ಭಾರತದ ಸ್ಟಾರ್ ಕ್ರಿಕೆಟಿಗ, ಮಾಜಿ ನಾಯಕ ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ಇಂದಿಗೆ 14 ವರ್ಷಗಳನ್ನು ಪೂರೈಸಿದ್ದಾರೆ. ಆಗಸ್ಟ್ 18 ರಂದು, ಇದೇ ದಿನ ವಿರಾಟ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟಿದ್ದರು.
1 / 10
ವಿರಾಟ್ ತಮ್ಮ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು ಶ್ರೀಲಂಕಾ ವಿರುದ್ಧ ಡಂಬುಲ್ಲಾ ಮೈದಾನದಲ್ಲಿ ಆಡಿದ್ದರು. ಆಗ ಈ ಹುಡುಗ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದೊಡ್ಡ ಸ್ಟಾರ್ ಆಗುತ್ತಾನೆ ಎಂದು ಯಾರೂ ಭಾವಿಸಿರಲಿಲ್ಲ.
2 / 10
ಚೊಚ್ಚಲ ಏಕದಿನ ಪಂದ್ಯದಲ್ಲಿ ವಿರಾಟ್ ಅಂತಹ ವಿಶೇಷ ಪ್ರದರ್ಶನ ತೋರದ ಕಾರಣ ಕ್ರಿಕೆಟ್ ಅಭಿಮಾನಿಗಳಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು.
3 / 10
ಆದರೆ ಹಂತಹಂತವಾಗಿ ಫಾರ್ಮ್ ಕಂಡುಕೊಂಡ ಕೊಹ್ಲಿ ಕೇವಲ ಭಾರತ ಮಾತ್ರವಲ್ಲ, ವಿಶ್ವದ ಕ್ರಿಕೆಟ್ ಪ್ರೇಮಿಗಳ ಹೃದಯ ಗೆಲ್ಲುವಲ್ಲಿ ಯಶಸ್ವಿಯಾದರು. ಕ್ರಿಕೆಟ್ ಲೋಕವನ್ನು ಅಕ್ಷರಶಃ ಆಳುತ್ತಿದ್ದ ಕೊಹ್ಲಿ ಇಂದು ಫಾರ್ಮ್‌ನಿಂದ ಹೊರಗುಳಿದಿದ್ದಾರೆ. ಆದರೆ ವಿರಾಟ್ ಈಗಲೂ ಕೂಡ ಅಗ್ರ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ.
4 / 10
ಮೊದಲ ಪಂದ್ಯದಲ್ಲಿ ಗೌತಮ್ ಗಂಭೀರ್ ಜೊತೆ ಓಪನಿಂಗ್ ಮಾಡಿದ್ದ ಕೊಹ್ಲಿ, ಆಗ ಕೇವಲ 12 ರನ್ ಗಳಿಸಿ ಔಟಾದರು. ಆ ಪಂದ್ಯದಲ್ಲಿ ಭಾರತ 8 ವಿಕೆಟ್‌ಗಳಿಂದ ಸೋತಿತ್ತು.
5 / 10
ಅಂದು ಏಕದಿನ ಕ್ರಿಕೆಟ್‌ನಲ್ಲಿ 12 ರನ್ಗಳಿಂದ ಆರಂಭವಾದ ವಿರಾಟ್ ಕೊಹ್ಲಿ ಪಯಣ ಇಂದು 12,000 ರನ್ ಗಡಿ ದಾಟಿದೆ.
6 / 10
ವಿರಾಟ್ ಕೊಹ್ಲಿ 2008 ರಿಂದ ಒಟ್ಟು 262 ODI ಪಂದ್ಯಗಳನ್ನು ಆಡಿದ್ದಾರೆ. 57.68 ರ ಸರಾಸರಿಯಲ್ಲಿ 12344 ರನ್ ಗಳಿಸಿದ್ದಾರೆ. ಇದು 43 ಶತಕಗಳನ್ನು ಒಳಗೊಂಡಿದೆ. ಬೌಲಿಂಗ್ನಲ್ಲೂ ವಿರಾಟ್ 4 ವಿಕೆಟ್ ಪಡೆದಿದ್ದಾರೆ.
7 / 10
ವಿರಾಟ್ ಟೀಂ ಇಂಡಿಯಾದಲ್ಲಿ ಆರಂಭಿಕರಾಗಿ ವೃತ್ತಿ ಜೀವನ ಆರಂಭಿಸಿದರು. ಆದರೆ ಈಗ 3ನೇ ಸ್ಥಾನದಲ್ಲಿ ಆಡುತ್ತಿದ್ದಾರೆ. ಅದು ತಂಡದಲ್ಲಿ ಅವರ ಸೆಟ್ ಸ್ಥಾನ.
8 / 10
ವಿರಾಟ್ ಕೊಹ್ಲಿ
9 / 10
ವಿರಾಟ್ ಇದುವರೆಗೆ 70 ಅಂತಾರಾಷ್ಟ್ರೀಯ ಶತಕಗಳನ್ನು ಗಳಿಸಿದ್ದಾರೆ. ಕಳೆದ 14 ವರ್ಷಗಳಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಯೂ ಕೊಹ್ಲಿಯದ್ದು. ಕೊಹ್ಲಿ ನಂತರ ಹಮೀಶ್ ಆಮ್ಲಾ ಎರಡನೇ ಸ್ಥಾನದಲ್ಲಿದ್ದಾರೆ (50).