ದಕ್ಷಿಣ ಆಫ್ರಿಕಾದಲ್ಲಿ ಅತ್ಯಂತ ಕಳಪೆ ಬ್ಯಾಟಿಂಗ್ ದಾಖಲೆ ಹೊಂದಿರುವ ರೋಹಿತ್ ಶರ್ಮಾ
TV9 Web | Updated By: ಝಾಹಿರ್ ಯೂಸುಫ್
Updated on:
Dec 13, 2021 | 10:07 PM
India vs South Africa: ತಂಡದಲ್ಲಿ ಆರಂಭಿಕರಾಗಿ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಇದ್ದಾರೆ. ಇಬ್ಬರು ಅತ್ಯುತ್ತಮ ಓಪನಿಂಗ್ ಜೋಡಿಯಾಗಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಹಿಟ್ಮ್ಯಾನ್ ಅನುಪಸ್ಥಿತಿಯನ್ನು ಈ ಇಬ್ಬರು ಕ್ರಿಕೆಟಿಗರು ಸರಿದೂಗಿಸುವ ವಿಶ್ವಾಸವಿದೆ.
1 / 5
ರೋಹಿತ್ ಶರ್ಮಾ ದಕ್ಷಿಣ ಆಫ್ರಿಕಾ ಸರಣಿಯಿಂದ ಗಾಯದ ಕಾರಣ ಹೊರಗುಳಿದಿದ್ದಾರೆ. ಮಂಡಿರಜ್ಜುಗೆ ಗಾಯ ಮಾಡಿಕೊಂಡಿರುವ ಹಿಟ್ಮ್ಯಾನ್ ಮೂರು ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಆದರೆ ರೋಹಿತ್ ಶರ್ಮಾ ಅವರ ಅನುಪಸ್ಥಿತಿಯು ಟೀಮ್ ಇಂಡಿಯಾ ಮೇಲೆ ದೊಡ್ಡ ಪರಿಣಾಮ ಬೀರುವುದಿಲ್ಲ. ಏಕೆಂದರೆ ಹರಿಣರ ನಾಡಲ್ಲಿ ಹಿಟ್ಮ್ಯಾನ್ ಅತ್ಯಂತ ಕಳಪೆ ದಾಖಲೆ ಹೊಂದಿದ್ದಾರೆ.
2 / 5
ಭಾರತ ತಂಡವು ಕೊನೆಯ ಬಾರಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದು 2018 ರಲ್ಲಿ. ಈ ವೇಳೆ ಟೀಮ್ ಇಂಡಿಯಾ ಮೂರು ಟೆಸ್ಟ್ ಪಂದ್ಯಗಳನ್ನು ಆಡಿತ್ತು. ಈ ವೇಳೆ 2 ಪಂದ್ಯಗಳಲ್ಲಿ ಹಿಟ್ಮ್ಯಾನ್ ಬ್ಯಾಟ್ ಬೀಸಿದ್ದರು. ಆದರೆ ಮೊದಲ ಟೆಸ್ಟ್ನ ಎರಡೂ ಇನಿಂಗ್ಸ್ ಸೇರಿ ಒಟ್ಟು ಕಲೆಹಾಕಿದ್ದು ಕೇವಲ 21 ರನ್ ಮಾತ್ರ.
3 / 5
ಅದೇ ರೀತಿ ಎರಡನೇ ಪಂದ್ಯದಲ್ಲೂ ರೋಹಿತ್ ಶರ್ಮಾ ಕಣಕ್ಕಿಳಿದಿದ್ದರು. ಈ ವೇಳೆ ಮೊದಲ ಇನಿಂಗ್ಸ್ನಲ್ಲಿ 10 ರನ್ ಬಾರಿಸಿದ್ದ ಹಿಟ್ಮ್ಯಾನ್ 2ನೇ ಇನಿಂಗ್ಸ್ 47 ರನ್ ಕಲೆಹಾಕಿದ್ದರು. ಕಳಪೆ ಬ್ಯಾಟಿಂಗ್ ಕಾರಣ ಮೂರನೇ ಪಂದ್ಯದಿಂದ ರೋಹಿತ್ ಶರ್ಮಾ ಅವರನ್ನು ಕೈಬಿಡಲಾಗಿತ್ತು.
4 / 5
ಇನ್ನು ರೋಹಿತ್ ಶರ್ಮಾ ಇದುವರೆಗೆ ದಕ್ಷಿಣ ಆಫ್ರಿಕಾ ವಿರುದ್ದ 4 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಇದರಲ್ಲಿ 8 ಇನಿಂಗ್ಸ್ ಆಡಿರುವ ಹಿಟ್ಮ್ಯಾನ್ ಒಟ್ಟು ಕಲೆಹಾಕಿರುವುದು ಕೇವಲ 123 ರನ್ ಮಾತ್ರ. ಅಂದರೆ ದಕ್ಷಿಣ ಆಫ್ರಿಕಾ ವಿರುದ್ದ ರೋಹಿತ್ ಶರ್ಮಾ ಅವರ ಇನಿಂಗ್ಸ್ ಸರಾಸರಿ 15.38 ರನ್ ಮಾತ್ರ. ಈ ಅಂಕಿ ಅಂಶಗಳನ್ನು ಗಮನಿಸಿದರೆ ದಕ್ಷಿಣ ಆಫ್ರಿಕಾ ಸರಣಿಯಿಂದ ರೋಹಿತ್ ಶರ್ಮಾ ಹೊರಗುಳಿದರೂ ಟೀಮ್ ಇಂಡಿಯಾ ಬ್ಯಾಟಿಂಗ್ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆಯಿಲ್ಲ.
5 / 5
ಮತ್ತೊಂದೆಡೆ ತಂಡದಲ್ಲಿ ಆರಂಭಿಕರಾಗಿ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಇದ್ದಾರೆ. ಇಬ್ಬರು ಅತ್ಯುತ್ತಮ ಓಪನಿಂಗ್ ಜೋಡಿಯಾಗಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಹಿಟ್ಮ್ಯಾನ್ ಅನುಪಸ್ಥಿತಿಯನ್ನು ಈ ಇಬ್ಬರು ಕ್ರಿಕೆಟಿಗರು ಸರಿದೂಗಿಸುವ ವಿಶ್ವಾಸವಿದೆ. ಅದರಂತೆ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಗೆದ್ದು ಇತಿಹಾಸ ನಿರ್ಮಿಸಲಿದೆಯಾ ಕಾದು ನೋಡಬೇಕಿದೆ.