ಬಾಬರ್ ಆಝಂಗೆ ಎಂಟರ ಗಂಟು… ಅಗ್ರಸ್ಥಾನದಲ್ಲಿ ರೋಹಿತ್ ಶರ್ಮಾ

Updated on: Aug 18, 2025 | 1:22 PM

Asia Cup 2025: ಬಹುನಿರೀಕ್ಷಿತ ಏಷ್ಯಾಕಪ್ ಟೂರ್ನಿಯು ಸೆಪ್ಟೆಂಬರ್ 9 ರಿಂದ ಶುರುವಾಗಲಿದೆ. ಯುಎಇನಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ್, ಬಾಂಗ್ಲಾದೇಶ್, ಅಫ್ಘಾನಿಸ್ತಾನ್, ಶ್ರೀಲಂಕಾ, ಯುಎಇ, ಒಮಾನ್ ಹಾಗೂ ಹಾಂಗ್ ಕಾಂಗ್ ತಂಡಗಳು ಕಣಕ್ಕಿಳಿಯಲಿವೆ. ಈ ಟೂರ್ನಿಯ ಮೂಲಕ ಟಿ20 ಕ್ರಿಕೆಟ್​ಗೆ ಕಂಬ್ಯಾಕ್ ಮಾಡುವ ಬಾಬರ್ ಆಝಂ ಕನಸು ಹುಸಿಯಾಗಿದೆ.

1 / 5
ಬರೋಬ್ಬರಿ ಒಂದು ವರ್ಷದ ಬಳಿಕ ಬಾಬರ್ ಆಝಂ (Babar Azam) ಪಾಕಿಸ್ತಾನ್ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅದರಂತೆ ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಬಾಬರ್ ಕಣಕ್ಕಿಳಿಯುವುದು ಖಚಿತ ಎಂದೇ ಹೇಳಬಹುದು. ಇತ್ತ ಬಾಬರ್ ಆಝಂ ಕಣಕ್ಕಿಳಿದರೆ ರೋಹಿತ್ ಶರ್ಮಾ ಅವರ ವಿಶ್ವ ದಾಖಲೆಯೊಂದು ಧೂಳೀಪಟವಾಗಲಿದೆ.

2 / 5
ಹೌದು, ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ವಿಶ್ವ ದಾಖಲೆ ಬರೆಯಲು ಬಾಬರ್ ಆಝಂಗೆ ಕೇವಲ 9 ರನ್​ಗಳ ಅವಶ್ಯಕತೆಯಿದೆ. ಇದೀಗ ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಬಾಬರ್ ಕೇವಲ 9 ರನ್​ಗಳಿಸಿದರೆ ಚುಟುಕು ಕ್ರಿಕೆಟ್​ನ ರನ್ ಸರದಾರ ಎನಿಸಿಕೊಳ್ಳಲಿದ್ದಾರೆ.

3 / 5
ಸದ್ಯ  ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್​ಗಳ ಪಟ್ಟಿಯಲ್ಲಿ ಹಿಟ್​ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಅಗ್ರಸ್ಥಾನದಲ್ಲಿದ್ದಾರೆ. ಟೀಮ್ ಇಂಡಿಯಾ ಪರ 151 ಟಿ20 ಇನಿಂಗ್ಸ್ ಆಡಿರುವ ರೋಹಿತ್ ಶರ್ಮಾ ಒಟ್ಟು 4231 ರನ್​ ಗಳಿಸಿ ಈ ಭರ್ಜರಿ ದಾಖಲೆ ನಿರ್ಮಿಸಿದ್ದಾರೆ.

4 / 5
ಈ ದಾಖಲೆ ಮುರಿಯಲು ಬಾಬರ್ ಆಝಂಗೆ ಬೇಕಿರುವುದು ಕೇವಲ 9 ರನ್​ಗಳು ಮಾತ್ರ. ಪಾಕ್ ಪರ ಈವರೆಗೆ 121 ಟಿ20 ಇನಿಂಗ್ಸ್ ಆಡಿರುವ ಬಾಬರ್ ಒಟ್ಟು 4223 ರನ್​ ಕಲೆಹಾಕಿದ್ದಾರೆ. ಈ ಮೂಲಕ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತೀ ಹೆಚ್ಚು ರನ್​ಗಳಿಸಿದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.

5 / 5
ಪಾಕಿಸ್ತಾನ್ ಹಾಗೂ ಸೌತ್ ಆಫ್ರಿಕಾ ನಡುವೆ ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಈ ಪಂದ್ಯಗಳ ಮೂಲಕ ಒಂಬತ್ತು ರನ್ ಗಳಿಸಿದರೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತೀ ಹೆಚ್ಚು ರನ್​ ಪೇರಿಸಿದ ವಿಶ್ವ ದಾಖಲೆ ಬಾಬರ್ ಆಝಂ ಪಾಲಾಗಲಿದೆ.