Brian Lara on Gill: ‘ನನ್ನ ಈ 2 ವಿಶ್ವ ದಾಖಲೆಗಳನ್ನು ಶುಭ್​ಮನ್ ಗಿಲ್ ಮುರಿಯಲಿದ್ದಾರೆ’; ಬ್ರಿಯಾನ್ ಲಾರಾ

Brian Lara on Gill: ವಿಂಡೀಸ್ ದಿಗ್ಗಜ ಬ್ರಿಯಾನ್ ಲಾರಾ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಅನನ್ಯ ದಾಖಲೆಗಳನ್ನು ನಿರ್ಮಿಸಿದ್ದಾರೆ. ಇದುವರೆಗೂ ವಿಶ್ವದ ಯಾವುದೇ ಬ್ಯಾಟ್ಸ್‌ಮನ್‌ಗಳಿಗೂ ಆ ದಾಖಲೆಗಳನ್ನು ಮುರಿಯಲು ಸಾಧ್ಯವಾಗಿಲ್ಲ. ಆದರೆ ಇದೀಗ ಶುಭ್​ಮನ್ ಗಿಲ್ ಈ ದಾಖಲೆ ಮುರಿಯಬಹುದು ಎಂದು ಲಾರಾ ಅಭಿಪ್ರಾಯಪಟ್ಟಿದ್ದಾರೆ.

ಪೃಥ್ವಿಶಂಕರ
|

Updated on: Dec 06, 2023 | 11:32 AM

ದಕ್ಷಿಣ ಆಫ್ರಿಕಾ ವಿರುದ್ಧದ ಎಲ್ಲಾ ಮೂರು ಮಾದರಿಗಳ ಸರಣಿಯನ್ನು ಆಡುವ ಸಲುವಾಗಿ ಭಾರತ ತಂಡ ಇಂದು ಆಫ್ರಿಕಾಗೆ ವಿಮಾನ ಹತ್ತಿದೆ. ಡಿಸೆಂಬರ್ 10 ರಿಂದ ಆರಂಭವಾಗಲಿರುವ ಟಿ20 ಸರಣಿಯೊಂದಿಗೆ ಭಾರತದ ಪ್ರವಾಸ ಆರಂಭವಾಗಲಿದೆ.

1 / 8
ಟಿ20 ಸರಣಿ ಮುಗಿದ ಬಳಿಕ ಏಕದಿನ ಸರಣಿ ನಡೆಯಲ್ಲಿದ್ದು, ಅಂತಿಮವಾಗಿ ಟೆಸ್ಟ್ ಸರಣಿ ನಡೆಯಲ್ಲಿದೆ. ಈ 2 ಎರಡು ಪಂದ್ಯಗಳ ಟೆಸ್ಟ್ ಸರಣಿ ಭಾರತಕ್ಕೆ ಬಹಳ ಮುಖ್ಯವಾಗಿದೆ. ಏಕೆಂದರೆ ಆಫ್ರಿಕಾ ನೆಲದಲ್ಲಿ ಭಾರತಕ್ಕೆ ಇದುವರೆಗೆ ಒಂದೇ ಒಂದು ಟೆಸ್ಟ್ ಸರಣಿಯನ್ನು ಗೆಲ್ಲಲು ಸಾಧ್ಯವಾಗಿಲ್ಲ.

2 / 8
ಹೀಗಾಗಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಒಳಗೊಂಡ ಭಾರತ ಟೆಸ್ಟ್ ತಂಡಕ್ಕೆ ಈ ಸರಣಿ ಅತ್ಯಂತ ಮಹತ್ವದಾಗಿದೆ. ಈ ನಡುವೆ ವೆಸ್ಟ್ ಇಂಡೀಸ್​ನ ಮಾಜಿ ಕ್ರಿಕೆಟಿಗ ಬ್ರಿಯಾನ್ ಲಾರಾ ಶುಭಮನ್ ಗಿಲ್ ಬಗ್ಗೆ ದೊಡ್ಡ ಭವಿಷ್ಯ ನುಡಿದಿದ್ದಾರೆ.

