ಕಳೆದ 10 ಇನ್ನಿಂಗ್ಸ್‌ಗಳನ್ನು ಗಮನಿಸಿದರೆ, ರಿಷಭ್ ಪಂತ್ ಒಮ್ಮೆ ಮಾತ್ರ 40 ರನ್ ಗಳಿಸಿದ್ದಾರೆ. ಇನ್ನು ಎರಡು ಬಾರಿ 30 ಕ್ಕಿಂತ ಹೆಚ್ಚು ರನ್ ಕಲೆಹಾಕಿದರೆ, ಎರಡು ಬಾರಿ 20 ಕ್ಕಿಂತ ಹೆಚ್ಚು ರನ್ಗಳಿಸಿದ್ದರು. ಹಾಗೆಯೇ 3 ಬಾರಿ ಒಂದಂಕಿ ಮೊತ್ತಕ್ಕೆ ಔಟಾಗಿದ್ದಾರೆ. ಇದೇ ವೇಳೆ ವಿಕೆಟ್ ಹಿಂದೆ ಕೀಪಿಂಗ್ ಮಾಡುವಾಗಲೂ ಅವರ ಚಾಣಾಕ್ಷತನ ಕಂಡು ಬಂದಿಲ್ಲ. ಕೆಲವು ಸುಲಭ ಕ್ಯಾಚ್‌ಗಳನ್ನು, ರನ್ ಔಟ್, ಸ್ಟಂಪಿಂಗ್ ಅನ್ನು ಕೂಡ ಕೈಚೆಲ್ಲಿದ್ದಾರೆ.