Ravindra Jadeja: ಮೊದಲ ಟೆಸ್ಟ್ನಲ್ಲಿ ಬೌಲಿಂಗ್ಗಾಗಿ ಅಶ್ವಿನ್-ಜಡೇಜಾ ಮಧ್ಯೆ ಜಗಳ: ರೋಹಿತ್ ಶರ್ಮಾ ಏನಂದ್ರು ನೋಡಿ
TV9 Web | Updated By: Vinay Bhat
Updated on:
Feb 12, 2023 | 10:37 AM
India vs Australia 1st Test: ಭಾರತ ಪರ ಅತಿ ಹೆಚ್ಚು ಓವರ್ ಬೌಲಿಂಗ್ ಮಾಡಿದ್ದೇ ಇವರಿಬ್ಬರು. ಪಂದ್ಯದ ಮಧ್ಯೆ ಅಶ್ವಿನ್-ಜಡೇಜಾ ಬೌಲಿಂಗ್ಗಾಗಿ ಪೈಪೋಟಿ ನಡೆಸಿದ್ದ ಘಟನೆ ಕೂಡ ನಡೆಯಿತಂತೆ. ಈ ಬಗ್ಗೆ ಪಂದ್ಯ ಮುಗಿದ ಬಳಿಕ ನಾಯಕ ರೋಹಿತ್ ಶರ್ಮಾ ಮಾಹಿತಿ ನೀಡಿದ್ದಾರೆ.
1 / 8
ಭಾರೀ ಕುತೂಹಲ ಕೆರಳಿಸಿದ್ದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೊದಲ ಟೆಸ್ಟ್ ಪಂದ್ಯ ಮುಕ್ತಾಯಗೊಂಡಿದ್ದು ಟೀಮ್ ಇಂಡಿಯಾ ಇನ್ನಿಂಗ್ಸ್ ಹಾಗೂ 132 ರನ್ಗಳ ಭರ್ಜರಿ ಜಯ ಸಾಧಿಸಿದೆ. ಸ್ಪಿನ್ನರ್ಗಳ ನೆಚ್ಚಿನ ಪಿಚ್ ಆದ ನಾಗ್ಪುರದಲ್ಲಿ ಉಭಯ ತಂಡಗಳ ಬ್ಯಾಟರ್ಗಳು ರನ್ ಗಳಿಸಲು ಪರದಾಡಿದರು. ಕಾಂಗರೂ ಪಡೆಯಂತು ರವಿಂದ್ರನ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ದಾಳಿಗೆ ನಲುಗಿ ಹೋಯಿತು.
2 / 8
ಮೊದಲ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾ 177 ರನ್ಗೆ ಆಲೌಟ್ ಆಯಿತು. ಇಲ್ಲಿ ಜಡೇಜಾ ಜಡೇಜಾ 5 ವಿಕೆಟ್ ಪಡೆದರೆ ಅಶ್ವಿನ್ 2 ವಿಕೆಟ್ ಕಿತ್ತರು. ಎರಡನೇ ಇನ್ನಿಂಗ್ಸ್ನಲ್ಲಿ ಆಸೀಸ್ 91 ರನ್ಗೆ ಸರ್ವಪತನ ಕಂಡಿತು. ಅಶ್ವಿನ್ 5 ಹಾಗೂ ಜಡೇಜಾ 2 ವಿಕೆಟ್ ಪಡೆದರು.
3 / 8
ಭಾರತ ಪರ ಅತಿ ಹೆಚ್ಚು ಓವರ್ ಬೌಲಿಂಗ್ ಮಾಡಿದ್ದೇ ಇವರಿಬ್ಬರು. ಪಂದ್ಯದ ಮಧ್ಯೆ ಅಶ್ವಿನ್-ಜಡೇಜಾ ಬೌಲಿಂಗ್ಗಾಗಿ ಪೈಪೋಟಿ ನಡೆಸಿದ್ದ ಘಟನೆ ಕೂಡ ನಡೆಯಿತಂತೆ. ಈ ಬಗ್ಗೆ ಪಂದ್ಯ ಮುಗಿದ ಬಳಿಕ ನಾಯಕ ರೋಹಿತ್ ಶರ್ಮಾ ಮಾಹಿತಿ ನೀಡಿದ್ದಾರೆ.
