RCB vs MI: ಒಂದೇ ಪಂದ್ಯದಲ್ಲಿ ಒಟ್ಟಿಗೆ ಧೋನಿ ದಾಖಲೆ ಮುರಿದ ರೋಹಿತ್, ಕೊಹ್ಲಿ

Updated on: May 10, 2026 | 10:12 PM

Kohli, Rohit Match Dhoni's IPL Record: ಐಪಿಎಲ್ 2026ರ MI vs RCB ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಐತಿಹಾಸಿಕ ಮೈಲಿಗಲ್ಲನ್ನು ತಲುಪಿದ್ದಾರೆ. ಈ ದಿಗ್ಗಜ ಆಟಗಾರರು ತಮ್ಮ 278ನೇ ಐಪಿಎಲ್ ಪಂದ್ಯವನ್ನಾಡುವ ಮೂಲಕ ಎಂ.ಎಸ್. ಧೋನಿ ಅವರ ಐಪಿಎಲ್‌ನಲ್ಲಿ ಅತಿ ಹೆಚ್ಚು ಪಂದ್ಯಗಳ ದಾಖಲೆಯನ್ನು ಸರಿಗಟ್ಟಿದರು. ರಾಯ್‌ಪುರದಲ್ಲಿ ನಡೆದ ಈ 54ನೇ ಪಂದ್ಯ, ಮೂವರು ಕ್ರಿಕೆಟ್ ದಿಗ್ಗಜರ ಹೆಸರನ್ನು ಐಪಿಎಲ್ ಇತಿಹಾಸದ ಪುಟಗಳಲ್ಲಿ ಒಟ್ಟಾಗಿ ಸೇರಿಸಿತು.

1 / 5
ಐಪಿಎಲ್ 2026 ರ 54ನೇ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ನಡೆಯಿತು. ಈ ಪಂದ್ಯ ಉಭಯ ತಂಡಗಳಲ್ಲಿರುವ ಇಬ್ಬರು ದಿಗ್ಗಜ ಬ್ಯಾಟರ್​ಗಳಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ಐತಿಹಾಸಿಕ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ಇವರಿಬ್ಬರು ಧೋನಿ ದಾಖಲೆಯನ್ನು ಮುರಿದರು.

2 / 5
ಈ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರರ ಪಟ್ಟಿಯಲ್ಲಿ ಎಂಎಸ್ ಧೋನಿ ಅವರ ದಾಖಲೆಯನ್ನು ಸರಿಗಟ್ಟಿದರು. ರಾಯ್ಪುರದಲ್ಲಿ ನಡೆದ ಈ ಪಂದ್ಯ ರೋಹಿತ್ ಮತ್ತು ವಿರಾಟ್ ಕೊಹ್ಲಿಗೆ 278ನೇ ಐಪಿಎಲ್ ಪಂದ್ಯವಾಗಿತ್ತು. ಧೋನಿ ಕೂಡ ಇಲ್ಲಿಯವರೆಗೆ ಐಪಿಎಲ್‌ನಲ್ಲಿ 278 ಪಂದ್ಯಗಳನ್ನು ಆಡಿದ್ದಾರೆ.

3 / 5
ಎಂಎಸ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತಂಡಗಳ ಪರ ಐಪಿಎಲ್ ಆಡಿದ್ದು, ಒಟ್ಟು 278 ಪಂದ್ಯಗಳನ್ನಾಡಿದ್ದಾರೆ. ಇತ್ತ ರೋಹಿತ್ ಶರ್ಮಾ ತಮ್ಮ ಐಪಿಎಲ್ ವೃತ್ತಿಜೀವನವನ್ನು ಡೆಕ್ಕನ್ ಚಾರ್ಜರ್ಸ್ ತಂಡದಿಂದ ಪ್ರಾರಂಭಿಸಿ, 2011 ರಿಂದ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದಾರೆ. ಈ ಮಧ್ಯೆ ವಿರಾಟ್ ಕೊಹ್ಲಿ 2008 ರ ಉದ್ಘಾಟನಾ ಐಪಿಎಲ್ ಆವೃತ್ತಿಯಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದಾರೆ.

4 / 5
ಈ ಆವೃತ್ತಿಯಲ್ಲಿ ಎಂಎಸ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದಾರೆ. ಆದಾಗ್ಯೂ ಅವರು ಇನ್ನೂ ಒಂದೇ ಒಂದು ಪಂದ್ಯವನ್ನು ಆಡಿಲ್ಲ, ಇದರಿಂದಾಗಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಈ ಪಟ್ಟಿಯಲ್ಲಿ ಧೋನಿ ದಾಖಲೆಯನ್ನು ಸರಿಗಟ್ಟಲು ಸಾಧ್ಯವಾಯಿತು.

5 / 5
ಈ ಪಟ್ಟಿಯಲ್ಲಿ ಈ ಮೂವರ ನಂತರ ರವೀಂದ್ರ ಜಡೇಜಾ (265 ಪಂದ್ಯಗಳು), ದಿನೇಶ್ ಕಾರ್ತಿಕ್ (257 ಪಂದ್ಯಗಳು), ಮತ್ತು ಶಿಖರ್ ಧವನ್ (222 ಪಂದ್ಯಗಳು) ಇದ್ದಾರೆ. ಆದಾಗ್ಯೂ, ರವೀಂದ್ರ ಜಡೇಜಾ ಹೊರತುಪಡಿಸಿ ಇಬ್ಬರೂ ಆಟಗಾರರು ನಿವೃತ್ತರಾಗಿದ್ದಾರೆ.

Follow Us