Rohit Sharma: ಟಿ20 ಕ್ರಿಕೆಟ್ನಲ್ಲಿ ಹೊಸ ವರ್ಲ್ಡ್ ರೆಕಾರ್ಡ್ ಬರೆದ ರೋಹಿತ್ ಶರ್ಮಾ
TV9 Web | Updated By: ಝಾಹಿರ್ ಯೂಸುಫ್
Updated on:
Jan 15, 2024 | 7:59 AM
Rohit Sharma Records: ಅಫ್ಘಾನಿಸ್ತಾನ್ ವಿರುದ್ಧದ ಈ ಪಂದ್ಯದಲ್ಲಿ ಕಣಕ್ಕಿಳಿಯುವುದರೊಂದಿಗೆ ರೋಹಿತ್ ಶರ್ಮಾ ಟಿ20 ಕ್ರಿಕೆಟ್ನಲ್ಲಿ 150 ಪಂದ್ಯಗಳನ್ನು ಪೂರೈಸಿದರು. ಈ ಮೂಲಕ ಚುಟುಕು ಕ್ರಿಕೆಟ್ನಲ್ಲಿ 150 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
1 / 8
ಇಂದೋರ್ನ ಹೋಲ್ಕರ್ ಮೈದಾನದಲ್ಲಿ ನಡೆದ ಅಫ್ಘಾನಿಸ್ತಾನ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ಇದುವರೆಗೆ ಯಾವುದೇ ಆಟಗಾರ ಮಾಡದ ದಾಖಲೆ ಎಂಬುದು ವಿಶೇಷ.
2 / 8
ಅಫ್ಘಾನ್ ವಿರುದ್ಧದ ಈ ಪಂದ್ಯದಲ್ಲಿ ಕಣಕ್ಕಿಳಿಯುವುದರೊಂದಿಗೆ ರೋಹಿತ್ ಶರ್ಮಾ ಟಿ20 ಕ್ರಿಕೆಟ್ನಲ್ಲಿ 150 ಪಂದ್ಯಗಳನ್ನು ಪೂರೈಸಿದರು. ಈ ಮೂಲಕ ಚುಟುಕು ಕ್ರಿಕೆಟ್ನಲ್ಲಿ 150 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
3 / 8
ರೋಹಿತ್ ಶರ್ಮಾ 150 ಪಂದ್ಯಗಳಲ್ಲಿ 4 ಶತಕಗಳೊಂದಿಗೆ 3853 ರನ್ ಕಲೆಹಾಕಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಪೇರಿಸಿದ ವಿಶ್ವದ 2ನೇ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನೂ ಕೂಡ ಹೊಂದಿದ್ದಾರೆ.
4 / 8
ಇನ್ನು ಟಿ20 ಕ್ರಿಕೆಟ್ನಲ್ಲಿ ಅತೀ ಹೆಚ್ಚು ಪಂದ್ಯಗಳನ್ನಾಡಿದ 2ನೇ ಆಟಗಾರ ಪೌಲ್ ಸ್ಟೀರ್ಲಿಂಗ್. ಐರ್ಲೆಂಡ್ ಪರ 134 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಸ್ಟೀರ್ಲಿಂಗ್ 1 ಶತಕದೊಂದಿಗೆ 3438 ರನ್ ಕಲೆಹಾಕಿದ್ದಾರೆ.
5 / 8
ಹಾಗೆಯೇ ಐರ್ಲೆಂಡ್ ಆಟಗಾರ ಜಾರ್ಜ್ ಹೆನ್ರಿ ಡಾಕ್ರೆಲ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಒಟ್ಟು 128 ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಡಾಕ್ರೆಲ್ 969 ರನ್ ಹಾಗೂ 83 ವಿಕೆಟ್ಗಳನ್ನು ಕಬಳಿಸಿದ್ದಾರೆ.
6 / 8
ನಾಲ್ಕನೇ ಸ್ಥಾನದಲ್ಲಿ ಪಾಕಿಸ್ತಾನದ ಶೊಯೇಬ್ ಮಲಿಕ್ ಇದ್ದು, ಐಸಿಸಿ ಹಾಗೂ ಪಾಕ್ ಪರ 124 ಟಿ20 ಪಂದ್ಯಗಳನ್ನಾಡಿರುವ ಮಲಿಕ್ 2435 ರನ್ಗಳನ್ನು ಕಲೆಹಾಕಿದ್ದಾರೆ.
7 / 8
ಇನ್ನು ನ್ಯೂಝಿಲೆಂಡ್ನ ಮಾರ್ಟಿನ್ ಗಪ್ಟಿಲ್ ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಕಿವೀಸ್ ಪರ 122 ಪಂದ್ಯಗಳನ್ನಾಡಿರುವ ಗಪ್ಟಿಲ್ 2 ಶತಕಗಳೊಂದಿಗೆ ಒಟ್ಟು 3531 ರನ್ ಕಲೆಹಾಕಿದ್ದಾರೆ.
8 / 8
ಅತೀ ಹೆಚ್ಚು ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ 10ನೇ ಸ್ಥಾನದಲ್ಲಿದ್ದಾರೆ. ಭಾರತದ ಪರ 116 ಟಿ20 ಪಂದ್ಯಗಳನ್ನಾಡಿರುವ ಕೊಹ್ಲಿ ಒಟ್ಟು 4037 ರನ್ ಕಲೆಹಾಕಿದ್ದಾರೆ. ಅಂದರೆ ಕಡಿಮೆ ಪಂದ್ಯಗಳನ್ನಾಡಿದರೂ ರನ್ ಗಳಿಕೆಯಲ್ಲಿ ಕಿಂಗ್ ಕೊಹ್ಲಿ ಅಗ್ರಸ್ಥಾನದಲ್ಲಿರುವುದು ವಿಶೇಷ.