Sanju Samson: ಸಂಜು ಸ್ಯಾಮ್ಸನ್ ಕಮ್​ಬ್ಯಾಕ್​ಗೆ ವೇದಿಕೆ ಸಜ್ಜು: ಟಿ20ಗೆ ಮಾತ್ರವಲ್ಲ ಏಕದಿನಕ್ಕೂ ಆಯ್ಕೆ?

India vs West Indies: ಸ್ಯಾಮ್ಸನ್ ಅವರು ಕೇವಲ ಟಿ20 ಮಾತ್ರವಲ್ಲದೆ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೂ ಆಯ್ಕೆ ಆಗಲಿದ್ದಾರೆ ಎನ್ನಲಾಗಿದೆ. ಕೆಎಲ್ ರಾಹುಲ್ ಅಲಭ್ಯತೆಯಲ್ಲಿ ಇವರು ಸ್ಥಾನ ಪಡೆದುಕೊಳ್ಳುವ ಸಾಧ್ಯತೆ ಇದೆ.

Vinay Bhat
|

Updated on: Jun 23, 2023 | 9:22 AM

ಭಾರತ ಕ್ರಿಕೆಟ್ ತಂಡದ ಪ್ರತಿಭಾನ್ವಿತ ವಿಕೆಟ್ ಕೀಪರ್, ಬ್ಯಾಟರ್ ಸಂಜು ಸ್ಯಾಮ್ಸನ್ ಕಮ್​ಬ್ಯಾಕ್​ಗೆ ವೇದಿಕೆ ಸಜ್ಜಾಗಿದೆ. ವೆಸ್ಟ್ ಇಂಡೀಸ್ ವಿರುದ್ಧದ ಪ್ರವಾಸಕ್ಕೆ ಸ್ಯಾಮ್ಸನ್ ತಂಡ ಸೇರಿಕೊಳ್ಳಲಿದ್ದಾರೆ. ಈ ಹಿಂದೆ ಶ್ರೀಲಂಕಾ ಹಾಗೂ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಿಂದ ಇವರನ್ನು ಕೈಬಿಡಲಾಗಿತ್ತು.

1 / 7
ಕೆರಿಬಿಯನ್ ಪ್ರವಾಸದಿಂದ ಕೆಲ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಹೀಗಾಗಿ ಸ್ಯಾಮ್ಸನ್ ಆಯ್ಕೆದಾರರ ಲಿಸ್ಟ್​ನಲ್ಲಿ ಇದ್ದಾರೆ. ರಿಷಭ್ ಪಂತ್ ಅವರು ಏಕದಿನ ವಿಶ್ವಕಪ್ ವರೆಗೆ ತಂಡದಲ್ಲಿ ಇರುವುದಿಲ್ಲ. ಹೀಗಾಗಿ ಇಶಾನ್ ಕಿಶನ್ ಜೊತೆ ಸ್ಯಾಮ್ಸನ್ ಕೂಡ ತಂಡದಲ್ಲಿ ಇರಲಿದ್ದಾರೆ.

2 / 7
ಸ್ಯಾಮ್ಸನ್ ಅವರು ಕೇವಲ ಟಿ20 ಮಾತ್ರವಲ್ಲದೆ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೂ ಆಯ್ಕೆ ಆಗಲಿದ್ದಾರೆ ಎನ್ನಲಾಗಿದೆ. ಕೆಎಲ್ ರಾಹುಲ್ ಅಲಭ್ಯತೆಯಲ್ಲಿ ಇವರು ಸ್ಥಾನ ಪಡೆದುಕೊಳ್ಳುವ ಸಾಧ್ಯತೆ ಇದೆ.

3 / 7
ಸ್ಯಾಮ್ಸನ್ ಜೊತೆಗೆ ಯಶಸ್ವಿ ಜೈಸ್ವಾಲ್, ಉಮ್ರಾನ್ ಮಲಿಕ್, ರಿಂಕು ಸಿಂಗ್‌, ಸಾಯಿ ಸುದ​ರ್ಶನ್‌, ತಿಲಕ್‌ ವರ್ಮಾ, ಅರ್ಶ್​ದೀಪ್ ಸಿಂಗ್ ಸೇರಿದಂತೆ ಕೆಲ ಆಟಗಾರರು ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಆಯ್ಕೆ ಆಗಲಿದ್ದಾರಂತೆ. ಇದರಲ್ಲಿ ಜೈಸ್ವಾಲ್ ಹಾಗೂ ಅರ್ಶ್​ದೀಪ್ ಟೆಸ್ಟ್ ತಂಡಕ್ಕೆ ಸೇರ್ಪಡೆ ಆಗಲಿದ್ದಾರೆ ಎಂಬ ಮಾತಿದೆ.

4 / 7
ಟೀಮ್​ ಇಂಡಿಯಾದ ವೆಸ್ಟ್ ಇಂಡೀಸ್‌ ಪ್ರವಾಸ ಜುಲೈ 12 ರಿಂದ 16 ರವರೆಗೆ ನಡೆಯಲಿರುವ ಮೊದಲ ಟೆಸ್ಟ್ ಮೂಲಕ ಶುರುವಾಗಲಿದೆ. ಬಳಿಕ ಜುಲೈ 20 ರಿಂದ 24 ರವರೆಗೆ ಟ್ರಿನಿಡಾಡ್‌ನ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ದ್ವಿತೀಯ ಟೆಸ್ಟ್ ನಡೆಯಲಿದೆ.

5 / 7
ಟೆಸ್ಟ್ ಸರಣಿ ನಂತರ ಮೂರು ಏಕದಿನ ಪಂದ್ಯಗಳ ಸರಣಿಯು ನಡೆಯಲಿದೆ. ಜುಲೈ 27, 29 ಹಾಗೂ ಆಗಸ್ಟ್ 1 ರಂದು ಈ ಪಂದ್ಯವನ್ನು ಆಯೋಜಿಸಲಾಗಿದೆ.

6 / 7
ಕೊನೆಯದಾಗಿ ಟಿ20 ಸರಣಿ ಆಯೋಜಿಸಲಾಗಿದ್ದು, ಆಗಸ್ಟ್ 3, ಆಗಸ್ಟ್ 6, 8, 12 ಹಾಗೂ ಆ. 13 ರಂದು ನಡೆಯಲಿದೆ. ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಭಾರತ ತಂಡ ಜೂನ್ 27 ರಂದು ಪ್ರಕಟ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

7 / 7
Follow us