Sarfaraz Ahmed: ಪಾಕಿಸ್ತಾನಕ್ಕೆ ಯುಎಇನಲ್ಲಿ ಆಡಿದ ಅನುಭವವಿದೆ, ಭಾರತಕ್ಕೆ ಇಲ್ಲ ಎಂದ ಸರ್ಫರಾಜ್ ಅಹ್ಮದ್

| Updated By: Vinay Bhat

Updated on: Aug 19, 2022 | 11:46 AM

India vs Pakistan, Asia Cup 2022: ಯುಎಇನಲ್ಲಿ ನಡೆಯಲಿರುವ ಏಷ್ಯಾಕಪ್ ನಲ್ಲಿ ಇಂಡೋ-ಪಾಕ್ ಕದನ ಹತ್ತಿರವಾಗುತ್ತಿದ್ದಂತೆ ಮಾಜಿ ಆಟಗಾರರು ಒಬ್ಬೊಬ್ಬರಾಗಿ ಒಂದೊಂದು ಹೇಳಿಕೆ ನೀಡುತ್ತಿದ್ದಾರೆ. ಇದೀಗ ಪಾಕ್ ಕ್ರಿಕೆಟ್ ತಂಡದ ಮಾಜಿ ನಾಯಕ ಸರ್ಫರಾಜ್ ಅಹ್ಮದ್, ಭಾರತಕ್ಕಿಂತ ಪಾಕಿಸ್ತಾನ ಯುಎಇ ವಾತಾವರಣವನ್ನು ಚೆನ್ನಾಗಿ ಅರಿತುಕೊಂಡಿದೆ ಎಂದು ಹೇಳಿದ್ದಾರೆ.

1 / 8
ಬಹುನಿರೀಕ್ಷಿತ ಏಷ್ಯಾಕಪ್ ಟೂರ್ನಿ 2022ಕ್ಕೆ ದಿನಗಣನೆ ಶುರುವಾಗಿದೆ. ಈ ಬಾರಿ ಏಷ್ಯಾಕಪ್ ಟೂರ್ನಿಗಿಂತ ಹೆಚ್ಚು ಕ್ರೇಜ್ ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯಕ್ಕಿದೆ. ಆಗಸ್ಟ್‌ 28ರಂದು ನಡೆಯಲಿರುವ ಸಾಂಪ್ರದಾಯಿಕ ಎದುರಾಳಿಗಳ ನಡುವಣ ಕದನ ವೀಕ್ಷಿಸಲು ಕ್ರಿಕೆಟ್‌ ಅಭಿಮಾನಿಗಳಂತು ಬಹಳ ಕಾತುರದಿಂದ ಎದುರು ನೋಡುತ್ತಿದ್ದಾರೆ.

2 / 8
ಯುಎಇನಲ್ಲಿ ನಡೆಯಲಿರುವ ಏಷ್ಯಾಕಪ್ ನಲ್ಲಿ ಇಂಡೋ-ಪಾಕ್ ಕದನ ಹತ್ತಿರವಾಗುತ್ತಿದ್ದಂತೆ ಮಾಜಿ ಆಟಗಾರರು ಒಬ್ಬೊಬ್ಬರಾಗಿ ಒಂದೊಂದು ಹೇಳಿಕೆ ನೀಡುತ್ತಿದ್ದಾರೆ. ಇದೀಗ ಪಾಕ್ ಕ್ರಿಕೆಟ್ ತಂಡದ ಮಾಜಿ ನಾಯಕ ಸರ್ಫರಾಜ್ ಅಹ್ಮದ್, ಭಾರತಕ್ಕಿಂತ ಪಾಕಿಸ್ತಾನ ಯುಎಇ ವಾತಾವರಣವನ್ನು ಚೆನ್ನಾಗಿ ಅರಿತುಕೊಂಡಿದೆ ಎಂದು ಹೇಳಿದ್ದಾರೆ.

