ICC Awards: ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟ ಶಫಾಲಿ ವರ್ಮಾಗೆ ಐಸಿಸಿ ಪ್ರಶಸ್ತಿ

Updated on: Dec 15, 2025 | 6:40 PM

Shafali Verma: ಭಾರತ ಮಹಿಳಾ ತಂಡದ ಶಫಾಲಿ ವರ್ಮಾ, ವಿಶ್ವಕಪ್ ತಂಡದಲ್ಲಿ ಮೊದಲು ಆಯ್ಕೆಯಾಗದೆ, ನಂತರ ಗಾಯದಿಂದಾಗಿ ತಂಡಕ್ಕೆ ಸೇರಿಕೊಂಡು, ಫೈನಲ್‌ನಲ್ಲಿ 87 ರನ್ ಗಳಿಸಿ ಚಾಂಪಿಯನ್ ಆಗಲು ಪ್ರಮುಖ ಪಾತ್ರ ವಹಿಸಿದರು. ಈ ಅದ್ಭುತ ಪ್ರದರ್ಶನಕ್ಕಾಗಿ ಅವರಿಗೆ ನವೆಂಬರ್ ತಿಂಗಳ ಐಸಿಸಿ ಮಹಿಳಾ ಆಟಗಾರ್ತಿ ಪ್ರಶಸ್ತಿ ಲಭಿಸಿದೆ. ಅವರ ಬ್ಯಾಟಿಂಗ್ ಜೊತೆಗೆ ಬೌಲಿಂಗ್ ಕೂಡಾ ಗೆಲುವಿಗೆ ನೆರವಾಯಿತು.

1 / 5
ಭಾರತ ಮಹಿಳಾ ತಂಡ ಚೊಚ್ಚಲ ಏಕದಿನ ವಿಶ್ವಕಪ್ ಗೆದ್ದು ತಿಂಗಳುಗಳ ಕಳೆದಿವೆ. ಮೊದಲಿಗೆ ಭಾರತ ವಿಶ್ವಕಪ್ ತಂಡದಲ್ಲಿ ಆಯ್ಕೆಯಾಗದ ಸ್ಫೋಟಕ ಬ್ಯಾಟರ್ ಶಫಾಲಿ ವರ್ಮಾಗೆ ಆ ಬಳಿಕ ಜಾಕ್​ಪಾಟ್ ಹೊಡೆದಿತ್ತು. ತಂಡದ ಆರಂಭಿಕ ಆಟಗಾರ್ತಿ ಪ್ರತೀಕಾ ರಾವಲ್ ಗಾಯಗೊಂಡಿದ್ದರಿಂದ ತಂಡಕ್ಕೆ ಎಂಟ್ರಿಕೊಟ್ಟಿದ್ದ ಶಪಾಲಿ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

2 / 5
ಮಹಿಳಾ ವಿಶ್ವಕಪ್‌ನ ಕೊನೆಯ ಹಂತದಲ್ಲಿ ಟೀಂ ಇಂಡಿಯಾವನ್ನು ಸೇರಿಕೊಂಡ ಶಫಾಲಿ ವರ್ಮಾ, ಸೆಮಿಫೈನಲ್‌ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡದಿದ್ದರೂ, ಫೈನಲ್‌ ಪಂದ್ಯದಲ್ಲಿ ಮಾತ್ರ 78 ಎಸೆತಗಳಲ್ಲಿ 87 ರನ್‌ಗಳ ಇನ್ನಿಂಗ್ಸ್ ಆಡಿದರು. ಶಫಾಲಿ ಅವರ ಈ ಇನ್ನಿಂಗ್ಸ್ ಟೀಂ ಇಂಡಿಯಾದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಇದೀಗ ಆ ಪ್ರದರ್ಶನಕ್ಕೆ ಶಫಾಲಿಗೆ ನವೆಂಬರ್ ತಿಂಗಳ ಐಸಿಸಿ ಮಹಿಳಾ ಆಟಗಾರ್ತಿ ಎಂಬ ಪ್ರಶಸ್ತಿಯೂ ಲಭಿಸಿದೆ.

