ಪ್ರಧಾನಿ ಮೋದಿಗೆ ‘ನಮೋ’ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದ ಕ್ರಿಕೆಟ್ ದೇವರು; ಫೋಟೋ ನೋಡಿ
Sachin Tendulkar: ಸೆಪ್ಟೆಂಬರ್ 23 ರಂದು, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿಯಲ್ಲಿ ಹೊಸ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಶಂಕುಸ್ಥಾಪನೆ ಮಾಡಿದರು. ಈ ವೇಳೆ ಟೀಂ ಇಂಡಿಯಾದ ಲೆಜೆಂಡರಿ ಬ್ಯಾಟರ್ ಸಚಿನ್ ತೆಂಡೂಲ್ಕರ್ ಅವರು 'ನಮೋ' ಎಂದು ಬರೆದಿರುವ ಭಾರತದ ಜೆರ್ಸಿಯನ್ನು ಪ್ರಧಾನಿ ಮೋದಿಯವರಿಗೆ ಉಡುಗೊರೆಯಾಗಿ ನೀಡಿದರು.
1 / 8
ಸೆಪ್ಟೆಂಬರ್ 23 ರಂದು, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿಯಲ್ಲಿ ಹೊಸ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಶಂಕುಸ್ಥಾಪನೆ ಮಾಡಿದರು.
2 / 8
ವಾರಣಾಸಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನ ಶಂಕುಸ್ಥಾಪನೆ ಸಮಾರಂಭದಲ್ಲಿ ಭಾರತದ ಕ್ರಿಕೆಟ್ ದಿಗ್ಗಜರಾದ ಸುನಿಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್, ಕಪಿಲ್ ದೇವ್, ರವಿಶಾಸ್ತ್ರಿ, ದಿಲೀಪ್ ಬೆಂಗಸರ್ಕರ್, ರೋಜರ್ ಬಿನ್ನಿ, ಮದನ್ ಲಾಲ್, ಗುಂಡಪ್ಪ ವಿಶ್ವನಾಥ್ ಮತ್ತು ಗೋಪಾಲ್ ಶರ್ಮಾ ಉಪಸ್ಥಿತರಿದ್ದರು.
3 / 8
ಈ ವೇಳೆ ಟೀಂ ಇಂಡಿಯಾದ ಲೆಜೆಂಡರಿ ಬ್ಯಾಟರ್ ಸಚಿನ್ ತೆಂಡೂಲ್ಕರ್ ಅವರು 'ನಮೋ' ಎಂದು ಬರೆದಿರುವ ಭಾರತದ ಜೆರ್ಸಿಯನ್ನು ಪ್ರಧಾನಿ ಮೋದಿಯವರಿಗೆ ಉಡುಗೊರೆಯಾಗಿ ನೀಡಿದರು.
4 / 8
ಸಚಿನ್ ಹೊರತುಪಡಿಸಿ, ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಮತ್ತು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಭಾರತದ ಪ್ರಧಾನಿಗೆ ಸ್ಮರಣಿಕೆಯಾಗಿ ಬ್ಯಾಟ್ ಅನ್ನು ಉಡುಗೊರೆಯಾಗಿ ನೀಡಿದರು.
5 / 8
ಈ ಕ್ರೀಡಾಂಗಣದ ವಾಸ್ತುಶಿಲ್ಪವು ಭಗವಾನ್ ಶಿವನಿಂದ ಪ್ರೇರಿತವಾಗಿದ್ದು, ಇದು ಅರ್ಧಚಂದ್ರಾಕಾರದ ಛಾವಣಿಯ ಹೊದಿಕೆ ಮತ್ತು ತ್ರಿಶೂಲದ ಆಕಾರದ ಫ್ಲಡ್-ಲೈಟ್ಗಳನ್ನು ಹೊಂದಿದೆ. ಅಲ್ಲದೆ ಸ್ನಾನ ಘಟ್ಟಗಳ ಮೆಟ್ಟಿಲುಗಳ ಮಾದರಿಯಲ್ಲಿ ಪ್ರೇಕ್ಷಕರ ಗ್ಯಾಲರಿಯು ನಿರ್ಮಾಣ ಮಾಡಲಾಗುತ್ತಿದೆ. ಇಲ್ಲಿ ಸುಮಾರು 30 ಸಾವಿರ ಅಭಿಮಾನಿಗಳು ಏಕಕಾಲದಲ್ಲಿ ಪಂದ್ಯವನ್ನು ವೀಕ್ಷಿಸಬಹುದಾಗಿದ್ದು, ಈ ಕ್ರೀಡಾಂಗಣದ ನಿರ್ಮಾಣ ಕೆಲಸ ಡಿಸೆಂಬರ್ 2025 ರೊಳಗೆ ಪೂರ್ಣಗೊಳ್ಳುವ ಸಾಧ್ಯತೆಗಳಿವೆ.
