Sanju Samson: ಫ್ಯಾನ್ಸ್ ಅಂದ್ರೆ ಹೀಗಿರಬೇಕು: ಫಿಫಾ ವಿಶ್ವಕಪ್ ಟೂರ್ನಿಯಲ್ಲೂ ಸಂಜು ಸ್ಯಾಮ್ಸನ್ ಬ್ಯಾನರ್​ಗಳು, ಫೋಟೋಗಳು

| Updated By: Vinay Bhat

Updated on: Nov 28, 2022 | 10:28 AM

FIFA World Cup: ಸಂಜು ಸ್ಯಾಮ್ಸನ್​ಗೆ ಜನಬೆಂಬಲ ಕೇವಲ ಕ್ರಿಕೆಟ್​ನಿಂದ ಮಾತ್ರವಲ್ಲ, ಸದ್ಯ ಕತಾರ್​ನಲ್ಲಿ ಸಾಗುತ್ತಿರುವ ಫಿಫಾ ವಿಶ್ವಕಪ್ 2022 ಟೂರ್ನಿಯಲ್ಲೂ ಇವರ ಹವಾ ಜೋರಾಗಿದೆ. ಸ್ಯಾಮ್ಸನ್ ಅವರ ಫೋಟೋಗಳು, ಬ್ಯಾನರ್​​ಗಳು ಫುಟ್ಬಾಲ್ ವಿಶ್ವಕಪ್​ನ ಅನೇಕ ಪಂದ್ಯಗಳಲ್ಲಿ ರಾರಾಜಿಸುತ್ತಿವೆ.

1 / 8
ಸಂಜು ಸ್ಯಾಮ್ಸನ್ ಭಾರತ ಕ್ರಿಕೆಟ್ ತಂಡದ ಖಾಯಂ ಸದಸ್ಯನಲ್ಲ. ಆದರೆ, ಇವರು ವಿಶ್ವದ ಮೂಲೆ ಮೂಲೆಯಲ್ಲಿ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಐಪಿಎಲ್​ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕನಾಗಿರುವ ಇವರಿಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಇದು ಅನೇಕ ಬಾರಿ ಸಾಭೀತಾಗಿದೆ ಕೂಡ. ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಗದ ಸಂದರ್ಭ ಸಂಜು ಹೆಸರು ಟ್ವಿಟರ್ ಟ್ರೆಂಡ್​ನಲ್ಲಿರುವುದು ಖಚಿತ. ಇದಕ್ಕೀಗ ಮತ್ತೊಂದು ಉದಾಹರಣೆ ಸಿಕ್ಕಿದೆ.

2 / 8
ಸಂಜು ಅವರಿಗೆ ಜನಬೆಂಬಲ ಕೇವಲ ಕ್ರಿಕೆಟ್​ನಿಂದ ಮಾತ್ರವಲ್ಲ, ಸದ್ಯ ಕತಾರ್​ನಲ್ಲಿ ಸಾಗುತ್ತಿರುವ ಫಿಫಾ ವಿಶ್ವಕಪ್ 2022 ಟೂರ್ನಿಯಲ್ಲೂ ಇವರ ಹವಾ ಜೋರಾಗಿದೆ. ಸಂಜು ಸ್ಯಾಮ್ಸನ್ ಅವರ ಫೋಟೋಗಳು, ಬ್ಯಾನರ್​​ಗಳು ಫುಟ್ಬಾಲ್ ವಿಶ್ವಕಪ್​ನ ಅನೇಕ ಪಂದ್ಯಗಳಲ್ಲಿ ರಾರಾಜಿಸುತ್ತಿವೆ. ಇದರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್  ವೈರಲ್ ಆಗುತ್ತಿದೆ.

3 / 8
ಕತಾರ್ ಫಿಫಾ ವಿಶ್ವಕಪ್ 2022 ರಲ್ಲಿ ಪಂದ್ಯ ನಡೆಯಯುವ ಮಧ್ಯೆ ಸಂಜು ಸ್ಯಾಮ್ಸನ್ ಬ್ಯಾನರ್ ಹಿಡಿದು ನಿಂಂತಿರುವ ಅಭಿಮಾನಿ.

4 / 8
ಟೀಮ್ ಇಂಡಿಯಾ ಸದ್ಯ ನ್ಯೂಜಿಲೆಂಡ್​ ವಿರುದ್ದದ ಟಿ20 ಸರಣಿ ಬಳಿಕ ಏಕದಿನ ಸರಣಿ ಆಡುತ್ತಿದೆ. ಇಲ್ಲುಕೂಡ ಸಂಜುಗೆ ಅವಕಾಶವಿಲ್ಲ. ಭಾರತ ಕಿವೀಸ್ ನಾಡಿಗೆ ಪ್ರವಾಸ ಬೆಳೆಸುವ ಮುನ್ನ ಹಿರಿಯ ಆಟಗಾರರಿಗೆ ರೆಸ್ಟ್ ನೀಡಿದ ಪರಿಣಾಮ ತಂಡಕ್ಕೆ ಆಯ್ಕೆಯಾಗಿದ್ದ ಸಂಜು ಸ್ಯಾಮ್ಸನ್‍ಗೆ ಅವಕಾಶ ಸಿಗಬಹುದೆಂಬ ನಿರೀಕ್ಷೆ ಇತ್ತು. ಆದರೆ 3 ಪಂದ್ಯಗಳ ಟಿ20 ಸರಣಿಯಲ್ಲಿ ಒಂದೇ ಒಂದು ಪಂದ್ಯದಲ್ಲೂ ಸ್ಯಾಮ್ಸನ್‍ಗೆ ಅವಕಾಶ ನೀಡಲಿಲ್ಲ.

