T20 World Cup 2023: ‘ನನಗೆ ಈಗಲೇ ಹೇಳಿಬಿಡಿ’: ಬಿಸಿಸಿಐಗೆ ಸ್ಪಷ್ಟ ಸಂದೇಶ ರವಾನಿಸಿದ ರೋಹಿತ್ ಶರ್ಮಾ

|

Updated on: Dec 06, 2023 | 1:30 PM

T20 World Cup 2023: ಕಳದೆ ಒಂದು ವರ್ಷದಿಂದ ಟಿ20 ತಂಡದಿಂದ ದೂರವಿರುವ ರೋಹಿತ್ ಶರ್ಮಾ ಕೂಡ ಮುಂಬರು ಟಿ20 ವಿಶ್ವಕಪ್​ ಆಡುವ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ ಇದೀಗ ಹೊರಬಿದ್ದಿರುವ ಮಾಹಿತಿ ಪ್ರಕಾರ, 2024 ರ ಟಿ20 ವಿಶ್ವಕಪ್ ಆಡುವ ಬಗ್ಗೆ ರೋಹಿತ್ ತಮ್ಮ ನಿಲುವೇನು ಎಂಬುದನ್ನು ಬಿಸಿಸಿಐಗೆ ತಿಳಿಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

1 / 9
ಕ್ರಿಕೆಟ್​ನ ಮೂರು ಮಾದರಿಗಳ ಸರಣಿಯನ್ನು ಆಡುವ ಸಲುವಾಗಿ ಟೀಂ ಇಂಡಿಯಾ ಇಂದು ದಕ್ಷಿಣ ಆಫ್ರಿಕಾಕ್ಕೆ ತೆರಳಿದೆ. ಈ ಪ್ರವಾಸದಲ್ಲಿ ಮೊದಲು ಟಿ20 ಹಾಗೂ ಏಕದಿನ ಸರಣಿಯನ್ನು ಆಡಲಿರುವ ಭಾರತ ಆ ಬಳಿಕ ಟೆಸ್ಟ್ಟ್ ಸರಣಿ ಆಡಲಿದೆ. ಮೊದಲೆರಡು ಸರಣಿಗಳಿಗಾಗಿ ತಂಡದಲ್ಲಿ ಯುವ ಆಟಗಾರರಿಗೆ ಹೆಚ್ಚಿನ ಆಧ್ಯತೆ ನೀಡಲಾಗಿದೆ.

2 / 9
ಭವಿಷ್ಯದ ತಂಡವನ್ನು ಕಟ್ಟುವ ಸಲುವಾಗಿ ಆಯ್ಕೆ ಮಂಡಳಿ ಈ ತೀರ್ಮಾನ ಕೈಗೊಂಡಿದೆ. ಏಕೆಂದರೆ ಮುಂದಿನ ವರ್ಷ ಟಿ20 ವಿಶ್ವಕಪ್ ನಡೆಯುತ್ತಿರುವುದರಿಂದ ಬಲಿಷ್ಠ ತಂಡ ಕಟ್ಟುವ ಜವಬ್ದಾರಿ ಈಗ ಮಂಡಳಿಗಿದೆ. ಆದರೆ ಚುಟುಕು ಸಮರದಲ್ಲಿ ಯಾರು ತಂಡವನ್ನು ಮುನ್ನಡೆಸ ಬಗ್ಗೆ ಎಂಬ ಪ್ರಶ್ನೆಗೆ ಬಿಸಿಸಿಐ ಬಳಿ ಇನ್ನು ಸ್ಪಷ್ಟ ಉತ್ತರ ಇದ್ದಂತಿಲ್ಲ.

3 / 9
ವಾಸ್ತವವಾಗಿ ಏಕದಿನ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾವನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿದ್ದ ರೋಹಿತ್ ಶರ್ಮಾ ಅವರೇ ಟಿ20 ವಿಶ್ವಕಪ್​ನಲ್ಲೂ ತಂಡವನ್ನು ಮುನ್ನಡೆಸಬೇಕು ಎಂಬುದು ಆಯ್ಕೆ ಮಂಡಳಿಯಿಂದ ಹಿಡಿದು ಎಲ್ಲರ ಅಭಿಪ್ರಾಯವಾಗಿದೆ. ಆದರೆ ಈ ಬಗ್ಗೆ ಇನ್ನು ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ.

