ಶಫಾಲಿ ಆರ್ಭಟಕ್ಕೆ 3 ವಿಶ್ವ ದಾಖಲೆಗಳು ಉಡೀಸ್..!

Updated on: Sep 06, 2026 | 8:23 AM

ಭಾರತ ಮಹಿಳಾ ತಂಡದ ಸ್ಫೋಟಕ ಬ್ಯಾಟರ್ ಶಫಾಲಿ ವರ್ಮಾ ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಕೇವಲ ಒಂದೇ ಇನ್ನಿಂಗ್ಸ್ ಮೂಲಕ ಮೂರು ಭರ್ಜರಿ ವಿಶ್ವ ದಾಖಲೆಗಳನ್ನು ಬರೆದಿದ್ದಾರೆ. ಈ ದಾಖಲೆಗಳೊಂದಿಗೆ ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಶಫಾಲಿ ವರ್ಮಾ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಟೀಮ್ ಇಂಡಿಯಾ ಆಟಗಾರ್ತಿ ಬರೆದ ದಾಖಲೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

1 / 5
ಟೀಮ್ ಇಂಡಿಯಾದ  ಸ್ಪೋಟಕ ಆರಂಭಿಕ ಆಟಗಾರ್ತಿ ಶಾಫಾಲಿ ವರ್ಮಾ ಹೊಸ ವಿಶ್ವ ದಾಖಲೆಗಳನ್ನು ಬರೆದಿದ್ದಾರೆ. ದುಬೈನಲ್ಲಿ ನಡೆದ ಪಾಕಿಸ್ತಾನ್ ವಿರುದ್ಧದ ಏಷ್ಯಾಕಪ್​ ಪಂದ್ಯದಲ್ಲಿ ಶಾಫಾಲಿ ಕಲೆಹಾಕಿದ್ದು ಕೇವಲ 12 ರನ್​ಗಳು. ಈ ಹನ್ನೆರಡು ರನ್​ಗಳೊಂದಿಗೆ 3 ಭರ್ಜರಿ ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. (PC: Getty Images)

ಟೀಮ್ ಇಂಡಿಯಾದ  ಸ್ಪೋಟಕ ಆರಂಭಿಕ ಆಟಗಾರ್ತಿ ಶಾಫಾಲಿ ವರ್ಮಾ ಹೊಸ ವಿಶ್ವ ದಾಖಲೆಗಳನ್ನು ಬರೆದಿದ್ದಾರೆ. ದುಬೈನಲ್ಲಿ ನಡೆದ ಪಾಕಿಸ್ತಾನ್ ವಿರುದ್ಧದ ಏಷ್ಯಾಕಪ್​ ಪಂದ್ಯದಲ್ಲಿ ಶಾಫಾಲಿ ಕಲೆಹಾಕಿದ್ದು ಕೇವಲ 12 ರನ್​ಗಳು. ಈ ಹನ್ನೆರಡು ರನ್​ಗಳೊಂದಿಗೆ 3 ಭರ್ಜರಿ ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. (PC: Getty Images)

2 / 5

ದುಬೈ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಭಾರತದ ಪರ ಇನಿಂಗ್ಸ್ ಆರಂಭಿಸಿದ ಶಫಾಲಿ, ತಾನೆದುರಿಸಿದ ಮೊದಲ ಎಸೆತದಲ್ಲೇ ಭರ್ಜರಿ ಸಿಕ್ಸರ್ ಸಿಡಿಸಿದ್ದರು. ಈ ಸಿಕ್ಸರ್​​ನೊಂದಿಗೆ ಮಹಿಳಾ ಟಿ20 ಕ್ರಿಕೆಟ್ ಇತಿಹಾಸದಲ್ಲೇ 2 ಬಾರಿ ಇನಿಂಗ್ಸ್​ನ ಮೊದಲ ಎಸೆತದಲ್ಲಿ ಸಿಕ್ಸ್ ಬಾರಿಸಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ. (PC: Getty Images)

