ಮಹಾರಾಷ್ಟ್ರ ತಂಡ ಈ ಟೂರ್ನಿಯಲ್ಲಿ ಉತ್ತಮ ಆರಂಭ ಪಡೆದುಕೊಂಡಿದೆ. ತನ್ನ ಆರಂಭಿಕ ಎರಡೂ ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಸರ್ವಿಸಸ್ಗೂ ಮೊದಲು, ಮಹಾರಾಷ್ಟ್ರವು ರಾಜಸ್ಥಾನವನ್ನು ಎದುರಿಸಿತು. ಆ ಪಂದ್ಯದಲ್ಲೂ ಮಹಾರಾಷ್ಟ್ರ ತಂಡ 3 ವಿಕೆಟ್‌ಗಳ ಜಯ ಸಾಧಿಸಿತ್ತು. ಆದರೆ, ರಾಜಸ್ಥಾನ ವಿರುದ್ಧ ರನ್ ಗಳಿಸುವಲ್ಲಿ ಎಡವಿದ್ದ ರುತುರಾಜ್ ಗಾಯಕ್ವಾಡ್ 5 ಎಸೆತಗಳಲ್ಲಿ 1 ರನ್ ಗಳಿಸಿ ಔಟಾಗಿದ್ದರು. ಆದರೆ ಈ ಬಾರಿ ಏಕಾಂಗಿಯಾಗಿ ನಿಂತು ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ.