ್
IND vs WI Test: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಅಜಿಂಕ್ಯಾ ರಹಾನೆ, ಶುಭ್ಮನ್ ಗಿಲ್ ಅಡಿಡಾಸ್ ಲೋಗೋ ಹಾಗೂ ಡ್ರೀಮ್ 11 ಎಂದು ಬರೆದಿರುವ ಟೆಸ್ಟ್ ಜೆರ್ಸಿಯಲ್ಲಿ ಕಂಗೊಳಿಸುತ್ತಿದ್ದಾರೆ.
Updated on: Jul 11, 2023 | 10:43 AM

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಸರಣಿ ಆರಂಭಕ್ಕೆ ಕೇವಲ ಒಂದಿ ದಿನವಷ್ಟೆ ಬಾಕಿ ಉಳಿದಿದೆ. ನಾಳೆ (ಜುಲೈ 12) ಡೊಮಿನಿಕಾದ ವಿಂಡ್ಸರ್ ಪಾರ್ಕ್ ಮೈದಾನದಲ್ಲಿ ಪ್ರಥಮ ಟೆಸ್ಟ್ ಪಂದ್ಯ ಶುರುವಾಗಲಿದೆ. ರೋಹಿತ್ ಶರ್ಮಾ ನೇತೃತ್ವದ ತಂಡವು ಟೆಸ್ಟ್ ಸರಣಿಗಾಗಿ ಹೊಸ ಜೆರ್ಸಿಯಲ್ಲಿ ಆಡಲಿದೆ.

ಮೊದಲ ಟೆಸ್ಟ್ನಲ್ಲಿ ಕಣಕ್ಕಿಳಿಯುವ ಮುನ್ನ ಇಂದು ಟೀಮ್ ಇಂಡಿಯಾ ಆಟಗಾರರು ನೂತನ ಜೆರ್ಸಿಯಲ್ಲಿ ಫೋಟೋಕ್ಕೆ ಪೋಸ್ ಕೊಟ್ಟಿದ್ದಾರೆ.

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಅಜಿಂಕ್ಯಾ ರಹಾನೆ, ಶುಭ್ಮನ್ ಗಿಲ್ ಅಡಿಡಾಸ್ ಲೋಗೋ ಹಾಗೂ ಡ್ರೀಮ್ 11 ಎಂದು ಬರೆದಿರುವ ಟೆಸ್ಟ್ ಜೆರ್ಸಿಯಲ್ಲಿ ಕಂಗೊಳಿಸುತ್ತಿದ್ದಾರೆ.

ಟೀಮ್ ಇಂಡಿಯಾ ಆಟಗಾರರು ಇಂದು ಕೊನೆಯ ಪ್ರ್ಯಾಕ್ಟೀಸ್ ಸೆಷನ್ನಲ್ಲಿ ಪಾಲ್ಗೊಳ್ಳಲಿದೆ. ನಿನ್ನೆ ಒನ್ ಹ್ಯಾಂಡ್ ಕ್ಯಾಚಿಂಗ್ ಡ್ರಿಲ್‌ನಲ್ಲಿ ತೊಡಗಿಸಿಕೊಂಡಿರುವುದು ಕಂಡುಬಂತು. ಕೊಹ್ಲಿ, ಗಿಲ್, ಇಶಾನ್ ಕಿಶನ್, ರಹಾನೆ ಸೇರಿದಂತೆ ಕೆಲವು ಆಟಗಾರರು ವಿಶಿಷ್ಟ ರೀತಿಯಲ್ಲಿ ಅಭ್ಯಾಸ ನಡೆಸುತ್ತಿದ್ದರು.

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಹೀನಾಯವಾಗಿ ಸೋಲು ಕಂಡ ಬಳಿಕ ಟೀಮ್ ಇಂಡಿಯಾವನ್ನು ಆಡುತ್ತಿದೆ. ಈ ಹಿಂದೆ ಕಳಪೆ ಪ್ರದರ್ಶನ ತೋರಿದ್ದ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ಮೇಲೆ ಸಾಕಷ್ಟು ಉತ್ತಡವಿದೆ.

ಅತ್ತ ವೆಸ್ಟ್ ಇಂಡೀಸ್ ತಂಡ ಐಸಿಸಿ ವಿಶ್ವಕಪ್ 2023 ಕ್ವಾಲಿಫೈಯರ್‌ನಲ್ಲಿ ಹೀನಾಯ ಪ್ರದರ್ಶನ ತೋರಿ ಈ ಸರಣಿಗೆ ಬರುತ್ತಿದೆ. ಹೀಗಾಗಿ ಉಭಯ ತಂಡಗಳಿಗೆ ಈ ಸರಣಿ ಬಹುಮುಖ್ಯವಾಗಿದೆ.

ಜುಲೈ 12 ರಿಂದ ಜುಲೈ 16 ವರೆಗೆ ಡೊಮಿನಿಕಾದ ವಿಂಡ್ಸರ್ ಪಾರ್ಕ್ನಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ಬಳಿಕ ಜುಲೈ 20ರಿಂದ 24 ವರೆಗೆ ದ್ವಿತೀಯ ಟೆಸ್ಟ್ ಆಯೋಜಿಸಲಾಗಿದ್ದು, ಇದು ಟ್ರಿನಿಡಾಡ್ನ ಕ್ವೀನ್ಸ್ ಪಾರ್ಕ್ ಓವಲ್ ಮೈದಾನದಲ್ಲಿ ನಡೆಯಲಿದೆ.




