- Kannada News Photo gallery Cricket photos Kannada News | Asia Cup 2023: Asia cup set to be played in Pakistan and Sri Lanka
Asia Cup 2023: ಹೈಬ್ರಿಡ್ ಟೂರ್ನಿ: 2 ದೇಶಗಳಲ್ಲಿ ನಡೆಯಲಿದೆ ಏಷ್ಯಾಕಪ್
Asia Cup 2023: ಏಷ್ಯಾಕಪ್ ನಡೆಸಲು ಸೆಪ್ಟೆಂಬರ್ 1 ರಿಂದ 17 ರವರೆಗೆ ದಿನಾಂಕವನ್ನು ಮೀಸಲಿಡಲಾಗಿದ್ದು, ಶೀಘ್ರದಲ್ಲೇ ವೇಳಾಪಟ್ಟಿಯನ್ನು ಪ್ರಕಟಿಸುವ ಸಾಧ್ಯತೆಯಿದೆ.
Updated on:Jun 11, 2023 | 2:47 PM

Asia Cup 2023: ಈ ಬಾರಿಯ ಏಷ್ಯಾಕಪ್ ಅನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಅನುಮೋದಿಸಿದೆ. ಅಂದರೆ ಏಷ್ಯಾಕಪ್ 2023 ನಿಗದಿಯಂತೆ ಪಾಕಿಸ್ತಾನದಲ್ಲೇ ನಡೆಯಲಿದ್ದು, ಇದಾಗ್ಯೂ ಭಾರತದ ಮ್ಯಾಚ್ಗಳನ್ನು ಶ್ರೀಲಂಕಾದಲ್ಲಿ ಆಯೋಜಿಸಲಾಗುತ್ತದೆ.

ಹೈಬ್ರಿಡ್ ಮಾದರಿಯಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಭಾರತದ ವಿರುದ್ಧದ ಪಂದ್ಯಗಳಿಗೆ ಉಳಿದ ತಂಡಗಳು ಶ್ರೀಲಂಕಾಗೆ ಆಗಮಿಸಲಿದೆ. ಹಾಗೆಯೇ ಭಾರತ ತಂಡ ಫೈನಲ್ ಪ್ರವೇಶಿಸಿದರೆ, ಅಂತಿಮ ಹಣಾಹಣಿ ಕೂಡ ಲಂಕಾದಲ್ಲೇ ನಡೆಯಲಿದೆ. ಇನ್ನುಳಿದ ಪಂದ್ಯಗಳು ಪಾಕಿಸ್ತಾನದಲ್ಲೇ ಜರುಗಲಿದೆ.

ಈ ಬಾರಿಯ ಏಷ್ಯಾಕಪ್ ಆಯೋಜನೆಯ ಹಕ್ಕು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಹೊಂದಿದ್ದು, ಇದಾಗ್ಯೂ ಪಾಕ್ನಲ್ಲಿ ಟೂರ್ನಿ ಆಡುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿತ್ತು. ಹೀಗಾಗಿ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿಯನ್ನು ಆಯೋಜಿಸಲು ಪಿಸಿಬಿ ಮುಂದಾಗಿದೆ.

ಅದರಂತೆ ಇದೀಗ ಪಾಕಿಸ್ತಾನ್ ಹಾಗೂ ಶ್ರೀಲಂಕಾದಲ್ಲಿ ಏಷ್ಯಾಕಪ್ 2023 ನಡೆಯುವುದು ಖಚಿತವಾಗಿದೆ. ಇನ್ನು ಟೂರ್ನಿ ಆಯೋಜನೆಗೆ ಸೆಪ್ಟೆಂಬರ್ 1 ರಿಂದ 17 ರವರೆಗೆ ದಿನಾಂಕವನ್ನು ಮೀಸಲಿಡಲಾಗಿದ್ದು, ಶೀಘ್ರದಲ್ಲೇ ವೇಳಾಪಟ್ಟಿಯನ್ನು ಪ್ರಕಟಿಸುವ ಸಾಧ್ಯತೆಯಿದೆ.

ಇನ್ನು ಈ ಬಾರಿ ಕೂಡ ಭಾರತ-ಪಾಕಿಸ್ತಾನ್ ತಂಡಗಳು ಒಂದೇ ಗ್ರೂಪ್ನಲ್ಲಿದೆ. ಹೀಗಾಗಿ ಶ್ರೀಲಂಕಾದಲ್ಲಿ ಸಾಂಪ್ರದಾಯಿಕ ಎದುರಾಳಿಗಳ ಮುಖಾಮುಖಿಯನ್ನು ಎದುರು ನೋಡಬಹುದು.

ಹಾಗೆಯೇ ಇದೇ ಗ್ರೂಪ್ಗೆ ನೇಪಾಳ ತಂಡ ಕೂಡ ಎಂಟ್ರಿ ಕೊಟ್ಟಿದೆ. ಅಂದರೆ ಇದೇ ಮೊದಲ ಬಾರಿಗೆ ನೇಪಾಳ ತಂಡಕ್ಕೆ ಏಷ್ಯಾದ ಬಲಿಷ್ಠ ಎರಡು ದೇಶಗಳ ವಿರುದ್ಧ ಆಡುವ ಅವಕಾಶ ದೊರೆಯುತ್ತಿದೆ. ಅದರಂತೆ ಈ ಬಾರಿ ಏಷ್ಯಾಕಪ್ ಆಡಲಿರುವ 6 ತಂಡಗಳು ಈ ಕೆಳಗಿನಂತಿವೆ.

ಪಾಕಿಸ್ತಾನ್ (ಗ್ರೂಪ್-A)

ಭಾರತ (ಗ್ರೂಪ್-A)

ನೇಪಾಳ (ಗ್ರೂಪ್-A)

ಶ್ರೀಲಂಕಾ (ಗ್ರೂಪ್-B)

ಬಾಂಗ್ಲಾದೇಶ್ (ಗ್ರೂಪ್-B)

ಅಫ್ಘಾನಿಸ್ತಾನ್ (ಗ್ರೂಪ್-B)
Published On - 2:34 pm, Sun, 11 June 23



















