- Kannada News Photo gallery Cricket photos Pakistan batsman Saud Shakeel creates a unique record in Test
Saud Shakeel: ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಿಸಿದ ಸೌದ್ ಶಕೀಲ್
Saud Shakeel World Record: ಕೇವಲ 13 ಇನಿಂಗ್ಸ್ಗಳ ಮೂಲಕ 875 ರನ್ ಬಾರಿಸಿರುವ ಸೌದ್ ಶಕೀಲ್ ಟೆಸ್ಟ್ ಕ್ರಿಕೆಟ್ನಲ್ಲಿ ಅತೀ ವೇಗವಾಗಿ 1000 ಸಾವಿರ ರನ್ ಕಲೆಹಾಕಲಿದ್ದಾರಾ ಕಾದು ನೋಡಬೇಕಿದೆ.
Updated on: Jul 27, 2023 | 6:14 PM

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯನ್ನು ಪಾಕಿಸ್ತಾನ್ ತಂಡ 2-0 ಅಂತರದಿಂದ ಗೆದ್ದುಕೊಂಡಿದೆ. ಮೊದಲ ಪಂದ್ಯದಲ್ಲಿ 4 ವಿಕೆಟ್ಗಳ ಜಯ ಸಾಧಿಸಿದ್ದ ಪಾಕಿಸ್ತಾನ್, 2ನೇ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 222 ರನ್ಗಳ ಅಮೋಘ ಗೆಲುವು ದಾಖಲಿಸಿದೆ.

ವಿಶೇಷ ಎಂದರೆ ಈ ಎರಡು ಪಂದ್ಯಗಳಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ಸೌದ್ ಶಕೀಲ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಯಾರು ಮಾಡದ ಸಾಧನೆ ಮಾಡಿದ್ದಾರೆ. ಮೊದಲ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಸಿಡಿಸಿ ಮಿಂಚಿದ್ದ ಶಕೀಲ್, 2ನೇ ಪಂದ್ಯದಲ್ಲಿ 57 ರನ್ ಬಾರಿಸಿದ್ದರು.

ಇದರೊಂದಿಗೆ 146 ವರ್ಷಗಳ ಇತಿಹಾಸವಿರುವ ಟೆಸ್ಟ್ ಕ್ರಿಕೆಟ್ನಲ್ಲಿ ಮೊದಲ 7 ಪಂದ್ಯಗಳಲ್ಲಿ ಅರ್ಧಶತಕಗಿಂತ ಹೆಚ್ಚಿನ ರನ್ ಕಲೆಹಾಕಿದ ವಿಶ್ವ ಮೊದಲ ಬ್ಯಾಟರ್ ಎಂಬ ವಿಶ್ವ ದಾಖಲೆ ಸೌದ್ ಶಕೀಲ್ ಪಾಲಾಗಿದೆ.

7 ಟೆಸ್ಟ್ ಪಂದ್ಯಗಳಲ್ಲಿ ಇದುವರೆಗೆ 13 ಇನಿಂಗ್ಸ್ ಆಡಿರುವ ಸೌದ್ ಶಕೀಲ್ ಕ್ರಮವಾಗಿ 37, 76, 63, 94, 23, 53, 22, 55*, 125*, 32, 208*, 30, ಮತ್ತು 57 ರನ್ಗಳಿಸಿದ್ದಾರೆ. ಈ 13 ಇನಿಂಗ್ಸ್ಗಳಲ್ಲಿ 6 ಅರ್ಧಶತಕಗಳಿದ್ದರೆ, 1 ದ್ವಿಶತಕ ಹಾಗೂ 1 ಶತಕಗಳು ಸೇರಿವೆ.

ಸದ್ಯ ಕೇವಲ 13 ಇನಿಂಗ್ಸ್ಗಳ ಮೂಲಕ 875 ರನ್ ಬಾರಿಸಿರುವ ಸೌದ್ ಶಕೀಲ್ ಟೆಸ್ಟ್ ಕ್ರಿಕೆಟ್ನಲ್ಲಿ ಅತೀ ವೇಗವಾಗಿ 1000 ಸಾವಿರ ರನ್ ಕಲೆಹಾಕಿದ ದಾಖಲೆ ನಿರ್ಮಿಸಲಿದ್ದಾರಾ ಕಾದು ನೋಡಬೇಕಿದೆ.
























