Jasprit Bumrah: ಐರ್ಲೆಂಡ್ ಸರಣಿಗೆ ಯಾರ್ಕರ್ ಕಿಂಗ್? ಬುಮ್ರಾ ಕಂಬ್ಯಾಕ್ ಬಗ್ಗೆ ರೋಹಿತ್ ಹೇಳಿದ್ದೇನು?

|

Updated on: Jul 27, 2023 | 10:21 AM

Rohit Sharma: ಪ್ರಸ್ತುತ ಎನ್​ಸಿಎನಲ್ಲಿ ಅಂತಿಮ ಸಿದ್ಧತೆಯಲ್ಲಿರುವ ಬುಮ್ರಾ ತಂಡಕ್ಕೆ ಮರಳುವ ಬಗ್ಗೆ ವರದಿಗಳು ಕೇಳಿಬರುತ್ತಿವೆ. ಇದೀಗ ಮೊದಲ ಬಾರಿಗೆ ಬುಮ್ರಾ ಮರಳುವಿಕೆಯ ಬಗ್ಗೆ ರೋಹಿತ್ ಶರ್ಮಾ ಮೌನ ಮುರಿದಿದ್ದಾರೆ.

1 / 7
ಪ್ರಸ್ತುತ ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಂ ಇಂಡಿಯಾ, ಆ ಬಳಿಕ ಮೂರು ಪಂದ್ಯಗಳ ಟಿ20 ಸರಣಿಗಾಗಿ ಐರ್ಲೆಂಡ್ ಪ್ರವಾಸ ಮಾಡಲಿದೆ. ಈ ಪ್ರವಾಸದಲ್ಲಿ ತಂಡದ ಹಿರಿಯ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಕೆಲವು ತಿಂಗಳ ಬಳಿಕ ಟೀಂ ಇಂಡಿಯಾ ಸೇರಿಕೊಳ್ಳಲಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ.

2 / 7
ಕಳೆದ ವರ್ಷ ನಡೆದ ಏಷ್ಯಾಕಪ್‌ಗೂ ಮುನ್ನ ಬುಮ್ರಾ ಅವರಿಗೆ ಗಾಯದ ಸಮಸ್ಯೆ ಶುರುವಾಗಿತ್ತು. ಹೀಗಾಗಿ ಬುಮ್ರಾ ಪಂದ್ಯಾವಳಿಯಿಂದ ಹಿಂದೆ ಸರಿದಿದ್ದರು. ನಂತರ ದಕ್ಷಿಣ ಆಫ್ರಿಕಾ ವಿರುದ್ಧದ ಸ್ವದೇಶಿ ಸರಣಿಯಲ್ಲಿ ತಂಡಕ್ಕೆ ಮರಳಿದರಾದರೂ, ಸರಣಿಯ ಮಧ್ಯದಲ್ಲಿಯೇ ತಂಡವನ್ನು ತೊರೆದಿದ್ದರು.

3 / 7
ಗಾಯದ ಪರಿಣಾಮ ಬುಮ್ರಾ ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ನಿಂದ ಹೊರಗುಳಿದಿದ್ದರು. ಬಳಿಕ ವರ್ಷದ ಜನವರಿಯಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಯಿತು. ಆದರೆ ನಂತರ ಬೆನ್ನು ನೋವಿಗೆ ತುತ್ತಾದ ಬುಮ್ರಾ 2023 ರ ಐಪಿಎಲ್, ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ನಡೆದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಮತ್ತು WTC ಫೈನಲ್‌ನಿಂದ ಹೊರಗುಳಿದಿದ್ದರು.

4 / 7
ಪ್ರಸ್ತುತ ಎನ್​ಸಿಎನಲ್ಲಿ ಅಂತಿಮ ಸಿದ್ಧತೆಯಲ್ಲಿರುವ ಬುಮ್ರಾ ತಂಡಕ್ಕೆ ಮರಳುವ ಬಗ್ಗೆ ವರದಿಗಳು ಕೇಳಿಬರುತ್ತಿವೆ. ಇದೀಗ ಮೊದಲ ಬಾರಿಗೆ ಬುಮ್ರಾ ಮರಳುವಿಕೆಯ ಬಗ್ಗೆ ರೋಹಿತ್ ಶರ್ಮಾ ಮೌನ ಮುರಿದಿದ್ದಾರೆ.

