Updated on: Sep 22, 2022 | 7:53 PM
ಮೊಹಾಲಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ 20 ಸೋತ ನಂತರ, ಟೀಮ್ ಇಂಡಿಯಾ ನಾಗ್ಪುರದಲ್ಲಿ ಪ್ರತಿದಾಳಿ ನಡೆಸುವ ತಯಾರಿಯಲ್ಲಿದೆ. ಆದರೆ ಈ ಭರವಸೆಗಳಿಗೆ ಹಿನ್ನಡೆಯಾಗುವಂತಿದೆ. ವಾಸ್ತವವಾಗಿ, ಎರಡನೇ ಟಿ20 ಮೇಲೆ ಮಳೆಯ ನೆರಳು ಸುಳಿದಾಡುತ್ತಿದೆ.
ಗುರುವಾರ ನಾಗ್ಪುರದಲ್ಲಿ ಧಾರಾಕಾರ ಮಳೆ ಸುರಿದಿದ್ದು, ಈ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಅಭ್ಯಾಸವನ್ನು ರದ್ದುಗೊಳಿಸಬೇಕಾಯಿತು. ನಾಗ್ಪುರದಲ್ಲಿ ಇದೇ ರೀತಿಯ ವಾತಾವರಣವಿದ್ದಲ್ಲಿ ಎರಡನೇ ಟಿ20 ಪಂದ್ಯ ಮಳೆಯಲ್ಲಿ ಕೊಚ್ಚಿ ಹೋಗಬಹುದು.
ಅಂದಹಾಗೆ, ನಾಗ್ಪುರದಲ್ಲಿ ಶುಕ್ರವಾರ ಮಳೆಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಹವಾಮಾನ ವೆಬ್‌ಸೈಟ್‌ಗಳ ಪ್ರಕಾರ, ಮೋಡ ಕವಿದ ವಾತಾವರಣವಿರಲಿದ್ದು, ಶುಕ್ರವಾರ ನಾಗ್ಪುರದಲ್ಲಿ ಮಳೆಯಾಗಬಹುದು ಎಂದು ವರದಿಯಾಗಿದೆ. ಹೀಗಾಗಿ ಸರಣಿ ಗೆಲ್ಲುವ ಟೀಂ ಇಂಡಿಯಾದ ಆಸೆಗೆ ಕಗ್ಗತ್ತಲು ಆವರಿಸಿದೆ.
ಮೊಹಾಲಿ ಟಿ20ಯಲ್ಲಿ ಟೀಂ ಇಂಡಿಯಾ 208 ರನ್ ಗಳಿಸಿ ಸೋಲನುಭವಿಸಿತ್ತು. ಆಸ್ಟ್ರೇಲಿಯ 4 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್ ನಷ್ಟಕ್ಕೆ ಗೆಲುವು ಸಾಧಿಸಿತ್ತು. ಈಗ ನಾಗ್ಪುರ ಟಿ20 ರದ್ದಾದರೆ ಹೈದರಾಬಾದ್ನಲ್ಲಿ ನಡೆಯಲ್ಲಿರುವ 3ನೇ ಟಿ20ಪಂದ್ಯದಲ್ಲಿ ಗೆಲ್ಲುವ ಮೂಲಕ ಟೀಂ ಇಂಡಿಯಾ ಸರಣಿಯನ್ನು ಸಮಬಲಗೊಳಿಸಬೇಕಾಗುತ್ತದೆ.
ಟೀಂ ಇಂಡಿಯಾದ ಬಗ್ಗೆ ಮಾತನಾಡುವುದಾದರೆ, ಆಡುವ XI ನಲ್ಲಿ ಬದಲಾವಣೆ ಖಚಿತ ಎಂದು ಊಹಿಸಲಾಗಿದೆ. ವರದಿಗಳ ಪ್ರಕಾರ, ಜಸ್ಪ್ರೀತ್ ಬುಮ್ರಾ ಎರಡನೇ ಟಿ 20 ನಲ್ಲಿ ಆಡಲಿದ್ದು, ಉಮೇಶ್ ಯಾದವ್ ಅವರನ್ನು ತಂಡದಿಂದ ಕೈಬಿಡಲಾಗುತ್ತದೆ.