FIFA World Cup: ಸಂಜು ಸ್ಯಾಮ್ಸನ್‍ಗೆ ಜನಬೆಂಬಲ ಕೇವಲ ಕ್ರಿಕೆಟ್ನಿಂದ ಮಾತ್ರವಲ್ಲ, ಸದ್ಯ ಕತಾರ್ನಲ್ಲಿ ಸಾಗುತ್ತಿರುವ ಫಿಫಾ ವಿಶ್ವಕಪ್ 2022 ಟೂರ್ನಿಯಲ್ಲೂ ಇವರ ಹವಾ ಜೋರಾಗಿದೆ. ಸ್ಯಾಮ್ಸನ್ ಅವರ ಫೋಟೋಗಳು, ಬ್ಯಾನರ್ಗಳು ಫುಟ್ಬಾಲ್ ವಿಶ್ವಕಪ್ನ ಅನೇಕ ಪಂದ್ಯಗಳಲ್ಲಿ ರಾರಾಜಿಸುತ್ತಿವೆ.
Nov 28, 2022 | 10:28 AM
ಸಂಜು ಸ್ಯಾಮ್ಸನ್ ಭಾರತ ಕ್ರಿಕೆಟ್ ತಂಡದ ಖಾಯಂ ಸದಸ್ಯನಲ್ಲ. ಆದರೆ, ಇವರು ವಿಶ್ವದ ಮೂಲೆ ಮೂಲೆಯಲ್ಲಿ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕನಾಗಿರುವ ಇವರಿಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಇದು ಅನೇಕ ಬಾರಿ ಸಾಭೀತಾಗಿದೆ ಕೂಡ. ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಗದ ಸಂದರ್ಭ ಸಂಜು ಹೆಸರು ಟ್ವಿಟರ್ ಟ್ರೆಂಡ್ನಲ್ಲಿರುವುದು ಖಚಿತ. ಇದಕ್ಕೀಗ ಮತ್ತೊಂದು ಉದಾಹರಣೆ ಸಿಕ್ಕಿದೆ.
1 / 8
ಸಂಜು ಅವರಿಗೆ ಜನಬೆಂಬಲ ಕೇವಲ ಕ್ರಿಕೆಟ್ನಿಂದ ಮಾತ್ರವಲ್ಲ, ಸದ್ಯ ಕತಾರ್ನಲ್ಲಿ ಸಾಗುತ್ತಿರುವ ಫಿಫಾ ವಿಶ್ವಕಪ್ 2022 ಟೂರ್ನಿಯಲ್ಲೂ ಇವರ ಹವಾ ಜೋರಾಗಿದೆ. ಸಂಜು ಸ್ಯಾಮ್ಸನ್ ಅವರ ಫೋಟೋಗಳು, ಬ್ಯಾನರ್ಗಳು ಫುಟ್ಬಾಲ್ ವಿಶ್ವಕಪ್ನ ಅನೇಕ ಪಂದ್ಯಗಳಲ್ಲಿ ರಾರಾಜಿಸುತ್ತಿವೆ. ಇದರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
2 / 8
ಕತಾರ್ ಫಿಫಾ ವಿಶ್ವಕಪ್ 2022 ರಲ್ಲಿ ಪಂದ್ಯ ನಡೆಯಯುವ ಮಧ್ಯೆ ಸಂಜು ಸ್ಯಾಮ್ಸನ್ ಬ್ಯಾನರ್ ಹಿಡಿದು ನಿಂಂತಿರುವ ಅಭಿಮಾನಿ.
3 / 8
ಟೀಮ್ ಇಂಡಿಯಾ ಸದ್ಯ ನ್ಯೂಜಿಲೆಂಡ್ ವಿರುದ್ದದ ಟಿ20 ಸರಣಿ ಬಳಿಕ ಏಕದಿನ ಸರಣಿ ಆಡುತ್ತಿದೆ. ಇಲ್ಲುಕೂಡ ಸಂಜುಗೆ ಅವಕಾಶವಿಲ್ಲ. ಭಾರತ ಕಿವೀಸ್ ನಾಡಿಗೆ ಪ್ರವಾಸ ಬೆಳೆಸುವ ಮುನ್ನ ಹಿರಿಯ ಆಟಗಾರರಿಗೆ ರೆಸ್ಟ್ ನೀಡಿದ ಪರಿಣಾಮ ತಂಡಕ್ಕೆ ಆಯ್ಕೆಯಾಗಿದ್ದ ಸಂಜು ಸ್ಯಾಮ್ಸನ್‍ಗೆ ಅವಕಾಶ ಸಿಗಬಹುದೆಂಬ ನಿರೀಕ್ಷೆ ಇತ್ತು. ಆದರೆ 3 ಪಂದ್ಯಗಳ ಟಿ20 ಸರಣಿಯಲ್ಲಿ ಒಂದೇ ಒಂದು ಪಂದ್ಯದಲ್ಲೂ ಸ್ಯಾಮ್ಸನ್‍ಗೆ ಅವಕಾಶ ನೀಡಲಿಲ್ಲ.
