- Kannada News Photo gallery Cricket photos Pat cummins and Nathan Lyon Break Ashwin's WTC Most Wickets Record
ನಿವೃತ್ತಿ ಬೆನ್ನಲ್ಲೇ ಅಶ್ವಿನ್ರ ವಿಶ್ವ ದಾಖಲೆ ಮುರಿದ ಆಸ್ಟ್ರೇಲಿಯನ್ನರು
Ravichandran Ashwin's Record: ರವಿಚಂದ್ರನ್ ಅಶ್ವಿನ್ ಬರೆದ ವಿಶ್ವ ದಾಖಲೆಯನ್ನು ಆಸ್ಟ್ರೇಲಿಯಾ ಬೌಲರ್ಗಳು ಮುರಿದಿದ್ದಾರೆ. ಈ ದಾಖಲೆ ಮುರಿಯುವುದರೊಂದಿಗೆ ಪ್ಯಾಟ್ ಕಮಿನ್ಸ್ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಕೂಡ ಯಾರಿಂದಲೂ ಸಾಧ್ಯವಾಗದ ವಿಶೇಷ ಮೈಲುಗಲ್ಲನ್ನು ಮುಟ್ಟುವ ಮೂಲಕ ಎಂಬುದು ವಿಶೇಷ.
Updated on: Jan 06, 2025 | 11:57 AM

ಈ ಬಾರಿಯ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ ಬೌಲರ್ಗಳ ಪಟ್ಟಿಯಲ್ಲಿ ಟೀಮ್ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಗ್ರಸ್ಥಾನದಲ್ಲಿದ್ದರು. ಆದರೆ ಇದೀಗ ಆಸ್ಟ್ರೇಲಿಯಾ ಬೌಲರ್ಗಳಾದ ಪ್ಯಾಟ್ ಕಮಿನ್ಸ್ ಹಾಗೂ ನಾಥನ್ ಲಿಯಾನ್ ಮೊದಲೆರಡು ಸ್ಥಾನಗಳನ್ನು ಅಲಂಕರಿಸಿದ್ದಾರೆ.

ಬ್ರಿಸ್ಬೇನ್ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್ ಪಂದ್ಯದ ಮೂಲಕ ರವಿಚಂದ್ರನ್ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ದಿಢೀರ್ ನಿವೃತ್ತಿ ನೀಡಿದ್ದರು. ಈ ನಿವೃತ್ತಿ ಬೆನ್ನಲ್ಲೇ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ ಅಶ್ವಿನ್ ದಾಖಲೆ ಮುರಿಯುವಲ್ಲಿ ಆಸೀಸ್ ಬೌಲರ್ಗಳು ಯಶಸ್ವಿಯಾಗಿದ್ದಾರೆ.

2019 ರಿಂದ 2024 ರವರೆಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿಯಲ್ಲಿ ಒಟ್ಟು 41 ಪಂದ್ಯಗಳನ್ನಾಡಿರುವ ರವಿಚಂದ್ರನ್ ಅಶ್ವಿನ್ 78 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿದ್ದಾರೆ. ಈ ವೇಳೆ 1479 ಓವರ್ಗಳನ್ನು ಎಸೆದಿರುವ ಅಶ್ವಿನ್ ಒಟ್ಟು 195 ವಿಕೆಟ್ ಕಬಳಿಸಿ ದಾಖಲೆ ಬರೆದಿದ್ದರು.

ಟೀಮ್ ಇಂಡಿಯಾ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ಒಂದು ವಿಕೆಟ್ ಕಬಳಿಸುವುದರೊಂದಿಗೆ ನಾಥನ್ ಲಿಯಾನ್, ಅಶ್ವಿನ್ ಅವರ ದಾಖಲೆಯನ್ನು ಮುರಿದಿದ್ದಾರೆ. 2019 ರಿಂದ ವಿಶ್ವ ಟೆಸ್ಟ್ ಚಾಂಪಿಯನ್ಸ್ ಸರಣಿಯಲ್ಲಿ 85 ಇನಿಂಗ್ಸ್ಗಳಲ್ಲಿ 1932 ಓವರ್ ಎಸೆದಿರುವ ನಾಥನ್ ಲಿಯಾನ್ ಈವರೆಗೆ 196 ವಿಕೆಟ್ ಕಬಳಿಸಿದ್ದಾರೆ.

ನಾಥನ್ ಲಿಯಾನ್, ಅಶ್ವಿನ್ ಅವರ ದಾಖಲೆ ಮುರಿದ ಬೆನ್ನಲ್ಲೇ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಇಬ್ಬರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದು ವಿಶೇಷ. ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಒಟ್ಟು 5 ವಿಕೆಟ್ ಪಡೆದ ಪ್ಯಾಟ್ ಕಮಿನ್ಸ್ ವಿಶ್ವ ಟೆಸ್ಟ್ ಚಾಂಪಿಯನ್ಸ್ ಸರಣಿಯಲ್ಲಿ 200 ವಿಕೆಟ್ ಪಡೆದ ವಿಶ್ವದ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ.

ಪ್ಯಾಟ್ ಕಮಿನ್ಸ್ ಈ ಸಾಧನೆ ಮಾಡಲು ತೆಗೆದುಕೊಂಡಿದ್ದು 47 ಟೆಸ್ಟ್ ಪಂದ್ಯಗಳನ್ನು. 2019 ರಿಂದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿ ಆಡುತ್ತಿರುವ ಕಮಿನ್ಸ್ ಒಟ್ಟು 88 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿದ್ದಾರೆ. ಈ ವೇಳೆ 1535.5 ಓವರ್ಗಳನ್ನು ಎಸೆದು ಒಟ್ಟು 200 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಇನ್ನೂರು ವಿಕೆಟ್ ಪೂರೈಸಿದ ವಿಶ್ವದ ಮೊದಲ ಬೌಲರ್ ಎಂಬ ವರ್ಲ್ಡ್ ರೆಕಾರ್ಡ್ ನಿರ್ಮಿಸಿದ್ದಾರೆ.



















