ಬೋಲ್ಯಾಂಡ್​ ಎಸೆತಕ್ಕೆ 110 ವರ್ಷಗಳ ಹಳೆಯ ವಿಶ್ವ ದಾಖಲೆ ಬೌಲ್ಡ್

Updated on: Jul 14, 2025 | 2:02 PM

West Indies vs Australia, 3rd Test: ವೆಸ್ಟ್ ಇಂಡೀಸ್ ವಿರುದ್ಧ ಮೂರನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು ಪ್ರಥಮ ಇನಿಂಗ್ಸ್​ನಲ್ಲಿ 225 ರನ್​ಗಳಿಸಿ ಆಲೌಟ್ ಆಗಿತ್ತು, ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ವೆಸ್ಟ್ ಇಂಡೀಸ್ ಕೇವಲ 143 ರನ್​ಗಳಿಗೆ ಸರ್ವಪತನ ಕಂಡಿದೆ. ಇದೀಗ ಆಸ್ಟ್ರೇಲಿಯಾ ತಂಡವು ದ್ವಿತೀಯ ಇನಿಂಗ್ಸ್ ಆರಂಭಿಸಿದ್ದು 2ನೇ ದಿನದಾಟದ ಮುಕ್ತಾಯದ ವೇಳೆಗೆ 6 ವಿಕೆಟ್ ಕಳೆದುಕೊಂಡು 99 ರನ್​ಗಳಿಸಿದೆ.

1 / 5
ಟೆಸ್ಟ್ ಕ್ರಿಕೆಟ್​ನಲ್ಲಿ ಆಸ್ಟ್ರೇಲಿಯಾ ವೇಗಿ ಸ್ಕಾಟ್ ಬೋಲ್ಯಾಂಡ್ (Scott Boland) ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ 2000 ಎಸೆತಗಳಲ್ಲಿ ಅತೀ ಕಡಿಮೆ ರನ್ ನೀಡಿ ವಿಕೆಟ್ ಕಬಳಿಸುವ ಮೂಲಕ ಎಂಬುದು ವಿಶೇಷ. ಅಂದರೆ ಟೆಸ್ಟ್ ಕ್ರಿಕೆಟ್​ ಇತಿಹಾಸದಲ್ಲೇ 2000 ಎಸೆತಗಳನ್ನು ಎಸೆದು ಅತೀ ಕಡಿಮೆ ರನ್​ಗಳ ಒಳಗೆ ವಿಕೆಟ್ ಕಬಳಿಸಿದ ವಿಶ್ವ ದಾಖಲೆ ಸ್ಕಾಟ್ ಬೋಲ್ಯಾಂಡ್ ಪಾಲಾಗಿದೆ.

2 / 5
ವೆಸ್ಟ್ ಇಂಡೀಸ್​ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ 13.1 ಓವರ್​ಗಳನ್ನು ಎಸೆದಿರುವ ಸ್ಕಾಟ್ ಬೋಲ್ಯಾಂಡ್ ಕೇವಲ 34 ರನ್ ನೀಡಿ 3 ವಿಕೆಟ್ ಕಬಳಿಸಿದರು. ಈ 13.1 ಓವರ್​ಗಳೊಂದಿಗೆ ಬೋಲ್ಯಾಂಡ್​ ಟೆಸ್ಟ್ ಕ್ರಿಕೆಟ್​ನಲ್ಲಿ 2000 ಎಸೆತಗಳನ್ನು ಪೂರೈಸಿದ್ದಾರೆ. ಇದೇ ವೇಳೆ ಅವರು 17.33 ಸರಾಸರಿಯಲ್ಲಿ ವಿಕೆಟ್ ಕಬಳಿಸಿದ್ದಾರೆ.

3 / 5
ಅಂದರೆ 2000 ಎಸೆತಗಳಲ್ಲಿ ಸ್ಕಾಟ್​ ಬೋಲ್ಯಾಂಡ್ 17.33 ರ ರನ್ ಸರಾಸರಿಯಲ್ಲಿ ಒಟ್ಟು 59 ವಿಕೆಟ್​ಗಳನ್ನು ಕಬಳಿಸಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ (1915 ರಿಂದ) ಕನಿಷ್ಠ 2000 ಎಸೆತಗಳನ್ನು ಎಸೆದು ಅತ್ಯುತ್ತಮ ಬೌಲಿಂಗ್ ಸರಾಸರಿ ಹೊಂದಿರುವ ಬೌಲರ್ ಎಂಬ ಹೆಗ್ಗಳಿಕೆಯನ್ನು ಸ್ಕಾಟ್ ಬೋಲ್ಯಾಂಡ್ ತಮ್ಮದಾಗಿಸಿಕೊಂಡರು.

4 / 5
ಇದಕ್ಕೂ ಮುನ್ನ ಈ ವಿಶ್ವ ದಾಖಲೆ ಆಸ್ಟ್ರೇಲಿಯಾದ ಬರ್ಟ್ ಐರನ್‌ಮಾಂಗರ್ ಹೆಸರಿನಲ್ಲಿತ್ತು. 1928 ರಿಂದ 1933 ರವರೆಗೆ ಟೆಸ್ಟ್ ಕ್ರಿಕೆಟ್​ನಲ್ಲಿ 2000 ಎಸೆತಗಳನ್ನು ಎಸೆದಿದ್ದ ಐರನ್​ಮಾಂಗರ್ 17.97 ಸರಾಸರಿಯಲ್ಲಿ 71 ವಿಕೆಟ್ ಕಬಳಿಸಿರುವುದು ಈವರೆಗಿನ ವಿಶ್ವ ದಾಖಲೆಯಾಗಿತ್ತು. ಇದೀಗ ಈ ದಾಖಲೆಯನ್ನು ಮುರಿಯುವಲ್ಲಿ ಸ್ಕಾಟ್ ಬೋಲ್ಯಾಂಡ್ ಯಶಸ್ವಿಯಾಗಿದ್ದಾರೆ.

5 / 5
ಟೆಸ್ಟ್ ಕ್ರಿಕೆಟ್​ನಲ್ಲಿ ಈವರೆಗೆ 14 ಪಂದ್ಯಗಳನ್ನಾಡಿರುವ ಸ್ಕಾಟ್ ಬೋಲ್ಯಾಂಡ್ 26 ಇನಿಂಗ್ಸ್​ಗಳಲ್ಲಿ ಬೌಲಿಂಗ್ ಮಾಡಿದ್ದಾರೆ. ಈ ವೇಳೆ 2220 ಎಸೆತಗಳನ್ನು ಎಸೆದಿರುವ ಅವರು 1023 ರನ್ ನೀಡಿ ಒಟ್ಟು 59 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಕನಿಷ್ಠ 2 ಸಾವಿರ ಎಸೆತಗಳನ್ನು ಎಸೆದು ಅತೀ ಕಡಿಮೆ ಸರಾಸರಿಯಲ್ಲಿ (17.33) ವಿಕೆಟ್ ಕಬಳಿಸಿದ ಬೌಲರ್ ಎಂಬ ವಿಶ್ವ ದಾಖಲೆಯನ್ನು ಸ್ಕಾಟ್ ಬೋಲ್ಯಾಂಡ್ ತಮ್ಮದಾಗಿಸಿಕೊಂಡಿದ್ದಾರೆ.

Published On - 1:59 pm, Mon, 14 July 25