Sanju Samson: ಸಂಜು ಸ್ಯಾಮ್ಸನ್ಗೆ ಚಾನ್ಸ್ ಸಿಗಬೇಕು ಅನ್ನೋರಿಗೆ… ಇಲ್ಲಿದೆ ಅಚ್ಚರಿಯ ಅಂಕಿ ಅಂಶಗಳು
Sanju Samson: ಸಂಜು ಸ್ಯಾಮ್ಸನ್ ಟೀಮ್ ಇಂಡಿಯಾ ಪರ 30 ಟಿ20 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 26 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ಅವರು 338 ಎಸೆತಗಳಲ್ಲಿ 444 ರನ್ ಕಲೆಹಾಕಿದ್ದಾರೆ. ಅಂದರೆ ಅವರ ಅವರೇಜ್ ಸ್ಕೋರ್ ಕೇವಲ 19.3 ರನ್ಗಳು ಮಾತ್ರ. ಇನ್ನು ಈ 26 ಇನಿಂಗ್ಸ್ಗಳಲ್ಲಿ ಕೇವಲ 2 ಅರ್ಧಶತಕಗಳನ್ನು ಮಾತ್ರ ಬಾರಿಸಿದ್ದಾರೆ.
1 / 7
ಟೀಮ್ ಇಂಡಿಯಾದ ನತದೃಷ್ಟ ಆಟಗಾರ ಯಾರೆಂದರೆ ಕೇಳಿದರೆ ಥಟ್ಟನೆ ಬರುವ ಉತ್ತರ ಸಂಜು ಸ್ಯಾಮ್ಸನ್ (Sanju Samson). ಏಕೆಂದರೆ 2015 ರಲ್ಲಿ ಟಿ20 ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದ ಸ್ಯಾಮ್ಸನ್ಗೆ ಸಿಕ್ಕಿದ್ದು ವಿರಳ ಅವಕಾಶ. ಆದರೆ ಹೀಗೆ ಸಿಕ್ಕ ಅವಕಾಶದಲ್ಲಿ ಸಾಧಿಸಿದ್ದಾದರೂ ಏನು? ಎಂಬುದನ್ನು ಪ್ರಶ್ನಿಸಿಕೊಳ್ಳಲು ಇದು ಸ್ಯಾಮ್ಸನ್ಗೆ ಸಕಾಲ.
2 / 7
ಏಕೆಂದರೆ ಟಿ20 ವಿಶ್ವಕಪ್ ವೇಳೆ ಬೆಂಚ್ ಕಾದಿದ್ದ ಸಂಜು ಸ್ಯಾಮ್ಸನ್ಗೆ ಶ್ರೀಲಂಕಾ ವಿರುದ್ಧದ 2 ಪಂದ್ಯಗಳಲ್ಲಿ ಅವಕಾಶ ನೀಡಲಾಗಿದೆ. ಈ ಅವಕಾಶದಲ್ಲಿ ಸ್ಯಾಮ್ಸನ್ ಸೊನ್ನೆಯೊಂದಿಗೆ ಹಿಂತಿರುಗಿದ್ದರು. ಲಂಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿಯುವ ಅವಕಾಶ ಪಡೆದ ಸ್ಯಾಮ್ಸನ್ ಮೊದಲ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿದ್ದರು.
3 / 7
ಇನ್ನು ಮೂರನೇ ಟಿ20 ಪಂದ್ಯದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ತಂಡದಲ್ಲಿ ಕಾಣಿಸಿಕೊಂಡ ಸ್ಯಾಮ್ಸನ್ಗೆ 3ನೇ ಓವರ್ ವೇಳೆಗ ಕ್ರೀಸ್ಗೆ ಆಗಮಿಸಿದ್ದರು. ಆದರೆ 4 ಎಸೆತಗಳನ್ನು ಎದುರಿಸಿದ ಅವರು ಕ್ಯಾಚ್ ನೀಡಿ ಶೂನ್ಯದೊಂದಿಗೆ ಹಿಂತಿರುಗಿದ್ದರು. ಇದರೊಂದಿಗೆ ಸಂಜು ಸ್ಯಾಮ್ಸನ್ ಅವರ ಟಿ20 ಕೆರಿಯರ್ನ ಸೊನ್ನೆಗಳ ಸಂಖ್ಯೆ ನಾಲ್ಕಕ್ಕೇರಿದೆ.
