Sanju Samson: ಲಂಕಾ ವಿರುದ್ಧದ ಏಕದಿನ ಸರಣಿಯಿಂದ ಹೊರಗಿಟ್ಟ ಬಗ್ಗೆ ಕೊನೆಗೂ ಮೌನ ಮುರಿದ ಸಂಜು ಸ್ಯಾಮ್ಸನ್
Sanju Samson: ಏಕದಿನ ಸರಣಿಯಿಂದ ಹೊರಗಿಟ್ಟ ಬಗ್ಗೆ ಕೊನೆಗೂ ಮೌನ ಮುರಿದಿರುವ ಸಂಜು ಸ್ಯಾಮ್ಸನ್ ತಮ್ಮ ಮುಕ್ತ ಹೇಳಿಕೆಯಿಂದಲೇ ಎಲ್ಲರ ಮೆಚ್ಚುಗೆಗೆ ಪಾತ್ರರರಾಗಿದ್ದಾರೆ. ವಾಸ್ತವವಾಗಿ ಸಂಜು ಸ್ಯಾಮ್ಸನ್ ಇತ್ತೀಚೆಗೆ ಕೆಸಿಎ ಆಯೋಜಿಸಿದ್ದ ಕೇರಳ ಕ್ರಿಕೆಟ್ ಲೀಗ್‌ಗೆ ಚಾಲನೆ ನೀಡುವ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು. ಈ ವೇಳೆ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾಗದಿರುವುದರ ಬಗ್ಗೆ ಪತ್ರಕರ್ತರು ಅವರನ್ನು ಕೇಳಿದರು.
1 / 6
ಟೀಂ ಇಂಡಿಯಾದ ನತದೃಷ್ಟ ಕ್ರಿಕೆಟಿಗರಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಕೂಡ ಒಬ್ಬರು. ಸುಮಾರು ಒಂದು ದಶಕದ ಹಿಂದೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಸ್ಯಾಮ್ಸನ್ ಇದುವರೆಗೆ ಕೇವಲ 30 ಟಿ20 ಮತ್ತು 16 ಏಕದಿನ ಪಂದ್ಯಗಳನ್ನು ಮಾತ್ರ ಆಡಿದ್ದಾರೆ.
2 / 6
ದೇಶಿ ಕ್ರಿಕೆಟ್ ಹಾಗೂ ಐಪಿಎಲ್ನಲ್ಲಿ ಅಮೋಘ ಪ್ರದರ್ಶನ ನೀಡುವ ಮೂಲಕ ಭಾರತ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದರೂ ಅವಕಾಶ ಸಿಕ್ಕಾಗ ಆ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಲು ಸಂಜುಗೆ ಸಾಧ್ಯವಾಗುತ್ತಿಲ್ಲ.
3 / 6
ಇದಕ್ಕೆ ತಾಜಾ ಉದಾಹರಣೆ ಎಂದರೆ ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ತನ್ನ ಮೊದಲ ಅಂತಾರಾಷ್ಟ್ರೀಯ ಶತಕವನ್ನು ಬಾರಿಸಿದರಾದರೂ, ಇದರ ಹೊರತಾಗಿಯೂ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಗೆ ಭಾರತ ಏಕದಿನ ತಂಡದಲ್ಲಿ ಸಂಜುಗೆ ಅವಕಾಶ ಸಿಗಲಿಲ್ಲ.
4 / 6
ಆ ಬಗ್ಗೆ ಕೊನೆಗೂ ಮೌನ ಮುರಿದಿರುವ ಸಂಜು ಸ್ಯಾಮ್ಸನ್ ತಮ್ಮ ಮುಕ್ತ ಹೇಳಿಕೆಯಿಂದಲೇ ಎಲ್ಲರ ಮೆಚ್ಚುಗೆಗೆ ಪಾತ್ರರರಾಗಿದ್ದಾರೆ. ವಾಸ್ತವವಾಗಿ ಸಂಜು ಸ್ಯಾಮ್ಸನ್ ಇತ್ತೀಚೆಗೆ ಕೆಸಿಎ ಆಯೋಜಿಸಿದ್ದ ಕೇರಳ ಕ್ರಿಕೆಟ್ ಲೀಗ್‌ಗೆ ಚಾಲನೆ ನೀಡುವ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು. ಈ ವೇಳೆ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾಗದಿರುವುದರ ಬಗ್ಗೆ ಪತ್ರಕರ್ತರು ಅವರನ್ನು ಕೇಳಿದರು.
5 / 6
ಇದಕ್ಕೆ ಸಂಜು, ಆಯ್ಕೆಯಾಗದಿರುವುದಕ್ಕೆ ದೂರು ನೀಡುವ ಅಥವಾ ಸಿಲ್ಲಿ ಕಾರಣಗಳನ್ನು ನೀಡುವ ಬದಲು, ಆಯ್ಕೆ ಸಮಿತಿಯ ನಿರ್ಧಾರವನ್ನು ಒಪ್ಪಿಕೊಳ್ಳುವ ಬಗ್ಗೆ ಸಂಜು ಸ್ಯಾಮ್ಸನ್ ಮಾತನಾಡಿದರು. ತಂಡದ ಪ್ರದರ್ಶನವು ತನಗೆ ಹೆಚ್ಚು ಮಹತ್ವದ್ದಾಗಿದೆ ಎಂದು ಅವರು ವಿವರಿಸಿದರು ಮತ್ತು ಅವರು ತಮ್ಮ ಜೀವನದಲ್ಲಿ ನಿಯಂತ್ರಿಸಬಹುದಾದ ವಿಷಯಗಳ ಮೇಲೆ ಮಾತ್ರ ಕೇಂದ್ರೀಕರಿಸುತ್ತಾರೆ ಎಂದು ಹೇಳಿದರು.
6 / 6
ಸಂಜು ಸ್ಯಾಮ್ಸನ್, "ಆಯ್ಕೆ ಮಂಡಳಿ ನನ್ನನ್ನು ತಂಡಕ್ಕೆ ಆಯ್ಕೆ ಮಾಡಿದಾಗ, ನಾನು ಆಡಲು ಹೋಗುತ್ತೇನೆ. ಅಷ್ಟೆ! ಎಲ್ಲಾ ನಂತರ, ನಮ್ಮ ತಂಡವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ನಾನು ಉನ್ನತ ಉದ್ದೇಶವನ್ನು ನಂಬುವ ವ್ಯಕ್ತಿ. ನಾನು ನಿಯಂತ್ರಿಸಬಹುದಾದ ಸಂದರ್ಭಗಳಲ್ಲಿ ಆಡಲು ಬಯಸುತ್ತೇನೆ ಮತ್ತು ವಿಷಯಗಳನ್ನು ಪಾಸಿಟಿವ್ ಆಗಿ ತೆಗೆದುಕೊಳ್ಳಲು ಪ್ರಯತ್ನಿಸುತ್ತೇನೆ ಎಂದರು.