3 / 5
ಶಫಾಲಿ, ವಿಶ್ವಕಪ್ ಫೈನಲ್‌ನಲ್ಲಿ 87 ರನ್‌ಗಳ ಇನ್ನಿಂಗ್ಸ್‌ ಆಡುವುದರ ಜೊತೆಗೆ ಸ್ಮೃತಿ ಮಂಧಾನ ಅವರೊಂದಿಗೆ ಶತಕದ ಆರಂಭಿಕ ಪಾಲುದಾರಿಕೆಯನ್ನು ಹಂಚಿಕೊಂಡರು . ಫೈನಲ್‌ನಲ್ಲಿ ಶೆಫಾಲಿ ಅವರ ಕೊಡುಗೆ ಕೇವಲ ಬ್ಯಾಟಿಂಗ್‌ಗೆ ಸೀಮಿತವಾಗಿರಲಿಲ್ಲ; ಅವರು ಚೆಂಡಿನಲ್ಲೂ ಅದ್ಭುತ ಪ್ರದರ್ಶನ ನೀಡಿದರು. ಫೈನಲ್‌ನಲ್ಲಿ ಶೆಫಾಲಿ ವರ್ಮಾ ಏಳು ಓವರ್‌ಗಳನ್ನು ಬೌಲಿಂಗ್ ಮಾಡಿ ಮರಿಜಾನ್ನೆ ಕಪ್ಪ್ ಅವರ ವಿಕೆಟ್ ಸೇರಿದಂತೆ 36 ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಪಡೆದರು.

4 / 5
21 ವರ್ಷದ ಶಫಾಲಿ, ಥೈಲ್ಯಾಂಡ್‌ನ ತಿಪ್ಪೈಚಾ ಪುಥಾವೊಂಗ್ ಮತ್ತು ಯುಎಇಯ ಇಶಾ ಓಜಾ ಅವರನ್ನು ಸೋಲಿಸಿ ತಮ್ಮ ಮೊದಲ ತಿಂಗಳ ಆಟಗಾರ್ತಿ ಪ್ರಶಸ್ತಿಯನ್ನು ಗೆದಿದ್ದಾರೆ. ಪ್ರಶಸ್ತಿಗೆ ಭಾಜನರಾದ ಬಳಿಕ ಸಂತಸ ವ್ಯಕ್ತಪಡಿಸಿರುವ ಶಫಾಲಿ, ನವೆಂಬರ್ ತಿಂಗಳ ಮಹಿಳಾ ಆಟಗಾರ್ತಿ ಪ್ರಶಸ್ತಿಗೆ ಆಯ್ಕೆಯಾಗಲು ನನಗೆ ನಿಜಕ್ಕೂ ಗೌರವವಾಗಿದೆ. ಈ ಪ್ರಶಸ್ತಿಯನ್ನು ನನ್ನ ತಂಡದ ಸದಸ್ಯರು, ನನ್ನ ಎಲ್ಲಾ ತರಬೇತುದಾರರು, ಕುಟುಂಬ ಮತ್ತು ನನ್ನ ಪ್ರಯಾಣದಲ್ಲಿ ಇಲ್ಲಿಯವರೆಗೆ ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಅರ್ಪಿಸುತ್ತೇನೆ. ನಾವು ಒಂದು ತಂಡವಾಗಿ ಗೆಲ್ಲುತ್ತೇವೆ ಮತ್ತು ಸೋಲುತ್ತೇವೆ. ಈ ಪ್ರಶಸ್ತಿಗೂ ಇದು ಅನ್ವಯಿಸುತ್ತದೆ’ ಎಂದು ಶೆಫಾಲಿ ಹೇಳಿದ್ದಾರೆ.

5 / 5
ಏತನ್ಮಧ್ಯೆ, ಭಾರತದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ನೀಡಿದ ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಸೈಮನ್ ಹಾರ್ಮರ್ ಪುರುಷರ ವಿಭಾಗದಲ್ಲಿ ನವೆಂಬರ್ ತಿಂಗಳ ಅಟಗಾರ ಪ್ರಶಸ್ತಿಯನ್ನು ಪಡೆದರು. ಹಾರ್ಮರ್ ಅವರ ಅದ್ಭುತ ಪ್ರದರ್ಶನವು ದಕ್ಷಿಣ ಆಫ್ರಿಕಾ 25 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಟೆಸ್ಟ್ ಸರಣಿಯನ್ನು ಗೆಲ್ಲಲು ಸಹಾಯ ಮಾಡಿತು.