- Kannada News Photo gallery Cricket photos SA20 final postponed: Pretoria Capitals vs Sunrisers Eastern Cape
SA20 final: ಸೌತ್ ಆಫ್ರಿಕಾ ಟಿ20 ಲೀಗ್ ಫೈನಲ್ ಪಂದ್ಯ ಮುಂದೂಡಿಕೆ
Pretoria Capitals vs Sunrisers Eastern Cape: 2ನೇ ಸೆಮಿಫೈನಲ್ ಪಂದ್ಯದಲ್ಲಿ ಜೋಬರ್ಗ್ ಸೂಪರ್ ಕಿಂಗ್ಸ್ ವಿರುದ್ಧ 14 ರನ್ಗಳ ರೋಚಕ ಜಯ ಸಾಧಿಸಿದ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ತಂಡವು ಫೈನಲ್ ಪ್ರವೇಶಿಸಿದೆ.
Updated on: Feb 11, 2023 | 10:22 PM

ಸೌತ್ ಆಫ್ರಿಕಾ ಟಿ20 ಲೀಗ್ ಫೈನಲ್ ಪಂದ್ಯವನ್ನು ಮುಂದೂಡಲಾಗಿದೆ. ಶನಿವಾರ ದಿ ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಫೈನಲ್ ಪಂದ್ಯದಲ್ಲಿ ಪ್ರಿಟೋರಿಯಾ ಕ್ಯಾಪಿಟಲ್ಸ್ ಮತ್ತು ಸನ್ ರೈಸರ್ಸ್ ಈಸ್ಟರ್ನ್ ಕೇಪ್ ತಂಡಗಳು ಮುಖಾಮುಖಿಯಾಗಬೇಕಿತ್ತು.

ಆದರೆ ಶನಿವಾರ ಜೋಹಾನ್ಸ್ಬರ್ಗ್ ಭಾಗದಲ್ಲಿ ನಿರಂತರ ಮಳೆಯಾಗಿದ್ದು, ಇದರಿಂದ ಫೈನಲ್ ಪಂದ್ಯದ ಆಯೋಜನೆ ಅಡಚಣೆ ಉಂಟಾಗಿದೆ. ಹೀಗಾಗಿ ಭಾನುವಾರಕ್ಕೆ ಫೈನಲ್ ಪಂದ್ಯವನ್ನು ಮುಂದೂಡಲಾಗಿದೆ ಎಂದು SA20 ಲೀಗ್ ಆಯೋಜಕರು ತಿಳಿಸಿದ್ದಾರೆ.

ಇದಕ್ಕೂ ಮುನ್ನ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಪರ್ಲ್ ರಾಯಲ್ಸ್ ವಿರುದ್ಧ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡವು 29 ರನ್ಗಳಿಂದ ಜಯ ಸಾಧಿಸಿತು. ಈ ಮೂಲಕ ಫೈನಲ್ ಫೈಟ್ಗೆ ಎಂಟ್ರಿ ಕೊಟ್ಟಿದ್ದರು.

ಹಾಗೆಯೇ 2ನೇ ಸೆಮಿಫೈನಲ್ ಪಂದ್ಯದಲ್ಲಿ ಜೋಬರ್ಗ್ ಸೂಪರ್ ಕಿಂಗ್ಸ್ ವಿರುದ್ಧ 14 ರನ್ಗಳ ರೋಚಕ ಜಯ ಸಾಧಿಸಿದ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ತಂಡವು ಫೈನಲ್ ಪ್ರವೇಶಿಸಿತು. ಇದೀಗ ಎರಡು ಬಲಿಷ್ಠ ತಂಡಗಳ ನಡುವಣ ಫೈನಲ್ ಫೈಟ್ ಪಂದ್ಯವು ಭಾನುವಾರ ನಡೆಯಲಿದೆ. ಉಭಯ ತಂಡಗಳು ಈ ಕೆಳಗಿನಂತಿವೆ.

ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡ: ಫಿಲಿಪ್ ಸಾಲ್ಟ್ , ಕುಸಾಲ್ ಮೆಂಡಿಸ್ , ಥೆನಿಸ್ ಡಿ ಬ್ರುಯ್ನ್ , ರಿಲೀ ರೋಸ್ಸೌ , ಕಾಲಿನ್ ಇಂಗ್ರಾಮ್ , ಜೇಮ್ಸ್ ನೀಶಮ್ , ಈಥನ್ ಬಾಷ್ , ಸೆನುರಾನ್ ಮುತ್ತುಸಾಮಿ , ಮಿಗೇಲ್ ಪ್ರಿಟೋರಿಯಸ್ , ಆದಿಲ್ ರಶೀದ್ , ಅನ್ರಿಕ್ ನೋಕಿಯಾ, ಡೇರಿನ್ ಡುಪಾವಿಲ್ಲೋನ್ , ಜೋಶ್ವ ಲಿಟಲ್, ವಿಲ್ ಜಾಕ್ಸ್, ವೇಯ್ನ್ ಪಾರ್ನೆಲ್ (ನಾಯಕ), ಸಿಲ್ಡ್ ಫಾರ್ಟಿನ್, ಕ್ಯಾಮರೋನ್ ಡೆಲ್ಪೊರ್ಟ್, ಶಾನ್ ವಾನ್ ಬರ್ಗ್ , ಮಾರ್ಕೊ ಮಾರೈಸ್ , ಶೇನ್ ಡ್ಯಾಡ್ಸ್ವೆಲ್.

ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ತಂಡ: ಆಡಮ್ ರೋಸಿಂಗ್ಟನ್ , ಟೆಂಬಾ ಬವುಮಾ , ಜೋರ್ಡಾನ್ ಹರ್ಮನ್ , ಐಡೆನ್ ಮಾರ್ಕ್ರಾಮ್ (ನಾಯಕ) , ಟ್ರಿಸ್ಟಾನ್ ಸ್ಟಬ್ಸ್ , ಜೋರ್ಡಾನ್ ಕಾಕ್ಸ್ , ಮಾರ್ಕೊ ಯಾನ್ಸೆನ್ , ಬ್ರೈಡನ್ ಕಾರ್ಸೆ , ಒಟ್ನಿಯೆಲ್ ಬಾರ್ಟ್‌ಮ್ಯಾನ್ , ರೋಲೋಫ್ ವ್ಯಾನ್ ಡೆರ್ ಮೆರ್ವೆ , ಸಿಸಂದಾ ಮಗಾಲಾ , ಜೆಜೆ ಸ್ಮರ್ಟ್ಸ್ , ಜೇಮ್ಸ್ ಫುಲ್ಲೆರ್, ಅಯಬುಲೆಲ ಗ್ಯಾಮೇನ್, ಸರೆಲ್ ಈರ್ವ್, ಮಾರ್ಕ್ವೆಸ್ ಅಕರ್ಮನ್ , ಜುನೈದ್ ದಾವೂದ್.
