Updated on: Dec 19, 2021 | 4:57 PM
ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್‌ನಿಂದ ದೂರವಿರಬಹುದು, ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಅವರ ಬಗ್ಗೆ ಚರ್ಚೆ ಮುಂದುವರೆದಿದೆ. ಇತ್ತೀಚೆಗೆ, ಅವರ ಪತ್ನಿ ಸಾಕ್ಷಿ ಧೋನಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಫೋಟೋ ಸಖತ್ ವೈರಲ್ ಆಗುತ್ತಿದೆ. ಇದರಲ್ಲಿ ಮಹಿ ಸೂಟ್ ಮತ್ತು ಬೂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಮಹೇಂದ್ರ ಸಿಂಗ್ ಧೋನಿ ಅವರ ಪುತ್ರಿ ಜೀವಾ ಮತ್ತು ಪತ್ನಿ ಸಾಕ್ಷಿ ಧೋನಿ ಜೊತೆಗೆ ಪ್ರಫುಲ್ ಪಟೇಲ್ ಅವರ ಮಗನ ಮದುವೆಯಲ್ಲಿ ಪಾಲ್ಗೊಳ್ಳಲು ಜೈಪುರ ತಲುಪಿದ್ದಾರೆ. ಸಾಕ್ಷಿ ಧೋನಿ ಮದುವೆ ಕಾರ್ಯಕ್ರಮದ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಸಾಕ್ಷಿ ಧೋನಿ ತಾವು ಹಂಚಿಕೊಂಡಿರುವ ಫೋಟೋಗೆ, ನಮ್ಮಿಬ್ಬರ ಭೇಟಿಯಾಗಿ14 ವರ್ಷಗಳು ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ. ಸಾಕ್ಷಿ ಮತ್ತು ಧೋನಿ ಮೊದಲ ಬಾರಿಗೆ 2007 ರಲ್ಲಿ ಭೇಟಿಯಾದರು. ಮೂರು ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ ಇಬ್ಬರೂ 2010 ರಲ್ಲಿ ವಿವಾಹವಾದರು. ಸಾಕ್ಷಿ ಮತ್ತು ಧೋನಿಗೆ ಜೀವಾ ಎಂಬ ಮಗಳಿದ್ದಾಳೆ.
ಮಹೇಂದ್ರ ಸಿಂಗ್ ಧೋನಿ ಈ ವರ್ಷ ತಮ್ಮ IPL ತಂಡ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಚಾಂಪಿಯನ್ ಮಾಡಿದರು. ಮುಂದಿನ ಮೂರು ಸೀಸನ್‌ಗಳಿಗೆ ಧೋನಿ ಅವರನ್ನು ಚೆನ್ನೈ ತಂಡ ಉಳಿಸಿಕೊಂಡಿದೆ. ಅದೇ ಸಮಯದಲ್ಲಿ, ಅವರು ಟಿ 20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾದ ಮಾರ್ಗದರ್ಶಕರಾಗಿ ನೇಮಕಗೊಂಡಿದ್ದರು. ಆದರೆ, ತಂಡಕ್ಕೆ ನಾಕೌಟ್ ಹಂತ ತಲುಪಲು ಸಾಧ್ಯವಾಗಲಿಲ್ಲ.