4 / 9
ಇತ್ತ ಕಳದೆ ಒಂದು ವರ್ಷದಿಂದ ಟಿ20 ತಂಡದಿಂದ ದೂರವಿರುವ ರೋಹಿತ್ ಶರ್ಮಾ ಕೂಡ ಮುಂಬರು ಟಿ20 ವಿಶ್ವಕಪ್​ ಆಡುವ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ ಇದೀಗ ಹೊರಬಿದ್ದಿರುವ ಮಾಹಿತಿ ಪ್ರಕಾರ, 2024 ರ ಟಿ20 ವಿಶ್ವಕಪ್ ಆಡುವ ಬಗ್ಗೆ ರೋಹಿತ್ ತಮ್ಮ ನಿಲುವೇನು ಎಂಬುದನ್ನು ಬಿಸಿಸಿಐಗೆ ತಿಳಿಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

5 / 9
ಇತ್ತೀಚೆಗಷ್ಟೇ ಬಿಸಿಸಿಐ ಅಧಿಕಾರಿಗಳು 2023ರ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ಪ್ರದರ್ಶನವನ್ನು ಪರಿಶೀಲಿಸಲು ಸಭೆ ಕರೆದಿದ್ದರು. ಈ ಸಭೆಯಲ್ಲಿ ತಂಡದ ಮುಂದಿನ ಯೋಜನೆಗಳ ಕುರಿತು ಚರ್ಚಿಸಲಾಯಿತು. ಈ ಸಭೆಯಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕೂಡ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾಗಿದ್ದರು ಎಂದು ವರದಿಯಾಗಿದೆ.

6 / 9
ಸಭೆಯಲ್ಲಿ ಹಾಜರಿದ್ದ ಅಧಿಕಾರಿಯನ್ನು ಉಲ್ಲೇಖಿಸಿ ವರದಿಯಾಗಿರುವ ಪ್ರಕಾರ, ಮುಂಬರುವ ಟಿ20 ವಿಶ್ವಕಪ್ ಆಡುವ ಬಗ್ಗೆ ರೋಹಿತ್ ಶರ್ಮಾ ಮಂಡಳಿ ಬಳಿ ಮಾತನಾಡಿದ್ದು, ‘ನೀವು ನನ್ನನ್ನು ಟಿ20 ವಿಶ್ವಕಪ್‌ಗೆ ಆಯ್ಕೆ ಮಾಡಲು ಬಯಸಿದರೆ, ಅದರ ಬಗ್ಗೆ ಈಗಲೇ ಹೇಳಿ' ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.

7 / 9
ವರದಿಯ ಪ್ರಕಾರ, ಸಭೆಯಲ್ಲಿ ಹಾಜರಿದ್ದ ಎಲ್ಲಾ ಅಧಿಕಾರಿಗಳು, ಆಯ್ಕೆಗಾರರು ಮತ್ತು ಕೋಚ್ ರಾಹುಲ್ ದ್ರಾವಿಡ್ ಕೂಡ ಟಿ20 ವಿಶ್ವಕಪ್‌ನ ನಾಯಕತ್ವವನ್ನು ರೋಹಿತ್ ಶರ್ಮಾಗೆ ಹಸ್ತಾಂತರಿಸಲು ಸರ್ವಾನುಮತದಿಂದ ಒಮ್ಮತ ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.

8 / 9
ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಿಂದಲೇ ರೋಹಿತ್ ಟೀಮ್ ಇಂಡಿಯಾದ ಟಿ20 ನಾಯಕತ್ವವನ್ನು ವಹಿಸಿಕೊಳ್ಳಬೇಕೆಂದು ಆಯ್ಕೆಗಾರರು ಬಯಸಿದ್ದರು. ಆದರೆ ರೋಹಿತ್ ಕೆಲವು ದಿನಗಳ ಕಾಲ ವಿರಾಮ ಕೇಳಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ.

9 / 9
ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಹಾಗೂ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ಆಡುವುದಿಲ್ಲ. ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅವರು ನೇರವಾಗಿ ಭಾರತ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ರೋಹಿತ್ ಕೋರಿಕೆಯಿಂದಾಗಿ ಆಯ್ಕೆದಾರರು ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ನಾಯಕತ್ವವನ್ನು ಸೂರ್ಯಕುಮಾರ್ ಯಾದವ್‌ಗೆ ನೀಡಿದ್ದಾರೆ. ಕೆಎಲ್ ರಾಹುಲ್ ಏಕದಿನ ಸರಣಿಯ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.