AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ruturaj Gaikwad: ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಸಹ ಆಟಗಾರನಿಗೆ ನೀಡಿ ಹೃದಯ ಗೆದ್ದ ರುತುರಾಜ್

Ruturaj Gaikwad: ವಿಶ್ವ ದಾಖಲೆಯ ಇನಿಂಗ್ಸ್​ಗೆ ಲಭಿಸಿದ ಪ್ರಶಸ್ತಿಯನ್ನು ಸಹ ಆಟಗಾರನಿಗೆ ನೀಡುವ ಮೂಲಕ ರುತುರಾಜ್ ಗಾಯಕ್ವಾಡ್ ಎಲ್ಲರ ಮನ ಗೆದ್ದಿದ್ದಾರೆ.

TV9 Web
| Edited By: |

Updated on: Nov 29, 2022 | 12:23 AM

Share
ವಿಜಯ್ ಹಜಾರೆ ಟೂರ್ನಿಯಲ್ಲಿ ಸೋಮವಾರ ನಡೆದ  ಉತ್ತರ ಪ್ರದೇಶ ವಿರುದ್ದದ ಪಂದ್ಯದಲ್ಲಿ ರುತುರಾಜ್ ಗಾಯಕ್ವಾಡ್ ದ್ವಿಶತಕ (220) ಸಿಡಿಸಿ ಮಿಂಚಿದ್ದರು. ಅದರಲ್ಲೂ ಒಂದೇ ಓವರ್​ನಲ್ಲಿ 7 ಸಿಕ್ಸ್ ಬಾರಿಸುವ ಮೂಲಕ ಹೊಸ ವಿಶ್ವ ದಾಖಲೆ ಬರೆದಿದ್ದರು.

1 / 6
ಈ ಭರ್ಜರಿ ಇನಿಂಗ್ಸ್​ ಪರಿಣಾಮ ಮಹಾರಾಷ್ಟ್ರ ತಂಡವು ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 330 ರನ್​ ಕಲೆಹಾಕಿತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಉತ್ತರ ಪ್ರದೇಶ ಪರ ಆರ್ಯನ್ ಜುಯೆಲ್ (159) ಭರ್ಜರಿ ಶತಕ ಸಿಡಿಸಿದ್ದರು. ಇದಾಗ್ಯೂ 58 ರನ್​ಗಳಿಂದ ಸೋಲೋಪ್ಪಿಕೊಂಡಿತು.

2 / 6
ಈ ಅಮೋಘ ಗೆಲುವಿನ ಬಳಿಕ ಮಹಾರಾಷ್ಟ್ರ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಆದರೆ ಅದ್ಭುತ ಇನಿಂಗ್ಸ್​ಗೆ ಲಭಿಸಿದ ಈ ಪ್ರಶಸ್ತಿಯನ್ನು ರುತುರಾಜ್ ಸಹ ಆಟಗಾರನೊಂದಿಗೆ ಹಂಚಿಕೊಳ್ಳುವ ಮೂಲಕ ಎಲ್ಲರ ಹೃದಯ ಗೆದ್ದರು.

3 / 6
ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಸ್ವೀಕರಿಸಿದ ಬಳಿಕ ಅದನ್ನು ತಂಡದ ಯುವ ವೇಗದ ಬೌಲರ್ ರಾಜವರ್ಧನ್ ಹಂಗ್ರೇಕರ್ ಅವರಿಗೆ ಹಸ್ತಾಂತರಿಸಿದರು. ಈ ಪಂದ್ಯದಲ್ಲಿ ರಾಜವರ್ಧನ್ 10 ಓವರ್​ಗಳಲ್ಲಿ 53 ರನ್ ನೀಡಿ 5 ವಿಕೆಟ್ ಕಬಳಿಸಿ ಮಿಂಚಿದ್ದರು. ಹೀಗಾಗಿ ಗೆಲುವಿನ ಶ್ರೇಯಸ್ಸನ್ನು ಹಾಗೂ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ರುತುರಾಜ್ ರಾಜವರ್ಧನ್ ಹಂಗ್ರೇಕರ್​ ಜೊತೆ ಹಂಚಿಕೊಂಡರು.