5 / 7
ಈ ಬಗ್ಗೆ ಮಾತನಾಡಿರುವ ರೋಹಿತ್, ಐರ್ಲೆಂಡ್ ಪ್ರವಾಸಕ್ಕೆ ತಂಡವನ್ನು ಇನ್ನೂ ಆಯ್ಕೆ ಮಾಡದ ಕಾರಣ ಬುಮ್ರಾ ಐರ್ಲೆಂಡ್‌ಗೆ ಹೋಗುತ್ತಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಬುಮ್ರಾ ಪಂದ್ಯವನ್ನು ಆಡಿದರೆ ಒಳ್ಳೆಯದು. ಬುಮ್ರಾ ಗಂಭೀರ ಗಾಯದಿಂದ ಚೇತರಿಸಿಕೊಂಡು ವಾಪಸಾಗುವ ಯತ್ನದಲ್ಲಿದ್ದು, ಹೆಚ್ಚು ಪಂದ್ಯಗಳನ್ನು ಆಡಿದರೆ ಅವರಿಗೆ ಮಾತ್ರವಲ್ಲ ಟೀಂ ಇಂಡಿಯಾಕ್ಕೂ ಒಳಿತು ಎಂದರು.

6 / 7
ಜಸ್ಪ್ರೀತ್ ಬುಮ್ರಾ ಅವರು ಏಕದಿನ ವಿಶ್ವಕಪ್‌ನಲ್ಲಿ ಆಡುತ್ತಿರುವ ಕುರಿತು ಮಾತನಾಡಿದ ರೋಹಿತ್, ತಂಡವು ಈ ಬಗ್ಗೆ ಎನ್‌ಸಿಎಯೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದೆ. ಅವರ ಚೇತರಿಕೆಯ ಬಗ್ಗೆ ಅಪ್​ಡೇಟ್ ಪಡೆಯಲ್ಲಾಗುತ್ತಿದೆ. ಮುಂದಿನ ಒಂದು ತಿಂಗಳಲ್ಲಿ ಅವರು ಎಷ್ಟು ಪಂದ್ಯಗಳನ್ನು ಆಡುತ್ತಾರೆ ಎಂಬುದು ಕೂಡ ಇದರಲ್ಲಿ ಮುಖ್ಯವಾಗಿದೆ. ಅವರು ತಂಡವನ್ನು ಸೇರಿಕೊಂಡರೆ, ಅದು ತಂಡದ ನೈತಿಕತೆಯನ್ನು ಹೆಚ್ಚಿಸುತ್ತದೆ. ಅವರು ತಂಡಕ್ಕೆ X ಫ್ಯಾಕ್ಟರ್ ಆಗಲಿದ್ದಾರೆ ಎಂದು ರೋಹಿತ್ ಹೇಳಿದ್ದಾರೆ.

7 / 7
ಜಸ್ಪ್ರೀತ್ ಬುಮ್ರಾ ಏಕದಿನ ವಿಶ್ವಕಪ್‌ನಲ್ಲಿ ಆಡುವುದನ್ನು ನೋಡಬಹುದು ಎಂಬುದು ರೋಹಿತ್ ಶರ್ಮಾ ಅವರ ಮಾತುಗಳಿಂದ ಖಚಿತವಾಗಿದೆ. ಐರ್ಲೆಂಡ್ ಪ್ರವಾದ ನಂತರ ಟೀಂ ಇಂಡಿಯಾ ಏಷ್ಯಾಕಪ್, ಬಳಿಕ ಆಸ್ಟ್ರೇಲಿಯಾ ವಿರುದ್ಧ 3 ಏಕದಿನ ಪಂದ್ಯಗಳ ಸರಣಿಯನ್ನು ಆಡಲಿದೆ. ಒಂದು ವೇಳೆ ಬುಮ್ರಾ ಏಕದಿನ ವಿಶ್ವಕಪ್ ಆಡಬೇಕಾದರೆ, ಈ ಮೂರು ಸರಣಿಗಳಲ್ಲಿ ತಂಡದ ಪರ ಕಣಕ್ಕಿಳಿಯಬೇಕಿದೆ.