6 / 8
ವಾರಣಾಸಿ ಕ್ರೀಡಾಂಗಣದ ಶಂಕುಸ್ಥಾಪನೆ ಸಮಾರಂಭದಲ್ಲಿ ಮಾತನಾಡಿದ ಮೋದಿ, ‘ಮಣಿಪುರದಲ್ಲಿ ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾಲಯವನ್ನು ತೆರೆಯಲಾಗಿದೆ. ಉತ್ತರ ಪ್ರದೇಶದಲ್ಲಿ ಕ್ರೀಡಾ ಕ್ಷೇತ್ರಕ್ಕೆ ಕೋಟ್ಯಂತರ ರೂ. ಅನುದಾನ ನೀಡಲಾಗಿದೆ. ಗೋರಖ್‌ಪುರದಲ್ಲಿ ಕ್ರೀಡಾ ಕಾಲೇಜು, ಮೀರತ್‌ನಲ್ಲಿರುವ ಮೇಜರ್ ಧ್ಯಾನ್ ಚಂದ್ ಕ್ರೀಡಾ ವಿಶ್ವವಿದ್ಯಾಲಯ. ಹಾಗೂ ದೇಶಾದ್ಯಂತ ಅನೇಕ ಕ್ರೀಡಾ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ ಎಂದರು.
7 / 8
ಮುಂದುವರೆದು ಮಾತನಾಡಿದ ಮೋದಿ, ‘ಅಭಿವೃದ್ಧಿಗೆ ಕ್ರೀಡಾ ಸೌಲಭ್ಯಗಳ ಬೃಹತ್ ವಿಸ್ತರಣೆ ಅಗತ್ಯ. ನಮ್ಮಲ್ಲಿ ಅನೇಕರು ವಿಶ್ವದ ಅನೇಕ ನಗರಗಳನ್ನು ತಿಳಿದಿದ್ದಾರೆ. ಏಕೆಂದರೆ ಅವುಗಳು ವಿವಿಧ ಅಂತರರಾಷ್ಟ್ರೀಯ ಮಟ್ಟದ ಕ್ರೀಡೆಗಳನ್ನು ಆಯೋಜಿಸಿವೆ. ಅಂತಹ ಕ್ರೀಡಾ ಕೇಂದ್ರವನ್ನು ಭಾರತದಲ್ಲೂ ನಿರ್ಮಿಸುತ್ತೇವೆ. ಇದರಿಂದ ಇಲ್ಲಿಯೂ ಅಂತಾರಾಷ್ಟ್ರೀಯ ಮಟ್ಟದ ವಿವಿಧ ಆಟಗಳನ್ನು ಆಯೋಜಿಸಬಹುದು. ಇಂದು ಅಡಿಗಲ್ಲು ಹಾಕಿದ ಈ ಕ್ರೀಡಾಂಗಣ ನಮ್ಮ ಆಟದ ಬದ್ಧತೆಗೆ ಸಾಕ್ಷಿಯಾಗಿದೆ’ ಎಂದು ಹೇಳಿದರು.
8 / 8
ವಾರಣಾಸಿಯಲ್ಲಿ ನಿರ್ಮಾಣವಾಗಲಿರುವ ಮಹದೇವನ ನಗರಿ ಕ್ರೀಡಾಂಗಣದ ಕುರಿತು ಮಾತನಾಡಿದ ಮೋದಿ, ‘ವಾರಣಾಸಿ ಸ್ಟೇಡಿಯಂ ಕೇವಲ ಇಟ್ಟಿಗೆ ಮತ್ತು ಕಲ್ಲಿನಿಂದ ಮಾಡಿದ ಕ್ರೀಡಾಂಗಣವಾಗುವುದಿಲ್ಲ. ಬದಲಿಗೆ, ಈ ಕ್ರೀಡಾಂಗಣ ಭವಿಷ್ಯದ ಭಾರತದ ಸಂಕೇತವಾಗಲಿದೆ. ಈ ಕ್ರೀಡಾಂಗಣವನ್ನು ಶಿವನಿಗೆ ಅರ್ಪಿಸಲಾಗುವುದು. ಇದರ ವಿನ್ಯಾಸವನ್ನು ಸಹ ಮಹಾದೇವನಿಗೆ ಅರ್ಪಿಸಲಾಗಿದೆ. ಈ ಕ್ರೀಡಾಂಗಣದಲ್ಲಿ ಹಲವು ಕ್ರಿಕೆಟ್ ಪಂದ್ಯಗಳು ನಡೆಯಲಿವೆ. ಇದರಿಂದ ವಾರಣಾಸಿಯಲ್ಲಿ ಕ್ರಿಕೆಟ್ ಆಡಬಯಸುವ ಯುವಕರು ಲಾಭ ಪಡೆಯಲಿದ್ದಾರೆ. ನಾನು ನನ್ನನ್ನು ಅದೃಷ್ಟಶಾಲಿ ಎಂದು ಪರಿಗಣಿಸುತ್ತೇನೆ. ಏಕೆಂದರೆ, ನನ್ನ ಕಾಶಿ ಯಾವಾಗಲೂ ನನ್ನನ್ನು ಆಶೀರ್ವದಿಸುತ್ತದೆ. ನನ್ನ ಪಕ್ಕದಲ್ಲಿ ನಿಂತಿದೆ. ಕಾಶಿಯಲ್ಲಿ ಈ ರೀತಿ ಅಭಿವೃದ್ಧಿಯ ಹೊಸ ಅಧ್ಯಾಯ ಬರೆಯುತ್ತೇವೆ. ಈ ವಾರಣಾಸಿ ಕ್ರಿಕೆಟ್ ಸ್ಟೇಡಿಯಂಗೆ ಅಡಿಗಲ್ಲು ಹಾಕಿದ ಕಾಶಿಯ ಜನತೆಗೆ ಅಭಿನಂದನೆಗಳು.' ಎಂದರು.