Rohit Sharma: ಪಂದ್ಯ ಮುಗಿದ ಬಳಿಕ ಕೊಹ್ಲಿ ಆಟದ ಬಗ್ಗೆ ನಾಯಕ ರೋಹಿತ್ ಶರ್ಮಾ ಹೇಳಿದ್ದೇನು ನೋಡಿ

| Updated By: Vinay Bhat

Updated on: Feb 19, 2022 | 8:43 AM

IND vs WI T20: ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಗೆದ್ದ ಬಳಿಕ ಆಟಗಾರರ ಪ್ರದರ್ಶನದ ಬಗ್ಗೆ ಮಾತನಾಡಿದ ಭಾರತದ ನಾಯಕ ರೋಹಿತ್ ಶರ್ಮಾ, ಪ್ರಮುಖವಾಗಿ ವಿರಾಟ್ ಕೊಹ್ಲಿ ನೀಡಿದ ಕೊಡುಗೆ ಬಗ್ಗೆ ಹಾಡಿಹೊಗಳಿದ್ದಾರೆ. ಅವರು ಏನು ಹೇಳಿದರು ಎಂಬುದನ್ನು ನೋಡಿ.

1 / 7
ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಮ್ ಇಂಡಿಯಾದ ಗೆಲುವಿನ ಓಟ ಭರ್ಜರಿ ಆಗಿ ಮುಂದುವರೆದಿದೆ. ಶುಕ್ರವಾರ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲೂ ಭಾರತ 8 ರನ್​ಗಳ ರೋಚಕ ಜಯ ಸಾಧಿಸಿತು. ಇದು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​​ನಲ್ಲಿ ಭಾರತ ತಂಡಕ್ಕೆ ಸಿಕ್ಕ 100ನೇ ಗೆಲುವು ಎಂಬುದು ವಿಶೇಷ. ರೋಹಿತ್ ಶರ್ಮಾ ಈ ರೋಚಕ ಜಯದೊಂದಿಗೆ ಮೂರು ಪಂದ್ಯಗಳ ಸರಣಿಯನ್ನು ಒಂದು ಪಂದ್ಯ ಬಾಕಿ ಇರುವಾಗಲೇ 2-0 ಅಂತರದಲ್ಲಿ ಗೆದ್ದುಕೊಂಡಿದೆ.

2 / 7
ಸ್ಫೋಟಕ ಬ್ಯಾಟರ್​​ಗಳಾದ ನಿಕೋಲಸ್ ಪೂರನ್ ಹಾಗೂ ರೊವ್ಮನ್ ಪೊವೆಲ್ ಜೋಡಿಯ ಬಿರುಸಿನ ಬ್ಯಾಟಿಂಗ್ ನಡುವೆಯೂ ಕೆರಿಬಿಯನ್ನರಿಗೆ ಗೆಲುವಿನ ದಡ ಸೇರಲು ಸಾಧ್ಯವಾಗಲಿಲ್ಲ. ಭಾರತ ಪರ ವಿರಾಟ್ ಕೊಹ್ಲಿ ಹಾಗೂ ರಿಷಭ್ ಪಂತ್ ಅರ್ಧಶತಕ ಸಿಡಿಸಿ ತಂಡಕ್ಕೆ ಆಸರೆಯಾದರು. ಅದರಲ್ಲೂ ಕಳಪೆ ಫಾರ್ಮ್​ನಿಂದ ಕಂಗೆಟ್ಟಿದ್ದ ಕಿಂಗ್ ಕೊಹ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ತಕ್ಕ ಉತ್ತರ ನೀಡಿದರು.

3 / 7
ಪಂದ್ಯ ಮುಗಿದ ಬಳಿಕ ಆಟಗಾರರ ಪ್ರದರ್ಶನದ ಬಗ್ಗೆ ಮಾತನಾಡಿದ ನಾಯಕ ರೋಹಿತ್ ಶರ್ಮಾ, ಈ ಹುಡುಗರ ವಿರುದ್ಧ ಆಡುವಾಗ ಒಂದು ಭಯ ಇದ್ದೇ ಇರುತ್ತದೆ. ಇದು ಅಂದುಕೊಂಡಷ್ಟು ಸುಲಭ ಅಲ್ಲ ಎಂಬುದು ನಮಗೆ ತಿಳಿದಿತ್ತು. ಇದಕ್ಕಾಗಿ ನಾವು ಸಾಕಷ್ಟು ಸಿದ್ಧತೆ ನಡೆಸಿದ್ದೆವು ಎಂದು ಹೇಳಿದ್ದಾರೆ.