3 / 8
ನಮ್ಮ ಮೊದಲ ಪಂದ್ಯ ಭಾರತ ವಿರುದ್ಧವೇ ಇದೆ. ಕೊನೆಯ ಬಾರಿ ಟೀಮ್ ಇಂಡಿಯಾ ವಿರುದ್ಧ ಇದೇ ಜಾಗದಲ್ಲಿ ನಾವು ಗೆಲುವು ಕಂಡಿದ್ದೇವು. ಅದು ಈ ಬಾರಿ ಕೂಡ ಮುಂದುವರೆಯುತ್ತದೆ. ಯಾಕೆಂದರೆ ಇಲ್ಲಿನ ಕಂಡೀಷನ್ ಬಗ್ಗೆ ಪಾಕಿಸ್ತಾನ ಆಟಗಾರರಿಗೆ ಚೆನ್ನಾಗಿ ಅರಿವಿದೆ ಎಂದು ಹೇಳಿದ್ದಾರೆ.

4 / 8
ನಾವು ಇಲ್ಲಿ ಪಾಕಿಸ್ತಾನ ಸೂಪರ್ ಲೀಗ್ ಆಡಿದ್ದೇವೆ. ಅಲ್ಲದೆ ಕಳೆದ ಕೆಲ ಸಮಯದಿಂದ ಅನೇಕ ಏಕದಿನ, ಟಿ20 ಪಂದ್ಯಗಳನ್ನು ಆಡಿದ್ದೇವೆ. ಭಾರತ ಐಪಿಎಲ್ ಅನ್ನು ಇಲ್ಲಿ ಆಡಿರಬಹುದು. ಆದರೆ, ಅವರಿಗೆ ಅಷ್ಟೊಂದು ಅನುಭವವಿಲ್ಲ- ಸರ್ಫರಾಜ್ ಅಹ್ಮದ್.

5 / 8
ಇತ್ತೀಚೆಗಷ್ಟೆ ಪಾಕಿಸ್ತಾನ ತಂಡದ ಮಾಜಿ ವೇಗಿ ಅಖಿಬ್ ಜಾವೆದ್ ಕೂಡ ಏಷ್ಯಾಕಪ್ ನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯದ ಬಗ್ಗೆ ಮಾತನಾಡಿದ್ದರು.

6 / 8
ಎರಡೂ ತಂಡಗಳ ಬ್ಯಾಟಿಂಗ್ ವಿಭಾಗದಲ್ಲಿ ಸಾಕಷ್ಟು ಬದಲಾವಣೆಗಳಿವೆ. ಭಾರತ ಪರ ರೋಹಿತ್ ಶರ್ಮಾ ಸೆಟ್ ಆಗಿ ಆಡಿದರು ಎಂದಾದರೆ ಏಕಾಂಗಿಯಾಗಿ ನಿಂತು ಪಂದ್ಯವನ್ನು ಗೆಲ್ಲಿಸಿಕೊಡುತ್ತಾರೆ. ಇತ್ತ ಪಾಕ್ ತಂಡದಲ್ಲಿ ಫಖರ್ ಜಮಾಮ್ ಕೂಡ ಹೀಗೆ. ಫಖರ್ ಕಂಟ್ರೊಲ್ ಪಡೆದುಕೊಂಡು ಆಡಿದರೆ ಪಾಕಿಸ್ತಾನಕ್ಕೆ ಗೆಲುವು ಖಚಿತ ಎಂದು ಹೇಳಿದ್ದರು.

7 / 8
ಪಾಕಿಸ್ತಾನದ ಮಧ್ಯಮ ಕ್ರಮಾಂಕ ಭಾರತದಷ್ಟು ಬಲಿಷ್ಠವಾಗಿಲ್ಲ. ಯಾಕೆಂದರೆ ಟೀಮ್ ಇಂಡಿಯಾದಲ್ಲಿ ಆಲ್ರೌಂಡರ್ ಗಳಿದ್ದಾರೆ. ಮುಖ್ಯವಾಗಿ ಹಾರ್ದಿಕ್ ಪಾಂಡ್ಯ ರೀತಿಯ ಆಟಗಾರ ನಮ್ಮ ತಂಡದಲ್ಲಿ ಇಲ್ಲ ಎಂದು ಅಖಿಬ್ ಜಾವೆದ್ ಹೇಳಿದ್ದರು.

8 / 8
ಏಷ್ಯಾಕಪ್‌ ಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್.