Rohit Sharma Record: ಸಿಕ್ಸರ್ ಕಿಂಗ್: ಧೋನಿ ದಾಖಲೆ ಮುರಿದ ರೋಹಿತ್ ಶರ್ಮಾ

| Updated By: ಝಾಹಿರ್ ಯೂಸುಫ್

Updated on: Jan 18, 2023 | 3:54 PM

Rohit Sharma- MS Dhoni: ವಿಶೇಷ ಎಂದರೆ ಈ 2 ಸಿಕ್ಸ್​ನೊಂದಿಗೆ ಏಕದಿನ ಕ್ರಿಕೆಟ್​ನಲ್ಲಿ ಭಾರತದಲ್ಲಿ ಟೀಮ್ ಇಂಡಿಯಾ ಪರ ಅತ್ಯಧಿಕ ಸಿಕ್ಸ್​ ಬಾರಿಸಿದ ದಾಖಲೆ ಕೂಡ ರೋಹಿತ್ ಶರ್ಮಾ ಪಾಲಾಗಿದೆ.

1 / 6
ಹೈದರಾಬಾದ್​ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಭರ್ಜರಿ ದಾಖಲೆ ನಿರ್ಮಿಸಿದ್ದಾರೆ. ಈ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಹಿಟ್​ಮ್ಯಾನ್ 38 ಎಸೆತಗಳಲ್ಲಿ 4 ಫೋರ್ ಹಾಗೂ 2 ಸಿಕ್ಸ್​ನೊಂದಿಗೆ 34 ರನ್​ ಬಾರಿಸಿದ್ದರು.

2 / 6
ವಿಶೇಷ ಎಂದರೆ ಈ 2 ಸಿಕ್ಸ್​ನೊಂದಿಗೆ ಏಕದಿನ ಕ್ರಿಕೆಟ್​ನಲ್ಲಿ ಭಾರತದಲ್ಲಿ ಟೀಮ್ ಇಂಡಿಯಾ ಪರ ಅತ್ಯಧಿಕ ಸಿಕ್ಸ್​ ಬಾರಿಸಿದ ದಾಖಲೆ ಕೂಡ ರೋಹಿತ್ ಶರ್ಮಾ ಪಾಲಾಯಿತು.

3 / 6
ಈ ಹಿಂದೆ ಈ ರೆಕಾರ್ಡ್ ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿತ್ತು. ಧೋನಿ ಭಾರತದಲ್ಲಿ ಆಡಿದ ಏಕದಿನ ಪಂದ್ಯಗಳಲ್ಲಿ ಒಟ್ಟು 123 ಸಿಕ್ಸ್ ಬಾರಿಸಿದ್ದರು. ಇದೀಗ ಈ ದಾಖಲೆಯನ್ನು ಮುರಿದು ರೋಹಿತ್ ಶರ್ಮಾ ಹೊಸ ಇತಿಹಾಸ ನಿರ್ಮಿಸಿದ್ದಾರೆ.

4 / 6
ಸದ್ಯ ಭಾರತದಲ್ಲಿ ಕಣಕ್ಕಿಳಿದ ಏಕದಿನ ಇನಿಂಗ್ಸ್​ಗಳಲ್ಲಿ 125 ಸಿಕ್ಸ್ ಬಾರಿಸುವ ಮೂಲಕ ಹಿಟ್​ಮ್ಯಾನ್ ಅಗ್ರಸ್ಥಾನಕ್ಕೇರಿದ್ದಾರೆ. ವಿಶೇಷ ಎಂದರೆ ಏಕದಿನ ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾ ಪರ ಅತ್ಯಧಿಕ ಸಿಕ್ಸ್ ಸಿಡಿಸಿದ ದಾಖಲೆ ಕೂಡ ರೋಹಿತ್ ಶರ್ಮಾ ಹೆಸರಿನಲ್ಲಿದೆ.

5 / 6
ರೋಹಿತ್ ಶರ್ಮಾ 239 ಏಕದಿನ ಇನಿಂಗ್ಸ್​ಗಳಲ್ಲಿ ಒಟ್ಟು 265 ಸಿಕ್ಸ್ ಬಾರಿಸಿದ್ದಾರೆ. ಹಾಗೆಯೇ ಏಕದಿನ ಕ್ರಿಕೆಟ್​ನ ಸಿಕ್ಸರ್​ ಸರದಾರರ ಪಟ್ಟಿಯಲ್ಲಿ ಹಿಟ್​​ಮ್ಯಾನ್ 4ನೇ ಸ್ಥಾನದಲ್ಲಿದ್ದಾರೆ.

6 / 6
ಏಕದಿನ ಕ್ರಿಕೆಟ್​ನಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿದ ವಿಶ್ವ ದಾಖಲೆ ಪಾಕಿಸ್ತಾನದ ಶಾಹಿದ್ ಅಫ್ರಿದಿ ಹೆಸರಿನಲ್ಲಿದೆ. ಅಫ್ರಿದಿ 369 ಇನಿಂಗ್ಸ್​ನಲ್ಲಿ ಒಟ್ಟು 351 ಸಿಕ್ಸ್ ಬಾರಿಸಿದ್ದರು.