T20 World Cup 2024: ಟಿ20 ವಿಶ್ವಕಪ್ನಲ್ಲಿ ಈತ ಟೀಂ ಇಂಡಿಯಾವನ್ನು ಮುನ್ನಡೆಸಬೇಕು ಎಂದ ‘ದಾದಾ’
T20 World Cup 2024: ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಮುಂಬರುವ ಟಿ20 ವಿಶ್ವಕಪ್ನಲ್ಲೂ ಆಡುವುದು ಭಾಗಶಃ ಖಚಿತವಾಗಿದೆ. ಈ ನಡುವೆ ಈ ಚುಟುಕು ವಿಶ್ವಕಪ್ನಲ್ಲಿ ತಂಡದ ನಾಯಕತ್ವ ಯಾರು ನಿರ್ವಹಿಸಬೇಕು ಎಂಬ ಪ್ರಶ್ನೆಗೆ ಬಿಸಿಸಿಐನ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಮುಕ್ತವಾಗಿ ಉತ್ತರಿಸಿದ್ದಾರೆ.
1 / 7
ಆಫ್ರಿಕಾ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿರುವ ಟೀಂ ಇಂಡಿಯಾ ಈಗ ಅಫ್ಘಾನಿಸ್ತಾನದ ವಿರುದ್ಧ 3 ಪಂದ್ಯಗಳ ಟಿ20 ಸರಣಿಯನ್ನು ಆಡಲು ತಯಾರಿ ನಡೆಸಿದೆ. ಈ ಸರಣಿಗಾಗಿ ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದ್ದು, ರೋಹಿತ್ ನಾಯಕತ್ವದಲ್ಲಿ ಬಲಿಷ್ಠ ತಂಡವನ್ನೇ ಬಿಸಿಸಿಐ ಆಯ್ಕೆ ಮಾಡಿದೆ.
2 / 7
ಈ ಸರಣಿಗೆ ರೋಹಿತ್ ಶರ್ಮಾ ಜೊತೆಗೆ ವಿರಾಟ್ ಕೊಹ್ಲಿ ಕೂಡ ತಂಡದಲ್ಲಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಈ ಇಬ್ಬರು ಆಟಗಾರರು ಮುಂಬರುವ ಟಿ20 ವಿಶ್ವಕಪ್ನಲ್ಲೂ ಆಡುವುದು ಭಾಗಶಃ ಖಚಿತವಾಗಿದೆ. ಈ ನಡುವೆ ಈ ಚುಟುಕು ವಿಶ್ವಕಪ್ನಲ್ಲಿ ತಂಡದ ನಾಯಕತ್ವ ಯಾರು ನಿರ್ವಹಿಸಬೇಕು ಎಂಬ ಪ್ರಶ್ನೆಗೆ ಬಿಸಿಸಿಐನ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಮುಕ್ತವಾಗಿ ಉತ್ತರಿಸಿದ್ದಾರೆ.
3 / 7
ಜೂನ್ನಲ್ಲಿ ನಡೆಯಲ್ಲಿರುವ ಟಿ20 ವಿಶ್ವಕಪ್ನಲ್ಲಿ ಟೀಂ ಇಂಡಿಯಾವನ್ನು ರೋಹಿತ್ ಶರ್ಮಾ ಮುನ್ನಡೆಸಬೇಕು ಎಂದಿರುವ ಗಂಗೂಲಿ, ವಿರಾಟ್ ಕೊಹ್ಲಿ ಕೂಡ ತಂಡದಲ್ಲಿ ಇರಬೇಕು ಎಂದಿದ್ದಾರೆ. ವಿರಾಟ್ ಒಬ್ಬ ಶ್ರೇಷ್ಠ ಆಟಗಾರ. ಅವರು 14 ತಿಂಗಳ ನಂತರ ಟಿ20 ತಂಡದಲ್ಲಿ ಸ್ಥಾನ ಪಡೆದಿರುವುದು ಅವರ ಪ್ರದರ್ಶನದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ.
