ಕ್ರಿಕೆಟ್​ನಿಂದ ಬೆನ್ ಸ್ಟೋಕ್ಸ್ ಬಿಗ್ ಬ್ರೇಕ್

Ben Stokes: ಇಂಗ್ಲೆಂಡ್ ತಂಡದ ಸ್ಟಾರ್ ಆಲ್​ರೌಂಡರ್ ಬೆನ್ ಸ್ಟೋಕ್ಸ್ ಈ ಬಾರಿಯ ಐಪಿಎಲ್​ಗೆ ಹೆಸರು ನೋಂದಾಯಿಸಿಕೊಂಡಿರಲಿಲ್ಲ. ಇದಕ್ಕೆ ಮುಖ್ಯ ಕಾರಣ ಅವರ ಗಾಯದ ಸಮಸ್ಯೆ ಎಂದು ತಿಳಿದು ಬಂದಿದೆ. ಏಕೆಂದರೆ ಇದೀಗ ನ್ಯೂಝಿಲೆಂಡ್ ವಿರುದ್ಧದ ಸರಣಿಯ ಮುಕ್ತಾಯದ ಬೆನ್ನಲ್ಲೇ ಸ್ಟೋಕ್ಸ್ ಶಸ್ತ್ರಚಿಕಿತ್ಸೆಗಾಗಿ ದೀರ್ಘಾವಧಿಯ ವಿಶ್ರಾಂತಿ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ.

ಝಾಹಿರ್ ಯೂಸುಫ್
|

Updated on: Dec 24, 2024 | 7:53 AM

ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಮೂರು ತಿಂಗಳುಗಳ ಕಾಲ ಕ್ರಿಕೆಟ್ ಅಂಗಳದಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಹ್ಯಾಮಿಲ್ಟನ್‌ನಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ವೇಳೆ ಗಾಯಗೊಂಡಿದ್ದ ಸ್ಟೋಕ್ಸ್ ಇದೀಗ ಸಂಪೂರ್ಣ ವಿಶ್ರಾಂತಿ ಪಡೆದು ಚಿಕಿತ್ಸೆಗೆ ಒಳಗಾಗಲು ನಿರ್ಧರಿಸಿದ್ದಾರೆ.

1 / 6
ಇದೇ ಕಾರಣದಿಂದಾಗಿ ಬೆನ್ ಸ್ಟೋಕ್ಸ್ ಅವರನ್ನು ಮುಂಬರುವ ಚಾಂಪಿಯನ್ಸ್ ಟ್ರೋಫಿಗಾಗಿ ಆಯ್ಕೆ ಮಾಡಲಾಗಿಲ್ಲ. ಅವರ ಬದಲಿಗೆ ಯುವ ಆಲ್​ರೌಂಡರ್ ಜೇಕಬ್ ಬೆಥೆಲ್​ಗೆ ಸ್ಥಾನ ನೀಡಲಾಗಿದೆ. ಇದಕ್ಕೂ ಮುನ್ನ 2023ರ ಏಕದಿನ ವಿಶ್ವಕಪ್ ವೇಳೆಯೂ ಗಾಯದಿಂದ ಬಳಲಿದ್ದ ಅವರು ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

2 / 6
ಆದರೀಗ ಮತ್ತೆ ಮಂಡಿರಜ್ಜು ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ. ಹೀಗಾಗಿ ದೀರ್ಘಾವಧಿಯ ಬ್ರೇಕ್ ತೆಗೆದುಕೊಳ್ಳಲು ಬೆನ್ ಸ್ಟೋಕ್ಸ್ ನಿರ್ಧರಿಸಿದ್ದಾರೆ. ಹೀಗಾಗಿ ಭಾರತದ ವಿರುದ್ಧದ ಏಕದಿನ ಸರಣಿಯಲ್ಲಿ ಬೆನ್ ಸ್ಟೋಕ್ಸ್ ಕಾಣಿಸಿಕೊಳ್ಳುವುದಿಲ್ಲ.

3 / 6
ಹಾಗೆಯೇ ಈ ಬಾರಿಯ ಐಪಿಎಲ್​ಗೂ ಬೆನ್ ಸ್ಟೋಕ್ಸ್ ಹೆಸರು ನೀಡಿರಲಿಲ್ಲ. ಹೀಗಾಗಿ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲೂ ಸ್ಟೋಕ್ಸ್ ಅಬ್ಬರವನ್ನು ಕಣ್ತುಂಬಿಕೊಳ್ಳಲಾಗುವುದಿಲ್ಲ. ಸದ್ಯ ಗಾಯದ ಸಮಸ್ಯೆಯ ಕಾರಣ ವಿಶ್ರಾಂತಿಯಲ್ಲಿರುವ ಸ್ಟೋಕ್ಸ್ ಶೀಘ್ರದಲ್ಲೇ ಮತ್ತೊಮ್ಮೆ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ.