3 / 8
ವಿಂಡೀಸ್ ದಿಗ್ಗಜ ಬ್ರಿಯಾನ್ ಲಾರಾ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಅನನ್ಯ ದಾಖಲೆಗಳನ್ನು ನಿರ್ಮಿಸಿದ್ದಾರೆ. ಇದುವರೆಗೂ ವಿಶ್ವದ ಯಾವುದೇ ಬ್ಯಾಟ್ಸ್‌ಮನ್‌ಗಳಿಗೂ ಆ ದಾಖಲೆಗಳನ್ನು ಮುರಿಯಲು ಸಾಧ್ಯವಾಗಿಲ್ಲ. ಆದರೆ ಇದೀಗ ಶುಭ್​ಮನ್ ಗಿಲ್ ಈ ದಾಖಲೆ ಮುರಿಯಬಹುದು ಎಂದು ಲಾರಾ ಅಭಿಪ್ರಾಯಪಟ್ಟಿದ್ದಾರೆ.

4 / 8
ವಾಸ್ತವವಾಗಿ, ಕ್ರಿಕೆಟ್‌ನಲ್ಲಿ ಪ್ರತಿ ದಿನವೂ ದಾಖಲೆಗಳು ಮಾಡಲ್ಪಡುತ್ತವೆ ಮತ್ತು ಮುರಿಯಲ್ಪಡುತ್ತವೆ. ಆದರೆ ಕೆಲವು ದಾಖಲೆಗಳನ್ನು ಮುರಿಯಲು ತುಂಬಾ ಕಷ್ಟ. ಅವುಗಳಲ್ಲಿ ಒಂದು ಟೆಸ್ಟ್ ಕ್ರಿಕೆಟ್‌ನಲ್ಲಿ ಬ್ರಿಯಾನ್ ಲಾರಾ ಅವರ ದಾಖಲೆಯಾಗಿದೆ.

5 / 8
ಬ್ರಿಯಾನ್ ಲಾರಾ ಟೆಸ್ಟ್ ಕ್ರಿಕೆಟ್‌ನ ಇನ್ನಿಂಗ್ಸ್‌ನಲ್ಲಿ 400 ರನ್ ಬಾರಿಸಿದ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಇದನ್ನು ಹೊರತುಪಡಿಸಿ, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ, ಬ್ರಿಯಾನ್ ಲಾರಾ ಒಂದು ಪಂದ್ಯದಲ್ಲಿ ಅಜೇಯ 501 ರನ್ ಕಲೆಹಾಕಿದ ದಾಖಲೆಯನ್ನು ಹೊಂದಿದ್ದಾರೆ.

6 / 8
ಇದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಬ್ರಿಯಾನ್ ಲಾರಾ, ‘ಶುಭ್​ಮನ್ ಗಿಲ್ ಇಂದಿನ ಯುಗದ ಅತ್ಯುತ್ತಮ ಬ್ಯಾಟ್ಸ್‌ಮನ್​ಗಳಲ್ಲಿ ಒಬ್ಬರಾಗಿದ್ದು, ಅವರ ನನ್ನ ಈ ಎರಡೂ ದಾಖಲೆಗಳನ್ನು ಮುರಿಯಬಹುದು ಎಂದು ನಾನು ಭಾವಿಸುತ್ತೇನೆ. ಹಾಗೆಯೇ ಮುಂಬರುವ ದಿನಗಳಲ್ಲಿ ಗಿಲ್ ತನ್ನ ಹೆಸರಿನಲ್ಲಿ ಅನೇಕ ದೊಡ್ಡ ದಾಖಲೆಗಳನ್ನು ಮಾಡಲಿದ್ದಾರೆ ಮತ್ತು ಕ್ರಿಕೆಟ್ ಅನ್ನು ಆಳಲಿದ್ದಾರೆ ಎಂದಿದ್ದಾರೆ.

7 / 8
ಟೀಂ ಇಂಡಿಯಾ ಪರ ಇದುವರೆಗೆ 18 ಟೆಸ್ಟ್, 44 ಏಕದಿನ ಹಾಗೂ 11 ಟಿ20 ಪಂದ್ಯಗಳನ್ನು ಆಡಿರುವ ಗಿಲ್, ಟೆಸ್ಟ್‌ನಲ್ಲಿ 966 ರನ್, ಏಕದಿನದಲ್ಲಿ 2271 ರನ್ ಮತ್ತು ಟಿ20ಯಲ್ಲಿ 304 ರನ್ ಗಳಿಸಿದ್ದಾರೆ. ಹಾಗೆಯೇ ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ ದಾಖಲೆಯನ್ನು ಗಿಲ್ ಬರೆದಿದ್ದಾರೆ.

8 / 8
Follow us
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ

Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ

ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್

ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ

ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ

ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ

ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ

ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ

ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