ಈ ಬಗ್ಗೆ ಎಂಸಿಜಿ ಕ್ಯುರೇಟರ್ರನ್ನು ಪ್ರಶ್ನಿಸಿದಾಗ, ನಮ್ಮಲ್ಲಿರುವ ಪಿಚ್ಗಳನ್ನು ಮಾತ್ರ ನಾವು ನೀಡಲು ಸಾಧ್ಯ. ಹೀಗಾಗಿ ಇರುವ ಪಿಚ್ ನೀಡಿದ್ದೇವೆ ಎಂದು ತನ್ನ ನಡೆಯನ್ನು ಕ್ಯುರೇಟರ್ ಸಮರ್ಥಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಇದೀಗ ಕಳಪೆ ಗುಣಮಟ್ಟದ ಪಿಚ್ ನೀಡಿರುವ ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್ನ ನಡೆಯ ಬಗ್ಗೆ ಆಕ್ರೋಶಗಳು ವ್ಯಕ್ತವಾಗುತ್ತಿದ್ದು, ಇದನ್ನು ಕ್ರಿಕೆಟ್ ಆಸ್ಟ್ರೇಲಿಯಾ ಹೇಗೆ ಸಮರ್ಥಿಸಿಕೊಳ್ಳಲಿದೆ ಕಾದು ನೋಡಬೇಕಿದೆ.