4 / 6
ಈ ಸರ್ಜರಿ ಬಳಿಕ ವಿಶ್ರಾಂತಿ ಮುಂದುವರೆಸಲಿರುವ ಬೆನ್ ಸ್ಟೋಕ್ಸ್ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಅಥವಾ ಜೂನ್​ನಲ್ಲಿ ನಡೆಯಲಿರುವ ಭಾರತದ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯ ಮೂಲಕ ಕಂಬ್ಯಾಕ್ ಮಾಡುವ ಸಾಧ್ಯತೆಯಿದೆ. ಅದುವರೆಗೆ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕರಾಗಿ ಓಲೀ ಪೋಪ್ ಕಾಣಿಸಿಕೊಳ್ಳಲಿದ್ದಾರೆ.

5 / 6
ಚಾಂಪಿಯನ್ಸ್​ ಟ್ರೋಫಿಗೆ ಇಂಗ್ಲೆಂಡ್ ತಂಡ: ಜೋಸ್ ಬಟ್ಲರ್ (ನಾಯಕ), ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಜೇಕಬ್‌ ಬೆಥೆಲ್‌, ಹ್ಯಾರಿ ಬ್ರೂಕ್, ಬ್ರೈಡನ್ ಕಾರ್ಸೆ, ಬೆನ್ ಡಕೆಟ್, ಜೇಮೀ ಓವರ್ಟನ್, ಜಾಮಿ ಸ್ಮಿತ್, ಲಿಯಾಮ್ ಲಿವಿಂಗ್​ಸ್ಟೋನ್, ಆದಿಲ್ ರಶೀದ್, ಜೋ ರೂಟ್ , ಸಾಕಿಬ್ ಮಹಮೂದ್, ಫಿಲ್ ಸಾಲ್ಟ್, ಮಾರ್ಕ್ ವುಡ್.

6 / 6
Follow us
ವಿನೋದ್ ಕಾಂಬ್ಳಿಗೆ ಜೀವನ ಪರ್ಯಂತ ಉಚಿತ ಚಿಕಿತ್ಸೆ ಘೋಷಿಸಿದ ಆಸ್ಪತ್ರೆ..!

ಕಲಬುರಗಿ ಬಂದ್​: ಕಿಡಿಗೇಡಿಗಳಿಂದ ಗೂಂಡಾ ವರ್ತನೆ; ಬೈಕ್ ಜಖಂ

ಬೀದರ್‌ನ ಜಾನುವಾರು ಸಂಶೋಧನೆ ಕೇಂದ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ

ಅಶ್ಲೀಲ ಪದ ಬಳಕೆ ವಿಚಾರ: CT ರವಿ ಧರ್ಮಸ್ಥಳದಲ್ಲಿ ಪ್ರಮಾಣ ಮಾಡ್ಲಿ: ಲಕ್ಷ್ಮೀ

ಶಿವರಾಜ್ ಕುಮಾರ್ ಶಸ್ತ್ರಚಿಕಿತ್ಸೆ: ಅಭಿಮಾನಿಗಳಿಂದ ವಿಶೇಷ ಪೂಜೆ

22 ಫೋರ್, 11 ಸಿಕ್ಸ್: ಕೇವಲ 3 ರನ್​ಗಳಿಂದ ದ್ವಿಶತಕ ಮಿಸ್..!

ಅಮಿತ್​ ಶಾ ಹೇಳಿಕೆ ಖಂಡಿಸಿ ಗದಗ-ಬೆಟಗೇರಿ ಬಂದ್​: ಶಾಲಾ-ಕಾಲೇಜುಗಳಿಗೆ ರಜೆ

ಅಮಿತ್ ಶಾ ಹೇಳಿಕೆ ಖಂಡಿಸಿ ಕಲಬುರಗಿ ಬಂದ್: ಬಸ್​ಗಳಿಲ್ಲದೆ ​​ನಿಲ್ದಾಣ ಖಾಲಿ

‘ಯುಐ’ ಸಿನಿಮಾ ನೋಡಿ ಯಶ್​ಗೆ ಅನಿಸಿದ್ದು ಹೀಗೆ
‘ಯುಐ’ ಸಿನಿಮಾ ನೋಡಿ ಯಶ್​ಗೆ ಅನಿಸಿದ್ದು ಹೀಗೆ
ದೇವಿ ಭುಜದ ಮೇಲೆ ಎರಡು ಚೀಟಿ ಇಟ್ಟ ಚೈತ್ರಾ ಕುಂದಾಪುರ; ನಡೆದಿದ್ದು ಪವಾಡ