4 / 8
ಪಂದ್ಯದ ಬಳಿಕ ವೀಕ್ಷಕ ವಿವರಣೆಕಾರರಾದ ಇರ್ಫಾನ್ ಪಠಾಣ್ ಬಳಿ ಸಂದರ್ಶನ ನೀಡಿದ ರೋಹಿತ್, ಭಾರತ ಮೊದಲ ಟೆಸ್ಟ್ ಗೆಲ್ಲಲು ಪ್ರಮುಖ ಕಾರಣರಾದ ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಬೌಲಿಂಗ್ ಮಾಡಲು ಜಗಳ ನಡೆಸುತ್ತಿದ್ದರು ಎಂದು ಹೇಳಿದ್ದಾರೆ. ಈ ವಿಚಾರ ನಡೆದಿರುವುದು ತಮಾಷೆಯಾಗಿ ಎಂದೂ ಹೇಳಿದ್ದಾರೆ.
5 / 8
ಈ ಪಂದ್ಯದಲ್ಲಿ ಜಡೇಜಾ ಮತ್ತು ಅಶ್ವಿನ್ ಒಂದೊಂದು ದಾಖಲೆಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಜಡೇಜಾ ಟೆಸ್ಟ್ ಕ್ರಿಕೆಟ್ನಲ್ಲಿ 249 ವಿಕೆಟ್ ಗಳಿಸಿದ್ದರು. ಅವರು ಒಂದು ವಿಕೆಟ್ ಪಡೆದರೆ 250 ವಿಕೆಟ್ ದಾಖಲೆ ಮಾಡುತ್ತಿದ್ದರು. ಈ ದಾಖಲೆ ನಿರ್ಮಿಸಲು ನನಗೆ ಬೌಲಿಂಗ್ ಕೊಡಿ ಎಂದು ಜಡೇಜಾ ನನ್ನ ಬಳಿ ಬಂದು ಕೇಳುತ್ತಿದ್ದರು - ರೋಹಿತ್ ಶರ್ಮಾ.
6 / 8
ಅತ್ತ ಆರ್. ಅಶ್ವಿನ್ ಈ ಇನಿಂಗ್ಸ್ನಲ್ಲಿ 4 ವಿಕೆಟ್ ಕಿತ್ತಿದ್ದರು. ಅವರಿಗೆ ಮತ್ತೊಂದು 5 ವಿಕೆಟ್ಗಳ ಗೊಂಚಲು ಪಡೆದ ದಾಖಲೆ ಮಾಡುವ ಹಂಬಲವಿತ್ತು. ಹೀಗಾಗಿ ಅಶ್ವಿನ್ ಕೂಡ ನನಗೆ ಬೌಲಿಂಗ್ ಕೊಡಬೇಕು ಎಂದು ಹೇಳುತ್ತಿದ್ದರು. ಇಬ್ಬರೂ ನನಗೆ ಬಾಲ್ ನೀಡಿ ಎಂದು ಪೈಪೋಟಿ ನಡೆಸುತ್ತಿದ್ದರು ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
7 / 8
ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡದ ವಿರುದ್ಧ ಟೆಸ್ಟ್ ಸರಣಿ ಆಡುವಾಗ ಮೊದಲ ಪಂದ್ಯದ ಗೆಲುವು ಅತ್ಯಂತ ಮಹತ್ವದ್ದಾಗಿರುತ್ತದೆ. ತಂಡದ ಜಯದಲ್ಲಿ ನಾನು ಸಿಡಿಸಿದ ಶತಕ ಸಹಕಾರಿಯಾಗಿರುವುದು ನನಗೆ ಸಂತಸ ತಂದಿದೆ ಎಂಬುದು ರೋಹಿತ್ ಮಾತು.
8 / 8
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯ ಫೆಬ್ರವರಿ 17 ರಿಂದ ಫೆಬ್ರವರಿ 21 ರವರೆಗೆ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯವು ಬೆಳಗ್ಗೆ 09:30 ಕ್ಕೆ ಆರಂಭವಾಗಲಿದೆ. ಒಂಬತ್ತು ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ.