ತಂಡಕ್ಕೆ ವಾಪಸಾಗೋದು ಬಿಡಿ, ಶಮಿ ಮೈದಾನಕ್ಕಿಳಿಯೋದು ಕೂಡ ಕಷ್ಟ ಎಂದ ಬಿಸಿಸಿಐ
Mohammad Shami fitness update: ಬಿಸಿಸಿಐ ಮೊಹಮ್ಮದ್ ಶಮಿ ಅವರ ಫಿಟ್ನೆಸ್ ಬಗ್ಗೆ ಅಪ್‌ಡೇಟ್ ನೀಡಿದೆ. ಹಿಮ್ಮಡಿ ಗಾಯದಿಂದ ಚೇತರಿಸಿಕೊಂಡರೂ, ನಿರಂತರ ಬೌಲಿಂಗ್‌ನಿಂದ ಶಮಿ ಅವರ ಮೊಣಕಾಲಿನಲ್ಲಿ ಊತ ಉಂಟಾಗಿದೆ. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯಗಳಿಗೆ ಅವರನ್ನು ಆಯ್ಕೆ ಮಾಡಲಾಗಿಲ್ಲ. ಇದಲ್ಲದೆ ಶಮಿ ವಿಜಯ್ ಹಜಾರೆ ಟ್ರೋಫಿ ಮತ್ತು ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುವುದು ಅನುಮಾನ ಎಂದು ವರದಿಯಾಗಿದೆ.
1 / 8
2023 ರ ಏಕದಿನ ವಿಶ್ವಕಪ್ ವೇಳೆ ಇಂಜುರಿಗೆ ತುತ್ತಾಗಿ ಅಂದಿನಿಂದ ಟೀಂ ಇಂಡಿಯಾದಿಂದ ಹೊರಗಿರುವ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ಅವರ ಫಿಟ್ನೆಸ್ ಬಗ್ಗೆ ಬಿಸಿಸಿಐ ಮಾಹಿತಿ ನೀಡಿದೆ. ಶಮಿ ಅವರ ಫಿಟ್ನೆಸ್ ಅಪ್‌ಡೇಟ್ ನೋಡಿದವರಿಗೆ ಒಂದೆಡೆ ಸಂತಸವಾಗಿದ್ದರೆ, ಇನ್ನೊಂದೆಡೆ ಆಘಾತ ಎದುರಾಗಿದೆ.
2 / 8
ಟೀಂ ಇಂಡಿಯಾಕ್ಕೆ ಮರಳುವ ಸಲುವಾಗಿ ದೇಶೀ ಕ್ರಿಕೆಟ್ನಲ್ಲಿ ಸಾಕಷ್ಟು ಬೆವರು ಹರಿಸುತ್ತಿರುವ ಮೊಹಮ್ಮದ್ ಶಮಿಯನ್ನು ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಎರಡು ಟೆಸ್ಟ್ ಪಂದ್ಯಗಳಿಗೆ ತಂಡಕ್ಕೆ ಆಯ್ಕೆ ಮಾಡಲಾಗುವುದು ಎಂದು ಕೆಲವು ದಿನಗಳಿಂದ ಹೇಳಲಾಗುತ್ತಿತ್ತು. ಆದರೀಗ ಬಿಸಿಸಿಐ ನೀಡಿರುವ ಶಮಿ ಅವರ ಫಿಟ್ನೆಸ್ ವರದಿಯನ್ನು ನೋಡಿದವರಿಗೆ ಶಾಕ್ ಆಗಿದೆ.
3 / 8
ಶಮಿ ಅವರ ಫಿಟ್ನೆಸ್ ಬಗ್ಗೆ ಇಂದು ಮಾಹಿತಿ ಹಂಚಿಕೊಂಡಿರುವ ಬಿಸಿಸಿಐ, ಶಮಿ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಆದರೆ ಆಸ್ಟ್ರೇಲಿಯಾ ಪ್ರವಾಸದಲ್ಲಿನ ಕೊನೆಯ ಎರಡು ಟೆಸ್ಟ್‌ಗಳಿಗೆ ಅವರನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ ಎಂದಿದೆ.
4 / 8
ಇದಕ್ಕೆ ಕಾರಣವನ್ನು ನೀಡಿರುವ ಬಿಸಿಸಿಐ ಹಿಮ್ಮಡಿ ಗಾಯದಿಂದ ಬಳಲುತ್ತಿದ್ದ ಶಮಿ, ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿರುವ ವೈದ್ಯಕೀಯ ತಂಡದೊಂದಿಗೆ ತಮ್ಮ ಫಿಟ್‌ನೆಸ್ ಮೇಲೆ ಕೆಲಸ ಮಾಡುತ್ತಿದ್ದು, ಈ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಆದಾಗ್ಯೂ, ಕಳೆದ ಕೆಲವು ದಿನಗಳಿಂದ ಶಮಿ ನಿರಂತರ ಬೌಲಿಂಗ್ ಮಾಡಿದಕ್ಕಾಗಿ ಅವರ ಮೊಣಕಾಲಿನಲ್ಲಿ ಊತ ಕಂಡುಬಂದಿದೆ.