5 / 8
ಕೊನೆಗೂ ಸ್ಯಾಮ್ಸನ್ ಅವರನ್ನು ಮೊದಲ ಏಕದಿನದಲ್ಲಿ ಕಣಕ್ಕಿಳಿಸಿದರು. ತಂಡ ಸಂಕಷ್ಟದಲ್ಲಿದ್ದ ಸಂದರ್ಭ ಕ್ರೀಸ್​​ಗೆ ಬಂದ ಸಂಜು ಅವರು ಶ್ರೇಯಸ್ ಅಯ್ಯರ್ ಜೊತೆಗೂಡಿ 94 ರನ್​ಗಳ ಜೊತೆಯಾಟ ಆಡಿದರು. ಆದರೆ, ದ್ವಿತೀಯ ಏಕದಿನದಿಂದ ಪುನಃ ಕೈಬಿಟ್ಟರು. ಇದು ಸಂಜು ಫ್ಯಾನ್ಸ್​ಗೆ ನೋವುಂಟು ಮಾಡಿದ್ದು ಬಿಸಿಸಿಐ ವಿರುದ್ಧ ಕಿಡಿ ಕಾರುತ್ತಿದ್ದಾರೆ.

6 / 8
ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಅಂತಿಮ ಏಕದಿನ ಪಂದ್ಯ ನವೆಂಬರ್ 30 ರಂದು ಕ್ರಿಸ್ಟ್​ಚರ್ಚ್​ನ ಹೇಗ್ಲೆ ಓವಲ್ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯಕ್ಕೂ ಟೀಮ್ ಇಂಡಿಯಾದಲ್ಲಿ ಬದಲಾವಣೆ ಅನುಮಾನ. ದ್ವಿತೀಯ ಪಂದ್ಯದಲ್ಲಿ ಆಡಿದ ಆಟಗಾರರೇ ಕಣಕ್ಕಿಳಿಯಲಿದ್ದಾರೆ. ಹೀಗಾಗಿ ಸಂಜು ಸ್ಯಾಮ್ಸನ್ ಮತ್ತೊಮ್ಮೆ ಬೆಂಚ್ ಕಾಯಬೇಕಿದೆ.

7 / 8
ಸಂಜುಗೆ ಯಾಕೆ ಅವಕಾಶವವಿಲ್ಲ?: ಭಾರತಕ್ಕೆ ಆರನೇ ಬೌಲರ್​ ಅವಶ್ಯತೆ ತುಂಬಾ ಇದೆ. ಮೊದಲ ಏಕದಿನದಲ್ಲಿ ಅರ್ಶ್​ದೀಪ್ ಸಿಂಗ್, ಚಹಲ್​, ಶಾರ್ದೂಲ್​ ಸೇರಿ ಪ್ರತಿ ಬೌಲರ್ ದುಬಾರಿಯಾದರು. ಹೀಗಾಗಿ 2ನೇ ಏಕದಿನಕ್ಕೆ ಅರನೇ ಬೌಲರ್ ಅಗತ್ಯವಿದ್ದ ಕಾರಣ ಓರ್ವ ಬ್ಯಾಟರ್ ಅನ್ನು ಹೊರಗಿಡುವುದು ಅನಿವಾರ್ಯವಾಗಿತ್ತು. ಧವನ್​ಗೆ ಇತರೆ ಅವಕಾಶ ಇಲ್ಲದ ಕಾರಣ ಸ್ಯಾಮ್ಸನ್ ತಮ್ಮ ಸ್ಥಾನವನ್ನು ತ್ಯಾಗ ಮಾಡಬೇಕಾಗಿ ಬಂತು.

8 / 8
3ನೇ ಏಕದಿನ ನಡೆಯಲಿರುವ ಹೇಗ್ಲೆ ಓವಲ್ ಮೈದಾನದ ಪಿಚ್ ಬ್ಯಾಟರ್​ ಮತ್ತು ಬೌಲರ್ ಇಬ್ಬರಿಗೂ ಸಹಾಯ ಮಾಡಲಿದೆ. ಇಲ್ಲಿ 300+ ರನ್ ಸುಲಭವಾಗಿ ಕಲೆಹಾಕಬಹುದು. ವೇಗಿಗಳು ಲೈನ್ ಮತ್ತು ಲೆಂತ್ ಅನ್ನು ಅರಿತು ಬೌಲಿಂಗ್ ಮಾಡಿದರೆ ಬ್ಯಾಟರ್​ಗಳು ಪರದಾಡುವುದು ಖಚಿತ. ವಿಶೇಷ ಎಂದರೆ ಭಾರತ ಈ ಮೈದಾನದಲ್ಲಿ ಇದುವರೆಗೆ ಒಂದೇ ಒಂದು ಏಕದಿನ ಪಂದ್ಯವನ್ನು ಆಡಿಲ್ಲ.

Published On - 10:28 am, Mon, 28 November 22