4 / 7
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಕಳೆದ ದಶಕದಲ್ಲಿ ಟೀಂ ಇಂಡಿಯಾದ ಬ್ಯಾಟಿಂಗ್ ಕ್ರಮಾಂಕದಲ್ಲಿ ಪ್ರಮುಖ ಕೊಂಡಿಗಳಾಗಿದ್ದಾರೆ. ಈ ಇಬ್ಬರೂ ಆಟಗಾರರು ಭಾರತ ತಂಡವನ್ನು ಅನೇಕ ಪಂದ್ಯಗಳಲ್ಲಿ ಗೆಲುವಿನ ದಡ ಸೇರಿಸಿದ್ದಾರೆ. ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 4008 ರನ್ ಕಲೆಹಾಕಿರುವ ವಿರಾಟ್, ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ.
5 / 7
ಕೊಹ್ಲಿ ಜೊತೆಗೆ ಈ ಚುಟುಕು ಮಾದರಿಯಲ್ಲಿ ರೋಹಿತ್ ಶರ್ಮಾ ಅವರ ಪ್ರದರ್ಶನವೂ ಗಮನಾರ್ಹವಾಗಿದ್ದು, ಈ ಮಾದರಿಯಲ್ಲಿ ಹಿಟ್ಮ್ಯಾನ್ 3853 ರನ್ ಬಾರಿಸುವುದರೊಂದಿಗೆ ಅಧಿಕ ರನ್ ಬಾರಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಅಲ್ಲದೆ ಅಂತರಾಷ್ಟ್ರೀಯ ಟಿ20ಯಲ್ಲಿ ನಾಲ್ಕು ಶತಕಗಳನ್ನು ಸಿಡಿಸಿದ್ದಾರೆ.
6 / 7
ಈ ಇಬ್ಬರೊಂದಿಗೆ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ರನ್ನು ಹೊಗಳಿರುವ ದಾದಾ, ‘ಈ ಯುವ ಆರಂಭಿಕ ಬ್ಯಾಟ್ಸ್‌ಮನ್ ಭವಿಷ್ಯದಲ್ಲಿ ಸಾಕಷ್ಟು ಅವಕಾಶಗಳನ್ನು ಪಡೆಯಲ್ಲಿದ್ದಾರೆ. 22 ವರ್ಷ ವಯಸ್ಸಿನ ಬ್ಯಾಟ್ಸ್‌ಮನ್ ಸೆಂಚುರಿಯನ್ ಮತ್ತು ಕೇಪ್ ಟೌನ್ ಟೆಸ್ಟ್‌ಗಳ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಕೇವಲ 50 ರನ್ ಗಳಿಸಲು ಸಾಧ್ಯವಾಯಿತು. ಆದರೆ ಎರಡನೇ ಟೆಸ್ಟ್‌ನಲ್ಲಿ ಉತ್ತಮವಾಗಿ ಆಡಿದರು.
7 / 7
ಇದು ಅವರ ವೃತ್ತಿಜೀವನದ ಆರಂಭವಾಗಿದೆ. ಅವರಿಗೆ ಸಾಕಷ್ಟು ಅವಕಾಶಗಳು ಸಿಗಲಿವೆ. ಒಂದು ಪಂದ್ಯದಲ್ಲಿ ಸೋತರೆ ತಂಡದ ಬಗ್ಗೆ ಜನರು ತುಂಬಾ ಮಾತನಾಡುತ್ತಾರೆ. ಆದರೆ ಭಾರತವು ಬಲಿಷ್ಠ ತಂಡವಾಗಿದೆ. ಆದರೆ ಅವರು ಹೇಗೆ ಆಡಿದರು ಎಂಬುದನ್ನು ನೋಡಿ. ಟೆಸ್ಟ್ ಮತ್ತು ಟಿ20 ಅಂತರಾಷ್ಟ್ರೀಯ ಸರಣಿಗಳೆರಡನ್ನೂ ಡ್ರಾ ಮಾಡಿಕೊಂಡರೆ ಏಕದಿನ ಸರಣಿಯನ್ನು ಗೆದ್ದಿದ್ದಾರೆ ಎಂದು ಗಂಗೂಲಿ ತಂಡದ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.