Rohit Sharma Record: ಸಚಿನ್, ಧೋನಿ ಇಬ್ಬರು ದಿಗ್ಗಜ ಆಟಗಾರರ ದಾಖಲೆ ಉಡೀಸ್ ಮಾಡಿದ ರೋಹಿತ್ ಶರ್ಮಾ
IND vs AUS, WTC Final; ದ್ವಿತೀಯ ಇನ್ನಿಂಗ್ಸ್ನಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ ವಿಶೇಷ ದಾಖಲೆ ಬರೆದಿದ್ದಾರೆ. 60 ಎಸೆತಗಳಲ್ಲಿ 7 ಫೋರ್, 1 ಸಿಕ್ಸರ್ ಸಿಡಿಸಿ 43 ರನ್ ಚಚ್ಚಿದ ಹಿಟ್ಮ್ಯಾನ್ ಅವರು ಸಚಿನ್, ಧೋನಿ ದಾಖಲೆಯನ್ನು ಪುಡಿಗಟ್ಟಿದ್ದಾರೆ.
1 / 7
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಭಾರತ ಗೆಲುವಿಗಾಗಿ ಹೋರಾಟ ನಡೆಸುತ್ತಿದೆ. ಆಸ್ಟ್ರೇಲಿಯಾ ನೀಡಿರುವ 444 ರನ್ಗಳ ಟಾರ್ಗೆಟ್ ಬೆನ್ನಟ್ಟಿರುವ ಟೀಮ್ ಇಂಡಿಯಾ ನಾಲ್ಕನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 164 ರನ್ ಗಳಿಸಿದ್ದು, ಗೆಲುವಿಗೆ 280 ರನ್ಗಳ ಅವಶ್ಯಕತೆಯಿದೆ.
2 / 7
ಈ ಪಂದ್ಯದ ದ್ವಿತೀಯ ಇನ್ನಿಂಗ್ಸ್ನಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ ವಿಶೇಷ ದಾಖಲೆ ಬರೆದಿದ್ದಾರೆ. 60 ಎಸೆತಗಳಲ್ಲಿ 7 ಫೋರ್, 1 ಸಿಕ್ಸರ್ ಸಿಡಿಸಿ 43 ರನ್ ಚಚ್ಚಿದ ಹಿಟ್ಮ್ಯಾನ್ ಅವರು ಸಚಿನ್, ಧೋನಿ ದಾಖಲೆಯನ್ನು ಪುಡಿಗಟ್ಟಿದ್ದಾರೆ.
3 / 7
ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಭಾರತದ ಮೂರನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 69 ಸಿಕ್ಸರ್ ಬಾರಿಸಿದ್ದ ಸಚಿನ್ ತೆಂಡೂಲ್ಕರ್ ಅವರನ್ನು ರೋಹಿತ್ ಹಿಂದಿಕ್ಕಿದ್ದಾರೆ.
4 / 7
ಸದ್ಯ ರೋಹಿತ್ ಟೆಸ್ಟ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಭಾರತೀಯರ ಪೈಕಿ ರೋಹಿತ್ ಮೂರನೇ ಸ್ಥಾನದಲ್ಲಿದ್ದರೆ, ಎಂಎಸ್ ಧೋನಿ (78) ಮತ್ತು ವೀರೇಂದ್ರ ಸೆಹ್ವಾಗ್ (90) ರೋಹಿತ್ ಅವರಿಗಿಂತ ಮುಂದಿನೆರಡು ಸ್ಥಾನಗಳನ್ನು ಪಡೆದುಕೊಂಡಿದ್ದರೆ.
5 / 7
ಇದರ ಜೊತೆಗೆ ಭಾರತದ ಮಾಜಿ ನಾಯಕ ಎಂಎಸ್ ಧೋನಿ ದಾಖಲೆಯನ್ನು ರೋಹಿತ್ ಮುರಿದಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಧೋನಿ ಅವರು ಒಟ್ಟು 535 ಪಂದ್ಯಗಳಿಂದ 17092 ರನ್ ಗಳಿಸಿದ್ದರು. ಇದೀಗ ರೋಹಿತ್ 441 ಪಂದ್ಯಗಳಲ್ಲಿ 17115 ರನ್ ಬಾರಿಸುವ ಮೂಲಕ ಧೋನಿ ಸಾಧನೆಯನ್ನು ಮುರಿದಿದ್ದಾರೆ.
6 / 7
ರೋಹಿತ್ ಅವರು 243 ಏಕದಿನ ಪಂದ್ಯಗಳಲ್ಲಿ 9,825 ರನ್, 148 ಟಿ20 ಪಂದ್ಯಗಳಲ್ಲಿ 3853 ರನ್ಸ್ ಮತ್ತು 50 ಟೆಸ್ಟ್ ಪಂದ್ಯಗಳಲ್ಲಿ 3,437 ರನ್ ಕಲೆಹಾಕಿದ್ದಾರೆ. ಭಾರತ ಪರ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಸಚಿನ್ ಮೊದಲ ಸ್ಥಾನದಲ್ಲಿದ್ದು ಒಟ್ಟು 34357 ರನ್ ಗಳಿಸಿದ್ದಾರೆ.
7 / 7
ದ್ವಿತೀಯ ಇನಿಂಗ್ಸ್ನಲ್ಲಿ ಅಜೇಯ 44 ರನ್ ಬಾರಿಸುವ ಮೂಲಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ 2 ಸಾವಿರ ರನ್ ಪೂರೈಸಿದ್ದಾರೆ. ಈ ಮೂಲಕ ಈ ಸಾಧನೆಗೈದ ಭಾರತದ 5ನೇ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.
Published On - 9:40 am, Sun, 11 June 23