4 / 8
ಕೊನೆಗೂ ಸ್ಯಾಮ್ಸನ್ ಅವರನ್ನು ಮೊದಲ ಏಕದಿನದಲ್ಲಿ ಕಣಕ್ಕಿಳಿಸಿದರು. ತಂಡ ಸಂಕಷ್ಟದಲ್ಲಿದ್ದ ಸಂದರ್ಭ ಕ್ರೀಸ್ಗೆ ಬಂದ ಸಂಜು ಅವರು ಶ್ರೇಯಸ್ ಅಯ್ಯರ್ ಜೊತೆಗೂಡಿ 94 ರನ್ಗಳ ಜೊತೆಯಾಟ ಆಡಿದರು. ಆದರೆ, ದ್ವಿತೀಯ ಏಕದಿನದಿಂದ ಪುನಃ ಕೈಬಿಟ್ಟರು. ಇದು ಸಂಜು ಫ್ಯಾನ್ಸ್ಗೆ ನೋವುಂಟು ಮಾಡಿದ್ದು ಬಿಸಿಸಿಐ ವಿರುದ್ಧ ಕಿಡಿ ಕಾರುತ್ತಿದ್ದಾರೆ.
5 / 8
ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಅಂತಿಮ ಏಕದಿನ ಪಂದ್ಯ ನವೆಂಬರ್ 30 ರಂದು ಕ್ರಿಸ್ಟ್ಚರ್ಚ್ನ ಹೇಗ್ಲೆ ಓವಲ್ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯಕ್ಕೂ ಟೀಮ್ ಇಂಡಿಯಾದಲ್ಲಿ ಬದಲಾವಣೆ ಅನುಮಾನ. ದ್ವಿತೀಯ ಪಂದ್ಯದಲ್ಲಿ ಆಡಿದ ಆಟಗಾರರೇ ಕಣಕ್ಕಿಳಿಯಲಿದ್ದಾರೆ. ಹೀಗಾಗಿ ಸಂಜು ಸ್ಯಾಮ್ಸನ್ ಮತ್ತೊಮ್ಮೆ ಬೆಂಚ್ ಕಾಯಬೇಕಿದೆ.
6 / 8
ಸಂಜುಗೆ ಯಾಕೆ ಅವಕಾಶವವಿಲ್ಲ?: ಭಾರತಕ್ಕೆ ಆರನೇ ಬೌಲರ್ ಅವಶ್ಯತೆ ತುಂಬಾ ಇದೆ. ಮೊದಲ ಏಕದಿನದಲ್ಲಿ ಅರ್ಶ್ದೀಪ್ ಸಿಂಗ್, ಚಹಲ್, ಶಾರ್ದೂಲ್ ಸೇರಿ ಪ್ರತಿ ಬೌಲರ್ ದುಬಾರಿಯಾದರು. ಹೀಗಾಗಿ 2ನೇ ಏಕದಿನಕ್ಕೆ ಅರನೇ ಬೌಲರ್ ಅಗತ್ಯವಿದ್ದ ಕಾರಣ ಓರ್ವ ಬ್ಯಾಟರ್ ಅನ್ನು ಹೊರಗಿಡುವುದು ಅನಿವಾರ್ಯವಾಗಿತ್ತು. ಧವನ್ಗೆ ಇತರೆ ಅವಕಾಶ ಇಲ್ಲದ ಕಾರಣ ಸ್ಯಾಮ್ಸನ್ ತಮ್ಮ ಸ್ಥಾನವನ್ನು ತ್ಯಾಗ ಮಾಡಬೇಕಾಗಿ ಬಂತು.
7 / 8
3ನೇ ಏಕದಿನ ನಡೆಯಲಿರುವ ಹೇಗ್ಲೆ ಓವಲ್ ಮೈದಾನದ ಪಿಚ್ ಬ್ಯಾಟರ್ ಮತ್ತು ಬೌಲರ್ ಇಬ್ಬರಿಗೂ ಸಹಾಯ ಮಾಡಲಿದೆ. ಇಲ್ಲಿ 300+ ರನ್ ಸುಲಭವಾಗಿ ಕಲೆಹಾಕಬಹುದು. ವೇಗಿಗಳು ಲೈನ್ ಮತ್ತು ಲೆಂತ್ ಅನ್ನು ಅರಿತು ಬೌಲಿಂಗ್ ಮಾಡಿದರೆ ಬ್ಯಾಟರ್ಗಳು ಪರದಾಡುವುದು ಖಚಿತ. ವಿಶೇಷ ಎಂದರೆ ಭಾರತ ಈ ಮೈದಾನದಲ್ಲಿ ಇದುವರೆಗೆ ಒಂದೇ ಒಂದು ಏಕದಿನ ಪಂದ್ಯವನ್ನು ಆಡಿಲ್ಲ.