ಒಂದೇ ದಿನ 2 ಅರ್ಧಶತಕ ಬಾರಿಸಿದ ಬಾಬರ್ ಆಝಂ
South Africa vs Pakistan, Babar Azam: ಸೌತ್ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ್ ತಂಡದ ಮಾಜಿ ನಾಯಕ ಬಾಬರ್ ಆಝಂ ಒಂದೇ ದಿನ ಎರಡು ಅರ್ಧಶತಕಗಳನ್ನು ಬಾರಿಸಿದ್ದಾರೆ. ಈ ಮೂಲಕ ಎರಡು ವರ್ಷಗಳ ಕಾಲ ಕಳಪೆ ಫಾರ್ಮ್ನಲ್ಲಿದ್ದ ಬಾಬರ್ ಆಝಂ 2025 ರ ಆರಂಭದಲ್ಲೇ ಮಿಂಚಿದ್ದಾರೆ. ಈ ಅರ್ಧಶತಕಗಳು ಮೂಡಿಬಂದಿರುವುದು ಸೌತ್ ಆಫ್ರಿಕಾದಲ್ಲಿ ಎಂಬುದು ಮತ್ತೊಂದು ವಿಶೇಷ.
1 / 6
ಪಾಕಿಸ್ತಾನ್ ತಂಡದ ಮಾಜಿ ನಾಯಕ ಬಾಬರ್ ಆಝಂ ಟೆಸ್ಟ್ ಕ್ರಿಕೆಟ್್ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ 2 ವರ್ಷಗಳೇ ಕಳೆದಿತ್ತು. ಅದರಲ್ಲೂ ಸೌತ್ ಆಫ್ರಿಕಾ ವಿರುದ್ಧದ ಸರಣಿಗೂ ಮುನ್ನ ಅವರ ಬ್ಯಾಟ್ನಿಂದ 50+ ಸ್ಕೋರ್ ಮೂಡಿಬಂದಿದ್ದು 2022 ರಲ್ಲಿ. ಇದಾದ ಬಳಿಕ ಒಮ್ಮೆಯೂ ಅರ್ಧಶತಕ ಬಾರಿಸಿರಲಿಲ್ಲ. ಆದರೀಗ ಹರಿಣರ ನಾಡಿನಲ್ಲಿ ಬಾಬರ್ ಹಾಫ್ ಸೆಂಚುರಿಯ ಬರ ನೀಗಿಸಿದ್ದಾರೆ. ಅದು ಕೂಡ ಸತತ ಅರ್ಧಶತಕ ಬಾರಿಸುವ ಮೂಲಕ ಎಂಬುದು ವಿಶೇಷ.
2 / 6
ಕೇಪ್ಟೌನ್ನ ನ್ಯೂಲಾಂಡ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಸೌತ್ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್‌ನಲ್ಲಿ ಬಾಬರ್ ಆಝಂ ಬ್ಯಾಕ್ ಟು ಬ್ಯಾಕ್ ಅರ್ಧಶತಕ ಬಾರಿಸಿದ್ದಾರೆ. ಈ ಮೂಲಕ ಕಳೆದ ಎರಡು ವರ್ಷಗಳಿಂದ ಕೇಳಿ ಬರುತ್ತಿದ್ದ ಕಳಪೆ ದಾಂಡಿಗನೆಂಬ ಟೀಕೆಗೆ ಒಂದೇ ದಿನ 2 ಅರ್ಧಶತಕ ಬಾರಿಸಿ ಉತ್ತರ ನೀಡಿದ್ದಾರೆ.
3 / 6
ಇಲ್ಲಿ ಒಂದೇ ದಿನ ಅದೇಗೆ ಎರಡು ಅರ್ಧಶತಕ ಬಾರಿಸಿದ್ರು ಎಂಬ ಪ್ರಶ್ನೆ ಮೂಡುವುದು ಸಹಜ. ಈ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಬಾಬರ್ ಆಝಂ 58 ರನ್ ಬಾರಿಸಿದ್ದರು. ಬಾಬರ್ ಅವರ ಈ ಅರ್ಧಶತಕದ ಪಾಕಿಸ್ತಾನ್ ತಂಡವು ದಿಢೀರ್ ಕುಸಿತಕ್ಕೊಳಗಾಗಿ ಕೇವಲ 194 ರನ್ ಗಳಿಗೆ ಆಲೌಟ್ ಆಗಿದೆ.
4 / 6
ಅತ್ತ ಮೊದಲ ಇನಿಂಗ್ಸ್ನಲ್ಲಿ 615 ರನ್ ಕಲೆಹಾಕಿದ್ದ ಸೌತ್ ಆಫ್ರಿಕಾ ತಂಡವು ಪಾಕಿಸ್ತಾನ್ ಮೇಲೆ ಫಾಲೋಆನ್ ಹೇರಿದೆ. ಹೀಗಾಗಿ ಮೊದಲ ಇನಿಂಗ್ಸ್ ನಲ್ಲಿ ಆಲೌಟ್ ಆದ ಬೆನ್ನಲ್ಲೇ ಪಾಕಿಸ್ತಾನ್ ದ್ವಿತೀಯ ಇನಿಂಗ್ಸ್ ಆರಂಭಿಸಿದೆ.
5 / 6
ದ್ವಿತೀಯ ಇನಿಂಗ್ಸ್ ನಲ್ಲೂ ಆರಂಭಿಕನಾಗಿ ಕಣಕ್ಕಿಳಿದ ಬಾಬರ್ ಆಝಂ 3ನೇ ದಿನದಾಟದೊಳಗೆ 124 ಎಸೆತಗಳಲ್ಲಿ 10 ಫೋರ್ ಗಳೊಂದಿಗೆ 81 ರನ್ ಬಾರಿಸಿದ್ದಾರೆ. ಈ ಮೂಲಕ ಒಂದೇ ದಿನ ಎರಡು ಅರ್ಧಶತಕ ಬಾರಿಸಿ ಮಿಂಚಿದರು.
6 / 6
ಇನ್ನು ಬಾಬರ್ ಆಝಂ (81) ಹಾಗೂ ಶಾನ್ ಮಸೂದ್ (101*) ಭರ್ಜರಿ ಬ್ಯಾಟಿಂಗ್ ನೆರವಿನಿಂದ ಪಾಕಿಸ್ತಾನ್ ತಂಡವು ಮೂರನೇ ದಿನದಾಟದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 213 ರನ್ ಕಲೆಹಾಕಿದೆ. ಈ ಮೂಲಕ ಫಾಲೋಆನ್ ಹೇರಿದ ಸೌತ್ ಆಫ್ರಿಕಾ ವಿರುದ್ಧ ಪಾಕ್ ಬ್ಯಾಟರ್ ದಿಟ್ಟ ಹೋರಾಟವನ್ನು ಪ್ರದರ್ಶಿಸಿದ್ದಾರೆ.
Published On - 7:30 am, Mon, 6 January 25