4 / 7
ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಎಂದರೆ, ಸಂಜು ಸ್ಯಾಮ್ಸನ್ ಕಳೆದ 26 ಟಿ20 ಇನಿಂಗ್ಸ್ಗಳಿಂದ ಎಷ್ಟು ರನ್ ಕಲೆಹಾಕಿದ್ದಾರೆ ಎಂಬುದು. ಏಕೆಂದರೆ ಟೀಮ್ ಇಂಡಿಯಾ ಪರ 26 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ಸ್ಯಾಮ್ಸನ್ ಇದುವರೆಗೆ ಬಾರಿಸಿದ್ದು ಕೇವಲ 444 ರನ್ಗಳು ಮಾತ್ರ.
5 / 7
ಅಂದರೆ ಅವರ ಪ್ರತಿ ಪಂದ್ಯಗಳ ಸರಾಸರಿ ಸ್ಕೋರ್ ಕೇವಲ 19.3 ರನ್ಗಳು ಮಾತ್ರ. ಇನ್ನು 26 ಇನಿಂಗ್ಸ್ಗಳಲ್ಲಿ ಅವರ ಬ್ಯಾಟ್ನಿಂದ ಮೂಡಿಬಂದಿರುವುದು ಕೇವಲ 2 ಅರ್ಧಶತಕಗಳು ಎಂದರೆ ನಂಬಲೇಬೇಕು. ಅದು ಕೂಡ ಝಿಂಬಾಬ್ವೆ ಮತ್ತು ಐರ್ಲೆಂಡ್ ವಿರುದ್ಧ ಎಂಬುದು ಇಲ್ಲಿ ಉಲ್ಲೇಖಾರ್ಹ.
6 / 7
ಇನ್ನು ಆಸ್ಟ್ರೇಲಿಯಾ ವಿರುದ್ಧ ಆಡಿದ 3 ಇನಿಂಗ್ಸ್ಗಳಲ್ಲಿ ಕಲೆಹಾಕಿದ ಗರಿಷ್ಠ ಸ್ಕೋರ್ ಕೇವಲ 23 ರನ್. ನ್ಯೂಝಿಲೆಂಡ್ ವಿರುದ್ಧದ 2 ಪಂದ್ಯಗಳಲ್ಲಿ ಬಾರಿಸಿದ್ದು 8 ರನ್ ಮಾತ್ರ. ಶ್ರೀಲಂಕಾ ವಿರುದ್ಧ 6 ಇನಿಂಗ್ಸ್ಗಳಲ್ಲಿ ಬಾರಿಸಿದ ಗರಿಷ್ಠ ಸ್ಕೋರ್ 27 ರನ್. ವೆಸ್ಟ್ ಇಂಡೀಸ್ ವಿರುದ್ಧ ಕೂಡ 2 ಪಂದ್ಯಗಳನ್ನಾಡಿದ್ದು, ಈ ವೇಳೆ ಬಾರಿಸಿದ ಗರಿಷ್ಠ ಸ್ಕೋರ್ 12 ರನ್. ಅಂದರೆ ಬಲಿಷ್ಠ ತಂಡಗಳ ವಿರುದ್ಧ ಸ್ಯಾಮ್ಸನ್ ಅವರ ಸರಾಸರಿ 15 ಕ್ಕಿಂತ ಕಡಿಮೆ ಇರುವುದು ಸ್ಪಷ್ಟ.
7 / 7
ಇನ್ನು ಕೊನೆಯ 6 ಇನಿಂಗ್ಸ್ಗಳಲ್ಲಿ ಮೂರು ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಇನ್ನೆರಡು ಪಂದ್ಯಗಳಲ್ಲಿ ಕ್ರಮವಾಗಿ 1 ಮತ್ತು 12 ರನ್ಗಳಿಸಿ ವಿಕೆಟ್ ಒಪ್ಪಿಸಿದ್ದರು. ಅಂದರೆ 2024 ರಲ್ಲಿ ಸಿಕ್ಕ 6 ಅವಕಾಶಗಳಲ್ಲಿ ಸ್ಯಾಮ್ಸನ್ ಕಲೆಹಾಕಿರುವುದು ಕೇವಲ 71 ರನ್ಗಳು ಮಾತ್ರ. ಅಂದರೆ ಸಿಕ್ಕ ಅವಕಾಶ ಬಳಸಿಕೊಳ್ಳಲಾಗದಿರುವ ಸಂಜು ಸ್ಯಾಮ್ಸನ್ಗೆ ಇನ್ನೆಷ್ಟು ಚಾನ್ಸ್ ಸಿಗಬೇಕು? ಎಂಬುದೇ ಪ್ರಶ್ನೆ.
Published On - 10:23 am, Thu, 1 August 24