4 / 6
ಇದೀಗ ವಿಶ್ವ ದಾಖಲೆಯ ಇನಿಂಗ್ಸ್​ಗೆ ಲಭಿಸಿದ ಪ್ರಶಸ್ತಿಯನ್ನು ಸಹ ಆಟಗಾರನೊಂದಿಗೆ ಹಂಚಿಕೊಳ್ಳುವ ಮೂಲಕ ರುತುರಾಜ್ ಗಾಯಕ್ವಾಡ್ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅದರಲ್ಲೂ ನಾಯಕನಾದವನು ಸಹ ಆಟಗಾರನ ಪ್ರದರ್ಶನವನ್ನು ಹೇಗೆ ಪ್ರೋತ್ಸಾಹಿಸಬೇಕೆಂಬುದನ್ನು ರುತುರಾಜ್ ತೋರಿಸಿಕೊಟ್ಟಿದ್ದಾರೆ ಎಂದು ಅಭಿಮಾನಿಗಳು ಬಹುಪರಾಕ್ ಅಂದಿದ್ದಾರೆ.

5 / 6
ರುತುರಾಜ್ ಗಾಯಕ್ವಾಡ್-ರಾಜವರ್ಧನ್ ಹಂಗ್ರೇಕರ್

ರುತುರಾಜ್ ಗಾಯಕ್ವಾಡ್-ರಾಜವರ್ಧನ್ ಹಂಗ್ರೇಕರ್

6 / 6
Follow Us
ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಸಂಪೂರ್ಣ ಸ್ಥಗಿತ, ರೈತರಲ್ಲಿ ಆತಂಕ

‘ಕಣ್ಣಿನಲ್ಲೇ ಕಥೆ ಹೇಳುವ ಕಲಾವಿದ’: ಅನಂತ್ ನಾಗ್ ಬಗ್ಗೆ ಜಯಮಾಲಾ ಮಾತು

ಕಾವ್ಯಾ ಅಂದವ ಹೊಗಳಿ ಅಟ್ಟಕ್ಕೇರಿಸಿದ ತಾಂಡವ್, ಗಗನ್: ವಿಡಿಯೋ

ಗಾಣಗಾಪುರ ದೇವಸ್ಥಾನಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ

ದಸರಾ ಗಜಪಡೆಗೆ ಹಣ್ಣು ತಿನ್ನಿಸಿದ ತ್ರಿಷಿಕಾ, ಆದ್ಯವೀರ್

2028ಕ್ಕೆ ರಾಮನಗರದಿಂದಲೇ ಸ್ಪರ್ಧೆ: ನಿಖಿಲ್​ ಕುಮಾರಸ್ವಾಮಿ

ಎತ್ತಿನಹೊಳೆ ಯೋಜನೆಯ ಕಾಮಗಾರಿ ವೀಕ್ಷಿಸಿದ ಸಚಿವ ಚಲುವರಾಯಸ್ವಾಮಿ

ಪೆಟ್ರೋಲ್ ಬಂಕ್‌ಗಳಲ್ಲಿ ವಂಚನೆ ಆರೋಪದ ಬಗ್ಗೆ ‘ಟಿವಿ9’ ರಿಯಾಲಿಟಿ ಚೆಕ್

ಪ್ರಧಾನಿ ಮೋದಿ ಹುಟ್ಟುಹಬ್ಬದ ಹಿನ್ನೆಲೆ ವಿ. ಸೋಮಣ್ಣ ವಿಶೇಷ ಪೂಜೆ

ಸಿಎಂ ಬರಲಿರುವ ಸ್ಥಳಕ್ಕೆ ನುಗ್ಗಲು ಯತ್ನಿಸಿದ ಎಸ್​ಎಫ್​ಐ ಮುಖಂಡರು ವಶಕ್ಕೆ