4 / 7
ಒತ್ತಡಗಳ ನಡುವೆ ನಮ್ಮಲ್ಲಿನ ಯೋಜನೆಯನ್ನು ನಾವು ಜಾರಿಗೆ ತಂದೆವು. ಇಲ್ಲಿ ಅನುಭವ ಪ್ರಮುಖ ಪಾತ್ರವಹಿಸುತ್ತದೆ. ಭುವನೇಶ್ವರ್ ಕುಮಾರ್ ಸತತವಾಗಿ ಯಾರ್ಕರ್ – ಬೌನ್ಸರ್​​ಗಳನ್ನು ಎಸೆಯುತ್ತಿದ್ದರು. ಅವರ ಪ್ರತಿಭೆ ಬಗ್ಗೆ ನಮಗೆ ನಂಬಿಕೆ ಇತ್ತು ಎಂದು ಹೇಳಿದ್ದಾರೆ.

5 / 7
ಕೊಹ್ಲಿ ಬಗ್ಗೆ ಮೆಚ್ಚುಗೆಯ ಮಾತನಾಡಿರುವ ರೋಹಿತ್, ಇಂದು ವಿರಾಟ್ ಕೊಹ್ಲಿ ನೀಡಿದ ಪ್ರದರ್ಶನ ಮಹತ್ವದ್ದಾಗಿತ್ತು. ಅವರು ಬ್ಯಾಟ್ ಹಿಡಿದು ಕ್ರೀಸ್​ಗೆ ಬಂದು ಆಟ ಶುರು ಮಾಡಿದಾಗ ನನ್ನ ಮೇಲಿದ್ದ ಒತ್ತಡ ಕಡಿಮೆ ಆಯಿತು. ಮೊದಲ ಎರಡು ಓವರ್​ಗಳಲ್ಲಿ ನಾವು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿಲ್ಲ. ಆದರೆ, ಕೊಹ್ಲಿ ಬಂದು ಅಮೋಘ ಹೊಡೆತಗಳ ಮೂಲ ಗಮನ ಸೆಳೆದರು. ಅವರು ಬ್ಯಾಟಿಂಗ್ ಶೈಲಿ ನೋಡಲು ಆಹ್ಲಾದಕರವಾಗಿತ್ತು ಎಂಬುದು ಅವರ ಮಾತು.

6 / 7
ರಿಷಭ್ ಪಂತ್ ಮತ್ತು ವೆಂಕಟೇಶ್ ಅಯ್ಯರ್ ಪಂದ್ಯವನ್ನು ಉತ್ತಮವಾಗಿ ಫಿನಿಶ್ ಮಾಡಿದರು. ಅಯ್ಯರ್ ಪಂದ್ಯದಿಂದ ಪಂದ್ಯಕ್ಕೆ ಬೆಳೆಯುತ್ತಿರುವುದು ಖುಷಿ ನೀಡುತ್ತದೆ. ಅವರ ಕೌಶಲ್ಯದಲ್ಲಿ ತುಂಬಾ ಬದಲಾವಣೆ ಆಗಿದ್ದು ಪ್ರತಿಯೊಬ್ಬ ನಾಯಕನು ಇದನ್ನೆ ಬಯಸುತ್ತಾನೆ. ರೀತಿಯ ಆಟಗಾರ ತಂಡಕ್ಕೆ ಅಗತ್ಯವಿದೆ. – ರೋಹಿತ್ ಶರ್ಮಾ

7 / 7
ನಾವು ಫೀಲ್ಡಿಂಗ್​ನಲ್ಲಿ ಕೊಂಚ ಕಳಪೆ ಪ್ರದರ್ಶನ ನೀಡಿದೆವು. ಇದು ಬೇಸರ ತರಿಸಿದೆ. ಸಿಕ್ಕ ಕ್ಯಾಚ್ ಅನ್ನು ನಾವು ಹಿಡಿದಿದ್ದರೆ ಪಂದ್ಯದ ಗತಿ ಬದಲಾಗುತ್ತಿತ್ತು ಎಂದು ರೋಹಿತ್ ಹೇಳಿದರು.