5 / 8
ಹಿಮ್ಮಡಿ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡ ನಂತರ ಶಮಿ ರಣಜಿ ಟ್ರೋಫಿ ಆಡಿದ್ದರು. ಅಲ್ಲಿ ಅವರು 43 ಓವರ್‌ಗಳನ್ನು ಸಹ ಬೌಲ್ ಮಾಡಿದ್ದರು. ಇದರ ನಂತರ, ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯಲ್ಲಿ ಶಮಿ ಬಂಗಾಳದ ಪರ ಎಲ್ಲಾ 9 ಪಂದ್ಯಗಳನ್ನು ಆಡಿದ್ದರು. ಈ ಪಂದ್ಯಗಳಲ್ಲದೆ, ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿಯೂ ಶಮಿ ಸಾಕಷ್ಟು ಬೌಲಿಂಗ್ ಮಾಡಿದ್ದರು.
6 / 8
ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಶಮಿ ಸಿದ್ಧರೆಂದು ಭಾವಿಸಲಾಗಿತ್ತು. ಆದರೆ ನಿರಂತರವಾಗಿ ಬೌಲಿಂಗ್ ಮಾಡಿದ್ದರ ಪರಿಣಾಮವಾಗಿ ಶಮಿ ಅವರ ಎಡ ಮೊಣಕಾಲಿನಲ್ಲಿ ಊತ ಕಂಡುಬಂದಿದೆ. ಇದರಿಂದಾಗಿ ವೈದ್ಯಕೀಯ ತಂಡವು ಆಸ್ಟ್ರೇಲಿಯಾ ಪ್ರವಾಸದಲ್ಲಿನ ಕೊನೆಯ ಎರಡು ಟೆಸ್ಟ್ ಪಂದ್ಯಗಳಿಗೆ ಅವರನ್ನು ಫಿಟ್ ಎಂದು ಪರಿಗಣಿಸಲಿಲ್ಲ ಎಂದು ಬಿಸಿಸಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
7 / 8
ಬಿಸಿಸಿಐನ ಈ ರೀತಿಯ ಹೇಳಿಕೆಯಿಂದ ಶಮಿ ಅವರ ಭವಿಷ್ಯದ ಮೇಲೆ ತೂಗುಗತ್ತಿ ತೂಗಲಾರಂಭಿಸಿದೆ. ಏಕೆಂದರೆ ಮತ್ತೆ ಗಾಯಕ್ಕೆ ತುತ್ತಾಗಿರುವ ಶಮಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡುವುದು ಅನುಮಾನವಾಗಿದೆ. ಶಮಿ ಅವರ ಫಿಟ್ನೆಸ್ ಹೀಗೆಯೇ ಮುಂದುವರಿದರೆ ಅವರು ಇಡೀ ಟೂರ್ನಿಯಲ್ಲಿ ಆಡುವಂತಿಲ್ಲ. ಚೇತರಿಸಿಕೊಳ್ಳುವವರೆಗೂ ಶಮಿ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿರುತ್ತಾರೆ ಎಂದು ಮಂಡಳಿ ತಿಳಿಸಿದೆ.
8 / 8
ಇದು ಚಾಂಪಿಯನ್ಸ್ ಟ್ರೋಫಿಯಲ್ಲಿ ಶಮಿ ಆಯ್ಕೆ ಮೇಲೂ ಪರಿಣಾಮ ಬೀರಬಹುದು. ಆಸ್ಟ್ರೇಲಿಯಾ ಪ್ರವಾಸದ ನಂತರ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯನ್ನು ಆಡಬೇಕಿದ್ದು, ನಂತರ ಚಾಂಪಿಯನ್ಸ್ ಟ್ರೋಫಿ ಕೂಡ ಆಡಲಿದೆ. ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್‌ನಲ್ಲಿ ಶಮಿ ಉತ್ತಮ ಪ್ರದರ್ಶನ ನೀಡಿದ್ದರಿಂದ ಅವರು ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಬಹುದು ನಿರೀಕ್ಷಿಸಲಾಗಿತ್ತು. ಆದರೆ ಅವರ ಪ್ರಸ್ತುತ ಫಿಟ್‌ನೆಸ್ ನೋಡಿದರೆ, ಅವರು ಟೀಮ್ ಇಂಡಿಯಾಕ್ಕೆ ಮರಳುವುದು ಕಷ್ಟಕರವಾಗಿದೆ.