Ruturaj Gaikwad: ಒಂದೇ ಓವರ್ನಲ್ಲಿ ಅತ್ಯಧಿಕ ರನ್: ವಿಶ್ವ ದಾಖಲೆ ಸರಿಗಟ್ಟಿದ ರುತುರಾಜ್ ಗಾಯಕ್ವಾಡ್
TV9kannada Web Team | Edited By: Zahir PY
Updated on: Nov 28, 2022 | 6:56 PM
Ruturaj Gaikwad's World Record: ಲೀಸ್ಟ್ ಎ ಕ್ರಿಕೆಟ್ನಲ್ಲಿ ಒಂದೇ ಓವರ್ನಲ್ಲಿ ಅತ್ಯಧಿಕ ರನ್ ಬಿಟ್ಟುಕೊಟ್ಟ ಕೆಟ್ಟ ದಾಖಲೆ ಶಿವಂ ಸಿಂಗ್ ಪಾಲಾದರೆ, ಅತ್ಯಧಿಕ ಬಾರಿಸುವ ಮೂಲಕ ರುತುರಾಜ್ ವಿಶ್ವ ದಾಖಲೆ ಸರಿಗಟ್ಟಿದ್ದರು.
Nov 28, 2022 | 6:56 PM
ವಿಜಯ್ ಹಜಾರೆ ಟೂರ್ನಿಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಮಹಾರಾಷ್ಟ್ರ ತಂಡದ ಸ್ಟಾರ್ ಆಟಗಾರ ರುತುರಾಜ್ ಗಾಯಕ್ವಾಡ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಉತ್ತರ ಪ್ರದೇಶ ವಿರುದ್ಧ ನಡೆದ ಈ ಪಂದ್ಯದಲ್ಲಿ ರುತುರಾಜ್ ಕೇವಲ 159 ಎಸೆತಗಳಲ್ಲಿ 10 ಫೋರ್ ಹಾಗೂ 16 ಸಿಕ್ಸರ್ನೊಂದಿಗೆ 220 ರನ್ ಚಚ್ಚಿದ್ದರು.
1 / 6
ವಿಶೇಷ ಎಂದರೆ ಈ 16 ಸಿಕ್ಸ್ಗಳಲ್ಲಿ 7 ಸಿಕ್ಸ್ಗಳು ಒಂದೇ ಓವರ್ನಲ್ಲಿ ಮೂಡಿಬಂದಿತ್ತು. 49ನೇ ಓವರ್ ಎಸೆದ ಶಿವಂ ಸಿಂಗ್ ಎಸೆತಗಳಲ್ಲಿ ಸಿಕ್ಸರ್ಗಳ ಸುರಿಮಳೆಗೈದ ರುತುರಾಜ್ ಹೊಸ ಇತಿಹಾಸ ಬರೆದರು.
2 / 6
ಶಿವಂ ಸಿಂಗ್ ಎಸೆದ ಮೊದಲ ಎರಡು ಎಸೆತಗಳನ್ನು ಮಿಡ್ ಆನ್ನತ್ತ ಸಿಕ್ಸ್ ಬಾರಿಸಿದರು. ಇನ್ನು ಮೂರನೇ ಎಸೆತದಲ್ಲಿ ಮಿಡ್ ವಿಕೆಟ್ನತ್ತ ಸಿಕ್ಸ್ ಸಿಡಿಸಿದರು. 4ನೇ ಎಸೆತವನ್ನು ಮಿಡ್ ಆಫ್ನತ್ತ ಬಾರಿಸುವ ಮೂಲಕ ಮತ್ತೊಂದು ಸಿಕ್ಸ್ಗಿಟ್ಟಿಸಿಕೊಂಡರು. ಇನ್ನು 5ನೇ ಎಸೆತ ನೋ ಬಾಲ್...ಅದಕ್ಕೂ ಸಿಕ್ಸ್ ಸಿಡಿಸುವ ಮೂಲಕ ಅಬ್ಬರಿಸಿದರು. ಆ ಬಳಿಕ ಸಿಕ್ಕ ಫ್ರೀಹಿಟ್ ಎಸೆತದಲ್ಲಿ ಮತ್ತೊಂದು ಸಿಕ್ಸ್ ಸಿಡಿಸಿದರು. ಇನ್ನು ಕೊನೆಯ ಎಸೆತದಲ್ಲಿ ಮಿಡ್ ಆಫ್ನತ್ತ ಭರ್ಜರಿ ಸಿಕ್ಸ್ ಬಾರಿಸುವ ಮೂಲಕ ಒಟ್ಟು 43 ರನ್ ಕಲೆಹಾಕಿದರು.
3 / 6
ಇದರೊಂದಿಗೆ ಲೀಸ್ಟ್ ಎ ಕ್ರಿಕೆಟ್ನಲ್ಲಿ ಒಂದೇ ಓವರ್ನಲ್ಲಿ ಅತ್ಯಧಿಕ ರನ್ ಬಿಟ್ಟುಕೊಟ್ಟ ಕೆಟ್ಟ ದಾಖಲೆ ಶಿವಂ ಸಿಂಗ್ ಪಾಲಾದರೆ, ಅತ್ಯಧಿಕ ಬಾರಿಸುವ ಮೂಲಕ ರುತುರಾಜ್ ವಿಶ್ವ ದಾಖಲೆ ಸರಿಗಟ್ಟಿದ್ದರು.
4 / 6
ಇದಕ್ಕೂ ಮುನ್ನ 2018 ರಲ್ಲಿ ನ್ಯೂಜಿಲೆಂಡ್ನಲ್ಲಿ ನಡೆದ ಲೀಸ್ಟ್ ಎ ಕ್ರಿಕೆಟ್ನಲ್ಲಿ ಒಂದೇ ಓವರ್ನಲ್ಲಿ 43 ರನ್ಗಳನ್ನು ಬಾರಿಸಿದ್ದರು. ಸೆಂಟ್ರಲ್ ಡಿಸ್ಟಿಕ್ಸ್ ವಿರುದ್ಧದ ಪಂದ್ಯದಲ್ಲಿ ನಾರ್ದನ್ ಡಿಸ್ಟಿಕ್ಸ್ ಆಟಗಾರರಾದ ಬಿಆರ್ ಹ್ಯಾಂಪ್ಟನ್ (23) ಹಾಗೂ ಜೆಎಫ್ ಕಾರ್ಟರ್ (18) ಜೊತೆಗೂಡಿ ವಿಲ್ಲೆಮ್ ಲುಡಿಕ್ ಓವರ್ನಲ್ಲಿ (4, 6, nb6, nb6, 1, 6, 6, 6) 43 ರನ್ ಚಚ್ಚಿದ್ದರು.
5 / 6
ಇದೀಗ ರುತುರಾಜ್ ಗಾಯಕ್ವಾಡ್ ಏಕಾಂಗಿಯಾಗಿ ಶಿವಂ ಸಿಂಗ್ ಓವರ್ನಲ್ಲಿ 7 ಸಿಕ್ಸ್ನೊಂದಿಗೆ 43 ರನ್ ಬಾರಿಸುವ ಮೂಲಕ ಹ್ಯಾಂಪ್ಟನ್-ಕಾರ್ಟರ್ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ.