
ಚೆನ್ನೈನ ಎಂ.ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ಎ ತಂಡದ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಎ ತಂಡದ ಬೌಲರ್ಗಳು ಭರ್ಜರಿ ಪ್ರದರ್ಶನ ನೀಡಿದ್ದಾರೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಸಂಜು ಸ್ಯಾಮ್ಸನ್ ಬೌಲಿಂಗ್ ಆಯ್ದುಕೊಂಡರು. ನಾಯಕ ನಿರೀಕ್ಷೆಯನ್ನು ಹುಸಿಗೊಳಿಸದಂತೆ ದಾಳಿ ಸಂಘಟಿಸಿದ ಯುವ ವೇಗಿಗಳು ನ್ಯೂಜಿಲೆಂಡ್ ಬ್ಯಾಟ್ಸ್ಮನ್ಗಳನ್ನು ಇಕ್ಕಟಿಗೆ ಸಿಲುಕಿಸಿದರು.

ಅದರಲ್ಲೂ ಟೀಮ್ ಇಂಡಿಯಾ ಟಿ20 ತಂಡದಿಂದ ಹೊರಬಿದ್ದಿರುವ ಶಾರ್ದೂಲ್ ಠಾಕೂರ್ ಭರ್ಜರಿ ಬೌಲಿಂಗ್ ಮೂಲಕ ಗಮನ ಸೆಳೆದರು. 8.2 ಓವರ್ಗಳನ್ನು ಎಸೆದ ಶಾರ್ದೂಲ್ ಕೇವಲ 32 ರನ್ ನೀಡಿ 4 ವಿಕೆಟ್ ಕಬಳಿಸಿದರು.

ಮತ್ತೊಂದೆಡೆ ಶಾರ್ದೂಲ್ಗೆ ಸಾಥ್ ನೀಡಿದ ವೇಗಿ ಕುಲ್ದೀಪ್ ಸೇನ್ ಕೂಡ ನ್ಯೂಜಿಲೆಂಡ್ ಎ ತಂಡ ಬ್ಯಾಟ್ಸ್ಮನ್ಗಳನ್ನು ಪೆವಿಲಿಯನ್ ಹಾದಿ ತೋರಿಸಿದರು. ಅದರಂತೆ 7 ಓವರ್ಗಳನ್ನು ಬೌಲ್ ಮಾಡಿದ ಕುಲ್ದೀಪ್ ಸೇನ್ ಕೇವಲ 30 ರನ್ ನೀಡಿ 3 ವಿಕೆಟ್ ಕಬಳಿಸಿದರು.

ಇನ್ನು ಕುಲ್ದೀಪ್ ಯಾದವ್ 1 ವಿಕೆಟ್ ಪಡೆದರೆ, ಸ್ಪೀಡ್ ಮಾಸ್ಟರ್ ಉಮ್ರಾನ್ ಮಲಿಕ್ 7 ಓವರ್ ಬೌಲಿಂಗ್ ಮಾಡಿ ಕೇವಲ 27 ರನ್ ನೀಡಿ ಮಿಂಚಿದರು. ಪರಿಣಾಮ ನ್ಯೂಜಿಲೆಂಡ್ 7 ಬ್ಯಾಟ್ಸ್ಮನ್ಗಳನ್ನು ವೇಗಿಗಳು ಪೆವಿಲಿಯನ್ಗೆ ಕಳುಹಿಸಿದರೆ, ಸ್ಪಿನ್ನರ್ 1 ವಿಕೆಟ್ ಪಡೆದರು. ಇನ್ನು ಇಬ್ಬರು ಆಟಗಾರರು ರನೌಟ್ಗೆ ಬಲಿಯಾದರು.

ಪರಿಣಾಮ ನ್ಯೂಜಿಲೆಂಡ್ ಎ ತಂಡವು 40.2 ಓವರ್ಗಳಲ್ಲಿ 167 ರನ್ಗಳಿಗೆ ಸರ್ವಪತನ ಕಂಡಿತು. ತಂಡದ ಪರ ಮೈಕೆಲ್ ರಿಪ್ಪನ್ 104 ಎಸೆತಗಳಲ್ಲಿ 61 ರನ್ ಬಾರಿಸಿದ್ದು ಗರಿಷ್ಠ ಸ್ಕೋರ್.

ಟೀಮ್ ಇಂಡಿಯಾ ಎ ಪ್ಲೇಯಿಂಗ್ 11: ಪೃಥ್ವಿ ಶಾ , ರುತುರಾಜ್ ಗಾಯಕ್ವಾಡ್ , ಸಂಜು ಸ್ಯಾಮ್ಸನ್ (ನಾಯಕ) , ರಾಹುಲ್ ತ್ರಿಪಾಠಿ , ರಜತ್ ಪಾಟಿದಾರ್ , ಶಹಬಾಜ್ ಅಹ್ಮದ್ , ರಿಷಿ ಧವನ್ , ಶಾರ್ದೂಲ್ ಠಾಕೂರ್ , ಕುಲದೀಪ್ ಯಾದವ್ , ಉಮ್ರಾನ್ ಮಲಿಕ್ , ಕುಲ್ದೀಪ್ ಸೇನ್
Published On - 2:55 pm, Thu, 22 September 22