3 / 5

ಇದಕ್ಕೂ ಮುನ್ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಪಾಕಿಸ್ತಾನ್ ವಿರುದ್ಧದ ಟಿ20 ವಿಶ್ವಕಪ್​ ಪಂದ್ಯದ ಮೊದಲ ಎಸೆತದಲ್ಲೇ ಶಫಾಲಿ ವರ್ಮಾ ಸಿಕ್ಸರ್ ಸಿಡಿಸಿದ್ದರು. ಇದೀಗ ಮತ್ತೊಮ್ಮೆ ಸಾದಿಯಾ ಇಕ್ಬಾಲ್ ಅವರನ್ನೇ ಗುರಿಯಾಗಿಸಿ ಸಿಕ್ಸರ್ ಚಚ್ಚಿದ್ದಾರೆ. ಈ ಮೂಲಕ ವುಮೆನ್ಸ್ ಟಿ20 ಕ್ರಿಕೆಟ್​ನಲ್ಲಿ ಇನಿಂಗ್ಸ್​ನ ಮೊದಲ ಎಸೆತದಲ್ಲಿ 2 ಬಾರಿ ಸಿಕ್ಸರ್ ಬಾರಿಸಿದ ಏಕೈಕ ಆಟಗಾರ್ತಿ ಎಂಬ ವಿಶ್ವ ದಾಖಲೆ ನಿರ್ಮಿಸಿದ್ದಾರೆ. (PC: Getty Images)

4 / 5

ಇನ್ನು ಈ ಪಂದ್ಯದಲ್ಲಿ ಕಲೆಹಾಕಿದ 12 ರನ್​ಗಳೊಂದಿಗೆ ಶಫಾಲಿ ವರ್ಮಾ ಅಂತಾರಾಷ್ಟ್ರೀಯ ಮಹಿಳಾ ಟಿ20 ಕ್ರಿಕೆಟ್‌ನಲ್ಲಿ 3000 ರನ್​ ಪೂರೈಸಿದ್ದಾರೆ. ಈ ಮೂಲಕ ಅತಿ ಕಡಿಮೆ ಎಸೆತಗಳಲ್ಲಿ 3 ಸಾವಿರ ರನ್​ ಕಲೆಹಾಕಿದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಶಫಾಲಿ ವರ್ಮಾ ಕೇವಲ 2,182 ಎಸೆತಗಳಲ್ಲಿ ಈ ಮೈಲಿಗಲ್ಲು ತಲುಪುವ ಮೂಲಕ ಆಸ್ಟ್ರೇಲಿಯಾದ ಮಾಜಿ ನಾಯಕಿ ಅಲಿಸ್ಸಾ ಹೀಲಿ (2,321 ಎಸೆತಗಳು) ಅವರ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. (PC: Getty Images)

5 / 5

ಹಾಗೆಯೇ ಅತಿ ಕಿರಿಯ ವಯಸ್ಸಿನಲ್ಲಿ 3,000 ರನ್ ಕಲೆಹಾಕಿದ ಹೆಗ್ಗಳಿಕೆಯನ್ನೂ ಕೂಡ ತಮ್ಮದಾಗಿಸಿಕೊಂಡಿದ್ದಾರೆ. ಕೇವಲ 22 ವರ್ಷ 220 ದಿನಗಳ ಪ್ರಾಯದಲ್ಲಿ ಶಾಫಾಲಿ ಈ ಸಾಧನೆ ಮಾಡುವ ಮೂಲಕ ಐರ್ಲೆಂಡ್‌ನ ಗ್ಯಾಬಿ ಲೂಯಿಸ್ (24 ವರ್ಷ 347 ದಿನಗಳು) ಹೊಂದಿದ್ದ ದಾಖಲೆಯನ್ನು ಮುರಿದಿದ್ದಾರೆ. ಈ ಮೂಲಕ ಒಂದೇ ಪಂದ್ಯದಲ್ಲಿ ಶಫಾಲಿ ಮೂರು ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. (PC: Getty Images)

Published On - 8:21 am, Sun, 6 September 26

Loading...
Unable to load recommendations.
Follow Us